ಕಲಬುರಗಿ: ಮದುವೆ ಮೆರವಣಿಗೆಯಲ್ಲಿ ಯುವಕನೋರ್ವ ಡ್ಯಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟಿರುವ ವಿಡಿಯೋ ವೈರಲ್ ಆಗಿದೆ.
24 ವರ್ಷದ ಅಶೋಕ್ ಸಾವನ್ನಪ್ಪಿದ ಯುವಕ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೊಸೂರು ಗ್ರಾಮದಲ್ಲಿ ಘಟನೆ ನಡೆದಿದೆ. ನವೆಂಬರ್ 30ರಂದು ಅಶೋಕ್ ತನ್ನ ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಿದ್ದನು. ಮೆರವಣಿಗೆ ವೇಳೆ ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದನು. ಅಲ್ಲಿದವರಿಗಿಂತ ಸ್ವಲ್ಲ ಚೆನ್ನಾಗಿಯೇ ಅಶೋಕ್ ಸ್ಟಂಟ್ ಮಾಡಿ ಹೆಜ್ಜೆ ಹಾಕುತ್ತಿದ್ದನು. ಅಶೋಕ್ ತಲೆ ಕೆಳಗಾಗಿಸಿ ಕೈ ಮೇಲೆ ನಡೆಯೋದು, ಜಂಪ್ ಹೊಡೆಯುವ ದೃಶ್ಯಗಳು ಆತನ ಸ್ನೇಹಿತರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದರು.
Advertisement
Advertisement
ತಲೆ ಕೆಳಗಾಗಿ ಡ್ಯಾನ್ಸ್ ಮಾಡಿದ್ದ ಅಶೋಕ್, ನೆಲಕ್ಕೆ ತಲೆ ತಾಗಿಸಿ ಸುತ್ತು ಹಾಕುತ್ತಿದ್ದನು. ಈ ವೇಳೆ ಅಲ್ಲಿಯೇ ಕುಸಿದು ಬಿದ್ದ ಅಶೋಕ್ ಸಾವನ್ನಪ್ಪಿದ್ದಾನೆ. ಈ ಎಲ್ಲ ದೃಶ್ಯಗಳು ಮೊಬೈಲಿನಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿವೆ. ಸ್ಥಳೀಯಮಟ್ಟದಲ್ಲಿ ವಿಡಿಯೋ ವೈರಲ್ ಆಗಿದೆ.