ಬೆಂಗಳೂರು: ನಿಶ್ಚಿತಾರ್ಥದ ಬಳಿಕ ಚಾಕು ತೋರಿಸಿ ಯುವತಿಯ ಮೇಲೆ ಆಕೆಯ ಭಾವಿ ಪತಿಯೇ ಅತ್ಯಾಚಾರವೆಸಗಿದ ಘಟನೆ ನಗರದಲ್ಲಿ ನಡೆದಿದೆ.
ಆರೋಪಿ ಭಾವಿ ಪತಿಯನ್ನು ಸುರೇಶ್ ಎನ್ನಲಾಗಿದೆ. ಈತ ನಿಶ್ಚಿತಾರ್ಥ ಮಾಡಿಕೊಂಡು ನಂತ್ರ ಮದುವೆಯಾಗೋದಿಲ್ಲ ಅಂತ ಮದುವೆ ರದ್ದುಗೊಳಿಸಿದ್ದನು. ನಂತ್ರ ಆಕೆಯನ್ನ ಮತ್ತೆ ಮದುವೆಯಾಗ್ತೀನಿ ಅಂತ ಹೇಳಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಚಾಕು ತೋರಿಸಿ ಅತ್ಯಾಚಾರವೆಸಗಿದ್ದನು. ಸ್ವಲ್ಪ ಸಮಯದ ಬಳಿಕ ಆಕೆ ಗರ್ಭಿಣಿ ಅಂತ ಗೊತ್ತಾದಾಗ ಒತ್ತಾಯ ಪೂರ್ವಕವಾಗಿ ಅಬಾರ್ಷನ್ ಮಾಡಿಸಿದ್ದನು ಎಂದು ನೊಂದ ಯುವತಿ ದೂರಿದ್ದಾರೆ.
Advertisement
ಸದ್ಯ ನೊಂದ ಯುವತಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.