ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಪ್ಯಾನಿಕ್ ಬಟನ್ ಒತ್ತಿದ ಯುವಕನಿಗೆ ಬಿಎಂಆರ್‌ಸಿಎಲ್ (BMRCL) ಅಧಿಕಾರಿಗಳು 5,000 ರೂ. ದಂಡ ವಿಧಿಸಿದ್ದಾರೆ.
ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕಾರಣ ಇಲ್ಲದೇ 23 ವರ್ಷದ ಯುವಕ ಪ್ಯಾನಿಕ್ ಬಟನ್ ಒತ್ತಿದ್ದಾನೆ. ಮಂಗಳವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೆಟ್ರೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಯುವಕನಿಗೆ ದಂಡ ಹಾಕಲಾಗಿದೆ. ಪ್ಯಾನಿಕ್ ಬಟನ್ ಒತ್ತಿದ ಪರಿಣಾಮ 10 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತ ಆಗಿತ್ತು. ಬಳಿಕ ಮೆಟ್ರೋ ಸಂಚಾರ ಆರಂಭ ಆರಂಭಿಸಿತ್ತು.