ಮುಂಬೈ: 19 ವರ್ಷದ ಲಿವಿಂಗ್ ಪಾರ್ಟ್ನರ್ನನ್ನು ಕೊಂದು ಬೆಂಕಿ ಹಚ್ಚಿದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ಕಲಾಣ್ನಲ್ಲಿ ನಡೆದಿದೆ.
ನೀರಜ್ ಮೌರ್ಯ(20) ಅರೆಸ್ಟ್ ಆದ ಯುವಕ. ಇತ್ತೀಚೆಗೆ ಕಲ್ಯಾಣ್ನ ಬಾಲ್ಯಾನ್ನಲ್ಲಿ ಅರ್ಧ ದೇಹ ಸುಟ್ಟಿದ್ದ ಯುವತಿಯ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ವಿಷಯ ಬೆಳಕಿಗೆ ಬಂತು ಎಂದು ಹಿರಿಯ ಪೊಲೀಸ್ ಅಧಿಕಾರಿ ವೆಂಕಟ್ ಅಂದಾಲೇ ಹೇಳಿದ್ದಾರೆ.
Advertisement
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಆ ಏರಿಯಾದಲ್ಲಿ ತನಿಖೆ ನಡೆಸಿದ್ದೆವು. ಈ ವೇಳೆ ಸ್ಥಳೀಯರು ನೀರಜ್ ಜೊತೆ ಯುವತಿ ಮೋಹಿನಿ ಗುಪ್ತಾ ಕೆಲವು ದಿನಗಳಿಂದ ಮೋಹಿನಿ, ನೀರಜ್ ಜೊತೆ ಇರುವುದನ್ನು ನಾವು ನೋಡಿಲ್ಲ ಎಂದು ಹೇಳಿದ್ದಾರೆ ಅಂತಾ ವೆಂಕಟ್ ಅಂದಾಲೇ ತಿಳಿಸಿದ್ದಾರೆ.
Advertisement
ಸ್ಥಳೀಯರ ಹೇಳಿಕೆ ಪಡೆದ ನಂತರ ಪೊಲೀಸರು ನೀರಜ್ನನ್ನು ವಶಕ್ಕೆ ಪಡೆದುಕೊಂಡರು. ವಿಚಾರಣೆ ವೇಳೆ ನೀರಜ್, ಮೋಹಿನಿ ಉತ್ತರ ಪ್ರದೇಶದ ಗಾಜಿಯಾಬಾದ್ನ ನಿವಾಸಿಯಾಗಿದ್ದು, ನಾವಿಬ್ಬರು ಲಿವಿಂಗ್ ರಿಲೇಷನ್ಶಿಪ್ನಲ್ಲಿ ಇದ್ದೆವು. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಹಾಗಾಗಿ ಕೊಲೆ ಮಾಡಿದೆ ಎಂದು ಹೇಳಿದ್ದಾನೆ.
Advertisement
ಇತ್ತೀಚೆಗೆ ನನ್ನ ಹಾಗೂ ಮೋಹಿನಿ ನಡುವೆ ವಾದ ನಡೆಯಿತು. ಇದರಿಂದ ನಾನು ಕೋಪಗೊಂಡು ಮಫ್ಲರ್ ನಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದೆ. ಬಳಿಕ ಆಕೆಯ ದೇಹವನ್ನು ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿದೆ ಎಂದು ನೀರಜ್ ಪೊಲೀಸರ ಬಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸದ್ಯ ಕಲ್ಯಾಣ್ ಪೊಲೀಸರು ಆರೋಪಿ ನೀರಜ್ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಹಾಗೂ 201 (ಸಾಕ್ಷಿ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.