ವಿಜಯಪುರ: ಡ್ಯಾಂ ಪ್ರವೇಶ ದ್ವಾರದಲ್ಲಿ ಬುರ್ಖಾಧಾರಿ ಆತಂಕ ಮೂಡಿಸಿದ ಸುದ್ದಿ ವಿಜಯಪುರದ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂ ಆವರಣದಲ್ಲಿ ನಡೆದಿದೆ.
ಬೆಳಗ್ಗೆ ನಸುಕಿನ ಜಾವದಲ್ಲೇ ಬುರ್ಖಾ ಧರಿಸಿ ಡ್ಯಾಂ ಆವರಣಕ್ಕೆ ಹೋಗುತ್ತಿದ್ದ ವ್ಯಕ್ತಿ ಕಂಡು ಸ್ಥಳದಲ್ಲಿದ್ದ ಪೊಲೀಸರು ಸೇರಿದಂತೆ ಹಲವರು ದಂಗಾಗಿದ್ದಾರೆ. ಇಷ್ಟು ಬೇಗ ಡ್ಯಾಂ ಒಳಗೆ ಪ್ರವೇಶ ನೀಡಲ್ಲ ಎಂದು ಪ್ರವೇಶ ದ್ವಾರದ ಬಳಿ ತಪಾಸಣೆ ವೇಳೆ ಪೊಲೀಸರು ಹೇಳಿದ್ದಾರೆ.
ಈ ವೇಳೆ ಬುರ್ಖಾ ಧರಿಸಿದ್ದ ಮಹಿಳೆಯಲ್ಲ, ಪುರುಷ ಎಂದು ಪೊಲೀಸರಿಗೆ ಸಂಶಯ ವ್ಯಕ್ತವಾಗಿದೆ. ಬುರ್ಖಾಧಾರಿಯ ಧ್ವನಿಯಿಂದ ಉಂಟಾಗಿದ್ದ ಸಂಶಯದ ಹಿನ್ನೆಲೆ ಪೊಲೀಸರು ಬುರ್ಖಾಧಾರಿ ಮೇಲೆ ನಿಗಾ ವಹಿಸಿದ್ದಾರೆ. ಕೆಲ ಸಮಯದ ಬಳಿಕ ಬುರ್ಖಾಧಾರಿ ಮುಳ್ಳು ಕಂಟಿಗಳಾಚೆ ಹೋಗಿ ಬುರ್ಖಾ ತೆಗೆದು ಆಚೆ ಬಂದಿದ್ದಾರೆ. ಇದನ್ನೂ ಓದಿ: ಗಾಂಜಾ ಸಾಗಾಟ ಎಂದು ತನಿಖೆ ಮಾಡಿದ ಪೊಲೀಸರಿಗೆ ತಿಳಿಯಿತು ಕೊಲೆ ರಹಸ್ಯ
ಆಗ ಬುರ್ಖಾಧಾರಿ ಮಹಿಳೆಯಲ್ಲಾ ಪುರುಷ ಎಂಬುದು ಪೊಲೀಸರಿಗೆ ಬಹಿರಂಗವಾಗಿದೆ. ಆಗ ಬುರ್ಖಾಧರಿಸಿದ್ದು ಯುವಕ ಎಂಬುದನ್ನು ಕಂಡುಹಿಡಿದ ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯಲ್ಲಿ ತಿಳಿದಿದ್ದೇನು?
ಆಲಮಟ್ಟಿ ಪೊಲೀಸರ ವಿಚಾರಣೆಯಲ್ಲಿ ತಾನು ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ ಎಂದು ಯುವಕ ಹೇಳಿಕೊಂಡಿದ್ದಾನೆ. ನನ್ನ ಹೆಸರು ಕಿಶೋರ್ ಮಲ್ಲಿಕಾರ್ಜುನ್ ಸ್ವಾಮಿ. ನನ್ನಲ್ಲಿ ಹೆಣ್ತನ ಬೆಳೆಯುತ್ತಿದೆ. ಹೀಗಾಗಿ ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದುತ್ತಿದ್ದೇನೆ.
ನನಗೆ ಮದುವೆ ಬೇಡ ಎಂದರೂ ಮನೆಯಲ್ಲಿ ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಮನೆ ಬಿಟ್ಟು ಬಂದಿದ್ದಾಗಿ ವಿಚಾರಣೆಯಲ್ಲಿ ಕೆಲ ವಿಚಾರಗಳನ್ನ ಕಿಶೋರ್ ಹೇಳಿದ್ದಾನೆ. ಬೆಂಗಳೂರಿನ ಬೇಕರಿ ಒಂದರಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಗಾಂಜಾ ಗ್ಯಾಂಗ್ ಹಿಡಿಯಲು ಹೋಗಿ ಭೀಕರ ಅಪಘಾತ: ಸ್ವಗ್ರಾಮಕ್ಕೆ ಆಗಮಿಸಿದ ಪಿಎಸ್‍ಐ ಮೃತದೇಹ
ಸದ್ಯ ಪೊಲೀಸರ ವಿಚಾರಣೆ ಮುಂದುವರಿದಿದ್ದು, ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.