ಹಾವೇರಿ: ಇತ್ತೀಚೆಗೆ ಗ್ರಾಮೀಣ ಭಾಗದ ಯುವಕರು ತಾವು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ತಮ್ಮ ಪ್ರತಿಭೆಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಹಾವೇರಿ (Haveri) ತಾಲೂಕಿನ ಗುಡಿಸಲಕೊಪ್ಪ ಗ್ರಾಮದ ಯುವಕನೊಬ್ಬ ಮೈಕ್ರೋ ಆರ್ಟ್ (Micro Art) ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ (India Book of Record) ಸಾಧನೆ ಮಾಡಿದ್ದಾನೆ.
ಗ್ರಾಮದ ಪರಮೇಶ ಬಂಡಿ ಎಂಬ ಯುವಕ ಅಕ್ಕಿಕಾಳಿನಲ್ಲಿ ನಾಡಗೀತೆ (Naadageete) ಬರೆದು ಈ ಸಾಧನೆ ಮಾಡಿದ್ದಾನೆ. 80 ನಿಮಿಷದಲ್ಲಿ 144 ಅಕ್ಕಿಕಾಳಿನಿಂದ ನಾಡಗೀತೆ ಬರೆದು ವರ್ಲ್ಡ್ ರೆಕಾರ್ಡ್ ಆಫ್ ಇಂಡಿಯಾ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಡೆಯುವ ಮೂಲಕ ಹೊಸ ಇತಿಹಾಸ ಬರೆದಿದ್ದಾನೆ.
ಅಷ್ಟೇ ಅಲ್ಲದೇ 92 ಅಕ್ಕಿಕಾಳಿನಲ್ಲಿ ವಂದೇ ಮಾತರಂ ಗೀತೆ ಬರೆದಿದ್ದಾನೆ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ 10 ರಿಂದ 20 ಸಾವಿರ ಅಕ್ಕಿಕಾಳಿನಲ್ಲಿ ಜೈ ಶ್ರೀ ರಾಮ್ ಎಂದು ಬರೆಯಲು ತಯಾರಿ ನಡೆಸಿದ್ದಾನೆ. ಇದನ್ನೂ ಓದಿ: ಹುಲಿ ಉಗುರು ಲಾಕೆಟ್ ಕೇಸ್ – ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರು
ಈ ಮೈಕ್ರೋ ಆರ್ಟ್ ಕಲಾವಿದನ ಸಾಧನೆ ನಿಜಕ್ಕೂ ನೋಡುಗರ ಗಮನ ಸೆಳೆಯುತ್ತಿದೆ. ಅದರಲ್ಲೂ ಅಕ್ಕಿಕಾಳಿನಲ್ಲಿ ಬರೆಯುವುದು ಸುಲಭದ ಮಾತಲ್ಲ. ಅಕ್ಕಿ ಕಾಳಿನಲ್ಲಿ ತನ್ನ ಕೈಚಳಕವನ್ನು ತೋರಿಸಿದ್ದಾನೆ. ಓದಿದ್ದು ಪಿಯುಸಿ ಆದರೂ ಮೈಕ್ರೋ ಆರ್ಟ್ ಮೂಲಕ ಹೆಸರು ಮಾಡಿದ್ದಾನೆ. ಇದನ್ನೂ ಓದಿ: ಎಂಜಿನಿಯರಿಂಗ್, ವೆಟರಿನರಿ, ಫಾರ್ಮ್ ಸೈನ್ಸ್, ಆರ್ಕಿಟೆಕ್ಟರ್ ಕೋರ್ಸುಗಳಿಗೆ ಪ್ರವೇಶಾತಿ ಅಕ್ಟೋಬರ್ 30ಕ್ಕೆ ವಿಶೇಷ ಸುತ್ತು: KEA
Web Stories