ವಿಜಯಪುರ: ವ್ಯಕ್ತಿಯೊಬ್ಬ 13 ಜನ ಸ್ನೇಹಿತರ ಕ್ರೆಡಿಟ್ ಕಾರ್ಡ್ (Credit Card) ಬಳಸಿ ಲಂಕ್ಷಾಂತರ ರೂ. ಸಾಲ (Loan) ಮಾಡಿ, ಸಾಲ ತೀರಿಸು ಎಂದಾಗ ವಿಡಿಯೋ ಮಾಡಿ ಕೀಟನಾಶಕ ಸೇವಿಸಿರುವುದು ವಿಜಯಪುರದಲ್ಲಿ (Vijayapura) ನಡೆದಿದೆ.
ಆದರ್ಶ ನಗರದ ನಿವಾಸಿ ಶೋಭಿತ ಬಳ್ಳೊಳಗಿಡದ್ ಎಂಬಾತ ಗೆಳೆಯರ ಕ್ರೆಡಿಟ್ ಕಾರ್ಡ್ ಬಳಸಿ ದುಬಾರಿ ಬೆಲೆಯ ಮೊಬೈಲ್, ಗ್ಯಾಜೆಟ್ಸ್ ಖರೀದಿಸುತ್ತಿದ್ದ. ಹೀಗೆ ಗೆಳೆಯರ ಕ್ರೆಡಿಟ್ ಕಾರ್ಡ್ ಬಳಸಿ 50 ಲಕ್ಷ ರೂ. ಸಾಲ ಮಾಡಿದ್ದ. ಇದರಿಂದ ಸ್ನೇಹಿತರು ಸಾಲ ಕಟ್ಟುವಂತೆ ಆತನಿಗೆ ಹಾಗೂ ಆತನ ಕುಟುಂಬದವರಿಗೆ ಹೇಳಿದ್ದರು. ಇದನ್ನೂ ಓದಿ: ಅನಿರ್ದಿಷ್ಟಾವಧಿ ಲಾರಿ ಮುಷ್ಕರ | ರಸ್ತೆಗಿಳಿಯದ ಲಾರಿಗಳು – ಯಾವೆಲ್ಲಾ ಸೇವೆಯಲ್ಲಿ ವ್ಯತ್ಯಯ?
ಇದೇ ವಿಚಾರಕ್ಕೆ ಆತ ವಿಡಿಯೋ ಮಾಡಿ, ಎಲ್ಲರ ಬಳಿ ಕ್ರೆಡಿಟ್ ಕಾರ್ಡ್ ಪಡೆದಿದ್ದೆ. ಈಗ ಎಲ್ಲರೂ ಮನೆಯವರಿಗೆ ಟಾರ್ಚರ್ ಮಾಡ್ತಿದ್ದಾರೆ. ನನ್ನಿಂದ ಯಾರಿಗೂ ಟಾರ್ಚರ್ ಆಗಬಾರದು. ಎಲ್ಲರೂ ಆರಾಮ್ ಆಗಿರಿ, ಇದು ನನಗೆ ಲಾಸ್ಟ್ ಆಪ್ಷನ್ ಎಂದು ಕ್ರಿಮಿನಾಶಕದ ಬಾಟೆಲ್ ತೋರಿಸಿದ್ದಾನೆ. ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಶೋಭಿತನ ತಂದೆ, ಆದರ್ಶ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ 13 ಜನ ಗೆಳೆಯರ ಹೆಸರನ್ನು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 5 ಕೋಟಿ ಮೌಲ್ಯದ ಮಾದಕ ವಸ್ತು ವಶ – ಇಬ್ಬರು ಅರೆಸ್ಟ್