ಮೈಸೂರು: ಕ್ರಿಕೆಟ್ (Cricket) ಆಡಲು ಹೋಗಿದ್ದ ಯುವಕ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಮೈಸೂರು (Mysuru) ಜಿಲ್ಲೆಯ ಹೆಚ್‌ಡಿ ಕೋಟೆಯ (HD Kote) ವಡ್ಡರಗುಡಿಯಲ್ಲಿ ನಡೆದಿದೆ.
ವಡ್ಡರಗುಡಿ ಗ್ರಾಮದ ಯುವಕ ದಿವ್ಯಾ ಕುಮಾರ್ ಅನುಮಾನಸ್ಪಾದವಾಗಿ ಮೃತಪಟ್ಟ ಯುವಕ. ಬೀಚನಹಳ್ಳಿಯಲ್ಲಿ 9 ದಿನಗಳ ಹಿಂದೆ ನಡೆದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜೆಪಿ ವಾರಿಯರ್ಸ್ ವಿರುದ್ಧ ಸಿಕ್ಸ್ ಹೊಡೆದು ದಿವ್ಯಾ ಕುಮಾರ್ ತನ್ನ ತಂಡವನ್ನು ಗೆಲ್ಲಿಸಿದ್ದ. ಮ್ಯಾಚ್ ಗೆದ್ದ ಬಳಿಕ ಪಾರ್ಟಿ ಮುಗಿಸಿ ಬೈಕ್ ನಲ್ಲಿ ಊರಿಗೆ ಹೊರಟಿದ್ದ. ಇದನ್ನೂ ಓದಿ: ಐಪಿಎಲ್‌ಗೆ ಸೆಡ್ಡು ಹೊಡೆಯಲು ಸೌದಿ ಪ್ಲ್ಯಾನ್ – ʻಗ್ರ್ಯಾಂಡ್ ಸ್ಲಾಮ್ʼ ಕ್ರಿಕೆಟ್‌ಗೆ 4,347 ಕೋಟಿ ಹೂಡಿಕೆಗೆ ಚಿಂತನೆ
ನಡು ರಸ್ತೆಯಲ್ಲಿ ಬಿದ್ದಿದ್ದನ್ನ ನೋಡಿ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದರು. ಆರಂಭದಲ್ಲಿ ಇದು ಬೈಕ್ ಅಪಘಾತ ಎಂದು ಕುಟುಂಬಸ್ಥರು ಅಂದುಕೊಂಡಿದ್ದರು. ನಂತರ ಬೈಕ್‌ಗೆ ಏನೂ ಆಗದಿದ್ದಕ್ಕೆ ಯಾರೋ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಅನುಮಾನ ಮೂಡಿದೆ. ಜಿಲ್ಲಾಸ್ಪತ್ರೆಯಲ್ಲಿ 9 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ದಿವ್ಯಾ ಕುಮಾರ್ ಶುಕ್ರವಾರ ಮೃತಪಟ್ಟಿದ್ದಾನೆ. ಕ್ರಿಕೆಟ್ ವಿಚಾರಕ್ಕೆ ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತದ ಟೆಸ್ಟ್ ಟೀಂ ಕ್ಯಾಪ್ಟನ್ ಆಗಿ ಮುಂದುವರಿಯಲಿದ್ದಾರೆ ರೋಹಿತ್ ಶರ್ಮಾ – ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ನಾಯಕತ್ವಕ್ಕೆ ಬೂಸ್ಟ್!