– ಚಲಿಸುತ್ತಿದ್ದ ಕಾರಿನಲ್ಲಿ ಮೂರು ಗಂಟೆ ಅತ್ಯಾಚಾರ
– ನಾಲ್ವರು ಕಾಮುಕರಲ್ಲಿ ಓರ್ವ ಅಪ್ರಾಪ್ತ
ಮುಂಬೈ: ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದ ಪೋಸ್ಟ್ ಆಧರಿಸಿ 22 ವರ್ಷದ ಯುವಕನ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ವಿಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದ ಪೋಸ್ಟ್ ವ್ಯಕ್ತಿಯ ಮೇಲೆ ಅತ್ಯಾಚಾರ ಎಸಗಲು ಸಹಾಯ ಮಾಡಿದೆ ಎಂಬುದು ಇನ್ನೂ ಅಚ್ಚರಿಯ ಸಂಗತಿಯಾಗಿದೆ. ಚಲಿಸುತ್ತಿದ್ದ ಕಾರಿನಲ್ಲಿ ಯುವಕನ ಮೇಲೆ ಅತ್ಯಾಚಾರ ಎಸಗಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಪ್ರಕರಣದ ಸಂಬಂಧ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಅಡಿ ಮುಂಬೈ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಒಬ್ಬ ಅಪ್ರಾಪ್ತನಾಗಿದ್ದು, ಬಾಲಾಪರಾಧಿಗಳ ಕಾರಾಗೃಹಕ್ಕೆ ಕಳುಹಿಸಲಾಗಿದೆ.
Advertisement
Advertisement
ಈ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿ, ಯುವಕ ಮುಂಬೈನಲ್ಲಿ ವಾಸವಿದ್ದು, ನಗರದ ಹೊರವಲಯದಲ್ಲಿರುವ ರೆಸ್ಟೋರೆಂಟಿಗೆ ಭೇಟಿ ನೀಡಿ ಅಲ್ಲಿ ಸೆಲ್ಫಿ ತೆಗೆದುಕೊಂಡಿದ್ದ ಚಿತ್ರಗಳನ್ನು ಇನ್‍ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದನ್ನು ಆಧರಿಸಿ ನಾಲ್ವರು ಆರೋಪಿಗಳು ಸಂತ್ರಸ್ತ ಯುವಕ ತಂಗಿರುವ ಜಾಗಕ್ಕೆ ತೆರಳಿದ್ದಾರೆ ಎಂದು ವಿವರಿಸಿದ್ದಾರೆ.
Advertisement
ವಿಚಾರಣೆ ವೇಳೆ ಆರೋಪಿಗಳು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್‍ಸ್ಟಾಗ್ರಾಂ ನಲ್ಲಿ ಹಾಕಿದ ಫೋಟೊ ಆಧರಿಸಿ ವ್ಯಕ್ತಿ ಇರುವ ಲೊಕೇಶನ್ ಹುಡುಕಿದೆವು. ಆಗ ನಾಲ್ವರೂ ರೆಸ್ಟೊರೆಂಟಿಗೆ ತೆರಳಿದೆವು, ನಾವು ನಿಮ್ಮನ್ನು ಇನ್‍ಸ್ಟಾಗ್ರಾಂ ನಲ್ಲಿ ಫಾಲೋ ಮಾಡುತ್ತಿದ್ದೇವೆ. ನಿಮ್ಮ ಅಭಿಮಾನಿಗಳಾಗಿದ್ದೇವೆ ಎಂದು ಪರಿಚಯಿಸಿಕೊಂಡೆವು ಎಂದು ಹೇಳಿದ್ದಾರೆ.
ನಂತರ ಬೈಕ್ ರೈಡಿಗೆ ಹೊರಟಿದ್ದೇವೆ ನಮ್ಮ ಜೊತೆ ಬಂದು ಕಂಪನಿ ಕೊಡಿ ಎಂದು ಆರೋಪಿಯನ್ನು ಮನವೊಲಿಸಿದೆವು. ಇದಕ್ಕೆ ಸಂತ್ರಸ್ತ ಒಪ್ಪಿದ, ಸುಮಾರು 20 ನಿಮಿಷಗಳ ಬೈಕ್ ರೈಡ್ ನಂತರ ಸಂತ್ರಸ್ತನನ್ನು ಮುಂಬೈ ವಿಮಾನ ನಿಲ್ದಾಣದ ಬಳಿಯ ಹೋಟೆಲಿಗೆ ಕರೆದೊಯ್ದೆವು. ನಂತರ ಕಾರಿನಲ್ಲಿ ಕರೆದೊಯ್ದು ಮೂರು ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿ ಯುವಕನನ್ನು ರಸ್ತೆ ಬಳಿ ಬಿಟ್ಟು ಹೊರಟೆವು ಎಂದು ವಿವರಿಸಿದ್ದಾರೆ.
ನಂತರ ಸಂತ್ರಸ್ತ ಪೋಷಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು, ಪೊಲೀಸರಿಗೂ ಕರೆ ಮಾಡಿ ಘಟನೆ ಕುರಿತು ವಿವರಿಸಿ ದೂರು ದಾಖಲಿಸಿದ್ದಾರೆ. ಮರುದಿನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರು ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ನಂತರ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಇನ್ನೊಬ್ಬ ಅಪ್ರಾಪ್ತನಾಗಿದ್ದು ಬಾಲಾಪರಾಧಿಗಳ ಕಾರಾಗೃಹದಲ್ಲಿಡಲಾಗಿದೆ.
ಘಟನೆ ಕುರಿತು ವಿ.ಬಿ.ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಮಾಧುರಿ ಪೊಕ್ಲೆ ಮಾಹಿತಿ ನೀಡಿ, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಎಲ್ಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ. ತನಿಖೆ ನಡೆಯುತ್ತಿದೆ, ಸಂತ್ರಸ್ತನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಕ್ಲೆ ತಿಳಿಸಿದ್ದಾರೆ.