ಶಿವಮೊಗ್ಗ: ಹೆತ್ತ ತಾಯಿ ಕಣ್ಣೆದುರಿನ ದೇವರು ಎಂಬ ಮಾತಿದೆ. ಈ ದೇವರಿಗಾಗಿ ಏನೆಲ್ಲಾ ಕಾಣಿಕೆ ನೀಡುವವರು ನಮ್ಮ ನಡುವೆ ಇದ್ದಾರೆ. ಶಿವಮೊಗ್ಗದ ಒಬ್ಬ ಯುವಕ ಅನಾರೋಗ್ಯಕ್ಕೆ ಒಳಗಾದ ತನ್ನ ತಾಯಿಗಾಗಿ ಒಂದು ಹಾಡನ್ನು ಮಾಡಿ ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದಾರೆ.
Advertisement
ನಾ ಕಂಡ ಬೆಳಕು ನೀನಮ್ಮ… ಮಡಿಲ ಮಗುವು ನಾನಮ್ಮ…. ಎಂದು ಹಾಡುತ್ತಿರುವ ಯುವಕನ ಹೆಸರು ರಾಹುಲ್ ಡಿ. ರಾಜ್. ಶಿವಮೊಗ್ಗದ ಈ ಯುವಕ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ನಾ ಕಂಡ ಬೆಳಕು ಎಂಬ ಹಾಡನ್ನು ತನ್ನ ಅಮ್ಮ ಸೇರಿ ಎಲ್ಲಾ ಅಮ್ಮಂದಿರಿಗೂ ಅರ್ಪಿಸಿದ್ದಾರೆ.
Advertisement
Advertisement
ರಾಹುಲ್ ಅಮ್ಮ ಹೇಮಾವತಿ ಹತ್ತು ವರ್ಷದ ಹಿಂದೆ ಅನಾರೋಗ್ಯಕ್ಕೆ ಗುರಿಯಾಗಿದ್ದರು. ಇನ್ನು ಒಂದೆರಡು ವರ್ಷ ಮಾತ್ರ ಅವರು ಬದುಕುವುದು ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದರು. ಅಂದಿನಿಂದ ಅಮ್ಮನ ಬಗ್ಗೆ ವಿಶೇಷ ಕಾಳಜಿ ಮಾಡತೊಡಗಿದ್ದು, ಅಮ್ಮ ಚೆನ್ನಾಗಿದ್ದಾರೆ. ಮನೆಯಲ್ಲಿ ಅಮ್ಮನಿಗೆ ಎಲ್ಲಾ ಕೆಲಸ ಮಾಡಿಕೊಡುವ ರಾಹುಲ್ ಈಗ ಅಮ್ಮನಿಗಾಗಿ ಹಾಡು ರಚಿಸಿ, ಹಾಡಿ, ವಿಡಿಯೋ ಮಾಡಿ ಯೂಟೂಬ್‍ನಲ್ಲಿ ಹಾಕಿದ್ದಾರೆ.
Advertisement
ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಹೋಮಿಯೋಪತಿ ಓದುತ್ತಿರುವ ರಾಹುಲ್ ಬಾಲ್ಯದಿಂದಲೇ ಸಂಗೀತ ಕಲಿತವರಲ್ಲ. ಆದರೆ, ಅಮ್ಮನಿಗೆ ವಿಶೇಷ ಕಾಣಿಕೆ ನೀಡಬೇಕು ಎಂಬ ಹಂಬಲದಲ್ಲಿ ಈ ಹಾಡು ರಚಿಸಿದ್ದಾರೆ.