ಪಾಟ್ನಾ: ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಡೆದ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ಶ್ಲಾಘಿಸಿರುವ ಬಿಹಾರದ ಸಚಿವ ರಾಮ್ ಸೂರತ್ ರೈ, ಭಾರತೀಯರ ಜೀವ ಉಳಿಸಿದ ಶ್ರೇಯಸ್ಸನ್ನು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ್ದಾರೆ.
ये बिहार सरकार में राजस्व मंत्री रामसूरत राय हैं जिनके अनुसार अगर आप ज़िंदा हैं तो इसके लिए प्रधान मंत्री @narendramodi का शुक्रगुज़ार होना चाहिए @ndtvindia pic.twitter.com/MDN3FzZbUr
— manish (@manishndtv) July 31, 2022
Advertisement
ನೀವಿಂದು ಬದುಕಿದ್ದರೆ ಅದರ ಕ್ರೆಡಿಟ್ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅವರು ಲಸಿಕೆಯನ್ನು ಅಭಿವೃದ್ಧಿಪಡಿಸಿ, ದೇಶದ ಜನರಿಗೆ ಉಚಿತವಾಗಿ ನೀಡಿದರು. ಅದರಿಂದಾಗಿಯೇ ನೀವೆಲ್ಲರೂ ಇಂದು ಬದುಕಿದ್ದೀರಿ ಎಂದು ಈಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,692 ಮಂದಿಗೆ ಕೊರೊನಾ ಸೋಂಕು – ಇಬ್ಬರು ಸಾವು
Advertisement
Advertisement
ಕೊರೊನಾ ಕಾರಣದಿಂದಾಗಿ ಅನೇಕ ದೇಶಗಳು ಈಗಲೂ ಆರ್ಥಿಕ ಪರಿಸ್ಥಿತಿ ಎದುರು ಹೋರಾಡುತ್ತಿವೆ. ಆದರೆ ಭಾರತದಲ್ಲಿ ಆರ್ಥಿಕತೆ ಬಲಪಡಿಸುವ ನಿಟ್ಟಿನಲ್ಲಿ ಅತ್ಯಂತ ವೇಗವಾಗಿ ಕೆಲಸಗಳು ಸಾಗುತ್ತಿವೆ.
Advertisement
ನರೇಂದ್ರ ಮೋದಿ ಅವರು ಲಸಿಕೆಯನ್ನು ತಂದುಕೊಡದೆ ಇದ್ದಿದ್ದರೇ ಮತ್ತು ಅದನ್ನು ಜನರಿಗೆ ಉಚಿತವಾಗಿ ನೀಡದೇ ಇದ್ದಿದ್ದರೆ ಪರಿಸ್ಥಿತಿ ಬಹಳ ಕೆಟ್ಟದಾಗಿರುತ್ತಿತ್ತು. ನಮ್ಮ ಕುಟುಂಬಗಳು ಮತ್ತು ಸ್ನೇಹಿತರ ನಡುವೆಯೂ ಕೋವಿಡ್ ಸಾವುಗಳನ್ನು ನಾವೆಲ್ಲ ಕಂಡಿದ್ದೇವೆ. ನಾನು ನನ್ನ ಬಾಮೈದುನನ್ನೂ ಕಳೆದುಕೊಂಡಿದ್ದೇನೆ ಎಂದು ನೆನೆದಿದ್ದಾರೆ. ಇದನ್ನೂ ಓದಿ: ಎನ್‌ಕೌಂಟರ್ ವೇಳೆ ಭಯೋತ್ಪಾದಕರ ಗುಂಡೇಟಿಗೆ ಮಡಿದ ಸೇನಾ ಶ್ವಾನ
ಈ ವರ್ಷದ ಜುಲೈ 17ರಂದು ಭಾರತ 200 ಕೋಟಿ ಡೋಸ್ ಲಸಿಕೆ ನೀಡಿ ಮೈಲಿಗಲ್ಲಿಗೆ ಹೆಸರಾಗಿದೆ. ಲಸಿಕಾ ಅಭಿಯಾನ ಆರಂಭವಾದ 18 ತಿಂಗಳ ಬಳಿಕ ಈ ಸಾಧನೆ ಮಾಡಲಾಗಿದೆ. ಸ್ವಾತಂತ್ರ‍್ಯ ದಿನಾಚರಣೆಗೂ ಮುನ್ನ ಕೇಂದ್ರ ಸರ್ಕಾರವು `ಕೋವಿಡ್ ಲಸಿಕೆ ಅಮೃತ ಮಹೋತ್ಸವ’ದ ವಿಶೇಷ ಅಭಿಯಾನ ಘೋಷಿಸಿದೆ. ಜುಲೈ 15 ರಿಂದ ಸೆಪ್ಟೆಂಬರ್ 30ರ ವರೆಗೆ 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಉಚಿತ ಮುಂಜಾಗ್ರತಾ ಡೋಸ್ (ಬೂಸ್ಟರ್ ಡೋಸ್) ಸಹ ನೀಡಲಾಗುತ್ತಿದೆ ಎಂದು ವರದಿಯಾಗಿದೆ.