ಚೆನ್ನೈ: ಇಲ್ಲೊಬ್ಬ ಯುವಕ 1 ರೂ. ನಾಣ್ಯಗಳನ್ನು ಕಳೆದ 3 ವರ್ಷಗಳಿಂದ ಸಂಗ್ರಹಿಸಿ ಇದೀಗ 2.6 ಲಕ್ಷ ರೂ. ನೀಡಿ ತನ್ನ ಕನಸಿನ ಬೈಕ್ ಖರಿದಿಸುವ ಮೂಲಕ ಸುದ್ದಿಯಾಗಿದ್ದಾನೆ.
ತಮಿಳುನಾಡಿನ ಸೇಲಂ ಮೂಲದ ವಿ.ಬೂಬತಿ ಬೈಕ್ ಖರೀದಿಸಿದ ಯುವಕ. ಬೂಬತಿ ಬಿಸಿಎ ಪದವೀಧರರಾಗಿದ್ದು, 4 ವರ್ಷಗಳ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ನಂತರ ಯೂಟ್ಯೂಬ್ ಚಾನೆಲ್ ಆರಂಭಿಸಿದ.
Advertisement
Advertisement
ಬೂಬತಿ ಮೂರು ವರ್ಷಗಳ ಹಿಂದೆ ಬೈಕ್ ಖರೀದಿಸುವ ಕನಸನ್ನು ಕಂಡಿದ್ದ. ಆದರೆ ಈತನ ಬಳಿ ಹಣವಿರಲಿಲ್ಲ. ಆದರೂ ಧೃತಿಗೆಡದ ಆತ, ಮೂರು ವರ್ಷದಿಂದ ಅದಕ್ಕಾಗಿ ಹಣವನ್ನು ಉಳಿತಾಯ ಮಾಡಲು ಪ್ರಾರಂಭಿಸಿದ. ತನ್ನ ಪಿಗ್ಗಿ ಬ್ಯಾಂಕ್‍ನಲ್ಲಿ ಪ್ರತಿದಿನ 1 ರೂ. ನಾಣ್ಯಗಳನ್ನು ಹಾಕುತ್ತಿದ್ದ. ಹೀಗೆ 1 ರೂ. ನಾಣ್ಯವನ್ನು ಸಂಗ್ರಹಿಸಿ ಒಟ್ಟು 2.6ಲಕ್ಷ ರೂ. ಹಣವನ್ನು ಉಳಿತಾಯ ಮಾಡಿದ್ದಾನೆ.
Advertisement
Advertisement
ನಂತರ ಬೂಬತಿ ಈ ನಾಣ್ಯವನ್ನೆಲ್ಲ ಬೈಕ್ ಶೋರೂಂಗೆ ತೆಗೆದುಕೊಂಡು ಹೋಗಿದ್ದಾನೆ. ತಾನು ಖರೀದಿಸುವ ಹೊಸ ಬಜಾಜ್ ಡೊಮಿನಾರ್ ಬೈಕ್‍ಗೆ ಈ ನಾಣ್ಯಗಳನ್ನೆಲ್ಲ ನೀಡಿದ್ದಾನೆಲ್ಲಿದನ್ನು ಕಂಡು ಶೋ ರೂಂ ಸಿಬ್ಬಂದಿ ದಂಗಾಗಿದ್ದಾರೆ. ಇದನ್ನೂ ಓದಿ: ಉಕ್ರೇನ್ ಅಧ್ಯಕನ ಹೇಳಿಕೆ ಪ್ರಸಾರ ಮಾಡಬೇಡಿ- ಎಚ್ಚರಿಕೆ ಕೊಟ್ಟ ರಷ್ಯಾ
ನಂತರ ಬೈಕ್ ಶೋರೂಂನ ಸಿಬ್ಬಂದಿ ಆ ನಾಣ್ಯಗಳನ್ನು ಏಣಿಸಲು ಪ್ರಾರಂಭಿಸಿದ್ದಾರೆ. ಸತತ 10 ಗಂಟೆಗಳ ಕಾಲ 1ರೂ. ನಾಣ್ಯದ 2.6ಲಕ್ಷ ರೂ.ಗಳನ್ನು ಎಣಿಕೆ ಮಾಡಿ ಬೂಬತಿಗೆ ಬೈಕ್‍ನ್ನು ನೀಡಿದ್ದೇವೆ ಎಂದು ಭಾರತ್ ಏಜೆನ್ಸಿಯ ವ್ಯವಸ್ಥಾಪಕ ಮಹಾವಿಕ್ರಾಂತ್ ಹೇಳಿದರು. ಇದನ್ನೂ ಓದಿ: ಹಾವೇರಿಯಲ್ಲಿ ಹಿಜಬ್ ತೆಗೆದು SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರು