ತುಮಕೂರು: ಋತುಚಕ್ರದ (Menstruation) ಹೊಟ್ಟೆ ನೊವು ತಾಳಲಾಗದೆ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ತುಮಕೂರು (Tumakuru) ತಾಲೂಕಿನ ಬ್ಯಾತ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಗುಲ್ಬರ್ಗ (Kalaburagi) ಮೂಲದ ಕೀರ್ತನಾ (19) ನೇಣಿಗೆ ಶರಣಾದ ಯುವತಿ ಎಂದು ತಿಳಿದುಬಂದಿದೆ. ಗುಲ್ಬರ್ಗದ ಕಲಗಿ ತಾಲೂಕಿನ ಸಾಲಹಳ್ಳಿಯ ಕೀರ್ತನಾ ಕೆಲಸ ಅರಸಿ ತುಮಕೂರಿನಲ್ಲಿದ್ದ ಚಿಕ್ಕಪ್ಪನ ಮನೆಯಲ್ಲಿ ಬಂದಿದ್ದಳು. ಕೆಲಸ ಸಿಗದ ಕಾರಣ ಮನೆಯಲ್ಲೆ ವಾಸವಾಗಿದ್ದಳು. ಇದನ್ನೂ ಓದಿ: ಗಂಡನ ಕೊಲೆ ಕೇಸ್ ಪ್ರಮುಖ ಸಾಕ್ಷಿಯಾಗಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ
ಚಿಕ್ಕಪ್ಪನ ಮನೆಯಲ್ಲಿ ಯಾರು ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮುಟ್ಟಿನ ಕಾಲದ ಹೊಟ್ಟೆ ನೋವಿನ ಕಾರಣಕ್ಕೆ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದುವೆ ಹೆಸರಲ್ಲಿ ರೇಪ್, ಗರ್ಭಪಾತಕ್ಕೆ ಒತ್ತಾಯ – ಕೇರಳದ ಕಾಂಗ್ರೆಸ್ ಉಚ್ಚಾಟಿತ ಶಾಸಕ ಅರೆಸ್ಟ್

