ಹುಬ್ಬಳ್ಳಿ: ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇರೋದು ಸತ್ಯ. ಹೀಗಾಗಿ ವಡಾ ಪಾವ್, ಮಿರ್ಚಿ ಮಾರೋದು ತಪ್ಪೇನಿಲ್ಲ. ಪ್ರಧಾನಿ ನರೇಂದ್ರ ಮೋದಿಯವರೇ ಚಹಾ ಮಾರಿದ್ದಾರೆ. ಯುವಕರು ಯಾವುದಾದರೂ ಕೆಲಸ ಮಾಡಲಿ ಕಾಯಕವೇ ಕೈಲಾಸವೆಂದು ಎಂಎಲ್‍ಸಿ ತೇಜಸ್ವಿನಿಗೌಡ ಹೇಳಿದ್ದಾರೆ.
Advertisement
ಈ ಬಗ್ಗೆ ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇರುವುದು ಸತ್ಯ. ಹೀಗಂತ ಯುವಕರು ಖಾಲಿ ಕೂರುವ ಬದಲಿಗೆ ವಡಾ ಪಾವ್, ಮಿರ್ಚಿ ಮಾರುವುದರಲ್ಲಿ ತಪ್ಪೇನಿಲ್ಲ. ಮಾಡುವ ಕೆಲಸದಲ್ಲಿ ದೊಡ್ಡದು, ಚಿಕ್ಕದು ಎನ್ನುವ ತಾರತಮ್ಯದ ಬದಲು ಮಾಡುವ ಕೆಲಸದಲ್ಲಿ ಶ್ರದ್ಧೆಯಿಟ್ಟು ದುಡಿಯಬೇಕು. ನಮ್ಮ ಪ್ರಧಾನಿ ಮೋದಿಯವರೇ ಚಹ ಮಾರಿದ್ದಾರೆ ಇದರಲೇನು ತಪ್ಪಿದೆ ಎಂದಿದ್ದಾರೆ. ಇದನ್ನೂ ಓದಿ: ಪತ್ರಕರ್ತರು ಏನೇ ಬರೆದ್ರೂ ಅರೆಸ್ಟ್ ಮಾಡುವಂತಿಲ್ಲ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ವಕ್ತಾರ
Advertisement
Advertisement
ಪ್ರತ್ಯೇಕ ರಾಜ್ಯದ ಕೂಗು ವಿಚಾರವಾಗಿ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯದ ಕೂಗಿಗೆ ನಮ್ಮ ಬೆಂಬಲವಿಲ್ಲ. ನಾವು ರಾಜ್ಯವನ್ನು ಒಡೆಯುವವರಲ್ಲ ಒಂದು ಮಾಡುವವರೆಂದರು. ಇನ್ನೂ ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಗೊಂದಲ ವಿಚಾರವಾಗಿ ಮಾತನಾಡಿ, ಬಿಜೆಪಿ ಸರ್ಕಾರ ಯಾವತ್ತೂ ಕೂಡ ಇದನ್ನು ಸಮರ್ಥಿಸಿಕೊಂಡಿಲ್ಲ. ಲೋಪದೋಷ ಕಂಡುಬಂದ ಬಗ್ಗೆ ಸರಿಪಡಿಸುವ ಕೆಲಸ ನಡೆದಿದೆ. ಪಠ್ಯ ಪುಸ್ತಕ ವಿವಾದಕ್ಕೆ ಸದ್ಯ ತೆರೆಬಿದ್ದಿದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಉದಯ್‌ಪುರ ಬರ್ಬರ ಹತ್ಯೆ ಎನ್‌ಐಎ ಹೆಗಲಿಗೆ – ಪಾತಕಿಗಳಿಗೆ ಐಸಿಸ್ ಲಿಂಕ್?