ಬೆಳಗಾವಿ: ಡ್ರಗ್ಸ್ ಅಮಲಿನಲ್ಲಿ ಯುವತಿಯೊಬ್ಬಳು ಬೆತ್ತಲಾಗಿ ಬೈಕ್ ರೈಡ್ ಮಾಡಿದ ಘಟನೆ ನಗರದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಈ ಘಟನೆಯು ಎರಡು ದಿನಗಳ ಹಿಂದೆ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದ್ದು, ಯುವತಿಯ ಗುರುತು ಪತ್ತೆಯಾಗಿಲ್ಲ. ಯುವತಿಯನ್ನು ಪತ್ತೆ ಹಚ್ಚಿ ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿಯ ಜನತೆ ಒತ್ತಾಯಿಸಿದ್ದಾರೆ.
ಯುವತಿಯು ಸ್ಕೂಟಿಯ ಹಿಂಬದಿಯಲ್ಲಿ ಬೆತ್ತಲಾಗಿ ಕುಳಿತಿದ್ದಳು. ಮಾರ್ಗ ಮಧ್ಯೆ ಸ್ಕೂಟಿ ನಿಲ್ಲಿಸಿ ಮುಂದೆ ಕುಳಿತಿದ್ದ ಯುವಕನನ್ನು ಕೆಳಗಿಳಿಸಿ ತಾನೇ ರೈಡ್ ಮಾಡಿಕೊಂಡು ಹೋಗಿದ್ದಾಳೆ. ಈ ದೃಶ್ಯವನ್ನು ಕಟ್ಟಡವೊಂದರ ಮೇಲೆ ಇದ್ದ ಕೆಲ ಯುವಕರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಯುವತಿ ಚೆನ್ನಮ್ಮ ಮಾರ್ಗವಾಗಿ, ಕ್ಲಬ್ ರೋಡ್‍ಗೆ ಬಂದ ಬಳಿಕ ಒಬ್ಬಳೇ ರೈಡ್ ಮಾಡಿಕೊಂಡು ಹಿಂಡಲಗಾ ರಸ್ತೆಯಲ್ಲಿ ತೆರಳಿದ್ದಾಳೆ. ಡ್ರಗ್ ಅಮಲಿನಲ್ಲಿ ಬೆಟ್ಟಿಂಗ್ ಕಟ್ಟಿ ಯುವತಿ ಮತ್ತು ಗೆಳೆಯರ ಗುಂಪೊಂದು ಈ ರೀತಿ ವರ್ತಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಬೇರೆ ರಾಜ್ಯಗಳಿಂದ ಬಂದಿರುವ ಕೆಲವು ವಿದ್ಯಾರ್ಥಿಗಳು ಇಂತಹ ಬೆಟ್ಟಿಂಗ್ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಪೊಲೀಸರು ಗಸ್ತನ್ನು ಬಿಗಿಗೊಳಿಸಬೇಕು. ಈ ಮೂಲಕ ಇಂತಹ ಘಟನೆಗಳನ್ನು ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಎಪಿಎಂಸಿ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಘಟನೆ ನಡೆದು ಎರಡು ದಿನಗಳು ಕಳೆದರೂ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿಲ್ಲ. ಯುವತಿಯನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ವಿಧಿಸಬೇಕು. ಮತ್ತೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕಿ ಎಂಬ ಒತ್ತಾಯ ಕೇಳಿ ಬಂದಿದೆ.