ಮುಸ್ಲಿಂ ಯುವತಿಯನ್ನು ಪ್ರೀತ್ಸಿದ್ದಕ್ಕೆ ನಡುರಸ್ತೆಯಲ್ಲಿ ಬಿತ್ತು ಹೆಣ

Public TV
1 Min Read
YOUTH MURDER

ನವದೆಹಲಿ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ಯುವತಿಯ ಕುಟುಂಬದ ಸದಸ್ಯರು ನಡುರಸ್ತೆಯಲ್ಲಿ ಕತ್ತು ಸೀಳಿ ಕೊಲೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಅಂಕಿತ್(23) ಕೊಲೆಯಾದ ಯುವಕ. ಅಂಕಿತ್, ಸಲೀಮಾ ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಆಕೆಯ ಕುಟುಂಬದವರು ಆತನನ್ನು ನಡುರಸ್ತೆಯಲ್ಲಿ ಬರ್ಬರವಾಗಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ಘಟನೆಯಿಂದ ಸಲೀಮಾ ಗಾಬರಿಗೊಂಡು ತನ್ನ ಮನೆಗೆ ಹೋಗಲು ಭಯಗೊಂಡು ನಾರಿನೀಕೆತನ್‍ನಲ್ಲಿ ವಾಸಿಸುತ್ತಿದ್ದಾರೆ.

Murder Ankit 9

ಮದುವೆ ಆಗಲು ನಿರ್ಧರಿಸಿದ್ವಿ: ನಾವಿಬ್ಬರು ಮದುವೆ ಆಗಲು ನಿರ್ಧರಿಸಿದ್ದೇವು. ಅಂಕಿತ್‍ನನ್ನು ಭೇಟಿಯಾಗಲು ನಾನು ನನ್ನ ಮನೆಯಿಂದ ಹೊರಟಿದ್ದೆ. ಆಗ ಅಂಕಿತ್ ನ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ತಿಳಿಯಿತು. ಈ ಕೃತ್ಯದಲ್ಲಿ ನನ್ನ ಕುಟುಂಬದವರು ಭಾಗಿಯಾಗಿದ್ದು, ನನ್ನ ಮಾವನೇ ಈ ಎಲ್ಲ ಕೃತ್ಯಕ್ಕೆ ಕಾರಣ ಎಂಬುದು ತಿಳಿದು ಬಂತು. ನಾನು ಅಂಕಿತ್‍ನನ್ನು ಭೇಟಿಯಾಗಲು ಹೊರಟಾಗ ದಾರಿ ಮಧ್ಯೆ ನನಗೆ ಅಂಕಿತ್ ಕೊಲೆ ಆಗಿರುವ ಬಗ್ಗೆ ತಿಳಿಯಿತು ಎಂದು ಸಲೀಮಾ ಹೇಳಿದ್ದಾರೆ.

Murder Ankit 6

ಮನೆಗೆ ಹೋಗಲ್ಲ: ಸದ್ಯ ಸಲೀಮಾ ದೆಹಲಿಯ ಹರಿನಗರದಲ್ಲಿರುವ ನಾರಿನಿಕೇತನ್ ನಲ್ಲಿ ವಾಸವಾಗಿದ್ದಾರೆ. ಮತ್ತೆ ಪೊಲೀಸರು ಸಲೀಮಾಗೆ ತನ್ನ ಮನೆಗೆ ಹಿಂತಿರುಗುವೆಯಾ ಎಂದು ಕೇಳಿದ್ದಕ್ಕೆ ಆಕೆ ನಿರಾಕರಿಸಿದ್ದಾರೆ. ಸಲೀಮಾ ತನ್ನ ಸಂಬಂಧಿಕರ ಜೊತೆಗೂ ಮಾತನಾಡುತ್ತಿಲ್ಲ ಹಾಗೂ ತುಂಬಾ ಮೌನವಾಗಿ ಒಂದು ಕಡೆ ಇರುತ್ತಾರೆ ಎಂದು ವರದಿಯಾಗಿದೆ.

Murder Ankit

ಕುಟುಂಬದವರು ನಾಪತ್ತೆ: ಈ ಘಟನೆ ನಂತರ ಸಲೀಮಾ ಕುಟುಂಬದವರು ತಲೆಮರೆಸಿಕೊಂಡಿದ್ದು, ಅವರ ಮನೆಗೂ ಕೂಡ ಬೀಗ ಹಾಕಿದ್ದಾರೆ. ಅಕ್ಕಪಕ್ಕದ ಮನೆಯವರನ್ನು ಕೇಳಿದ್ದಾಗ ಅವರು ಯಾರೊಂದಿಗೂ ಸಲುಗೆಯಿಂದ ಇರುತ್ತಿರಲಿಲ್ಲ. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅಂಕಿತ್ ಹಾಗೂ ಸಲೀಮಾ ಪ್ರೀತಿ ಅವರಿಗೆ ಮೊದಲಿನಿಂದಲ್ಲೂ ತಿಳಿದಿತ್ತು. ಈ ವಿಚಾರಕ್ಕಾಗಿ ಸಲೀಮಾನನ್ನು ಸಾಕಷ್ಟು ಬಾರಿ ದೈಹಿಕವಾಗಿ ಕಿರುಕುಳ ನೀಡಿದ್ದರು. ಅಷ್ಟೇ ಅಲ್ಲದೇ ಸಲೀಮಾ 17 ವರ್ಷವಿರುವಾಗಲೇ ಆಕೆಯನ್ನು ಬೇರೆಯವರ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು. ಆದರೆ ಅಂಕಿತ್ ಜೊತೆಗೆ ಪ್ರೀತಿಯನ್ನು ತಿಳಿದು ಆ ಹುಡುಗನ ಮನೆಯವರು ಮದುವೆಯಾಗಲು ನಿರಾಕರಿಸಿದರು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.

Murder Ankit 7

Murder Anikt 2

Murder Ankit 5

Murder Ankit 8

MURDER ANKIT COLLAGE

Share This Article
Leave a Comment

Leave a Reply

Your email address will not be published. Required fields are marked *