ಬೆಂಗಳೂರು: ಕೋಣನ ಕುಂಟೆ ನಿವಾಸಿ ಶರತ್ (Sharat Murder Case) ಕೊಲೆ ಪ್ರಕರಣವು ಕಬ್ಬನ್ ಪಾರ್ಕ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟ್ (Charmadi Ghat) ನಲ್ಲಿ ಶರತ್ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಕಬ್ಬನ್ ಪಾರ್ಕ್ ಪೊಲೀಸರು ಪ್ರಮುಖ ಆರೋಪಿಗಳಾದ ಛಲಪತಿ, ಶರತ್, ಜೊತೆಗೆ ಕರೆದುಕೊಂಡು ಸ್ಥಳಕ್ಕೆ ಹೋಗಿದ್ದಾರೆ.
Advertisement
ಕೊಲೆ ಆರೋಪಿಗಳು ದಿನಕ್ಕೊಂದು ಜಾಗ ತೋರಿಸುತ್ತಿದ್ದಾರೆ. ಚಾರ್ಮಾಡಿ ಘಾಟ್ ನಲ್ಲಿ ಆಳವಾದ ಕಂದಕಗಳು, ದಟ್ಟವಾದ ಪೂದೆಗಳ ಜಾಗಗಳನ್ನು ತೋರಿಸಿದ್ದಾರೆ. ಹೀಗಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಶರತ್ ಮೃತದೇಹ ಮಾತ್ರ ಸಿಗುತ್ತಿಲ್ಲ. ತಾವು ತೋರಿಸಿದ ಕಡೆ ಶವ ಸಿಗದೇ ಇದ್ದಾಗ, ಮತ್ತೊಂದು ಜಾಗ ಇರಬಹುದು ಎನ್ನುತ್ತಿದ್ದಾರೆ. ಹೀಗಾಗಿ ಆರೋಪಿಗಳು ಹೇಳಿದ ಜಾಗಗಳಲ್ಲಿ ಪೊಲೀಸರ ತಂಡಗಳು ತೀವ್ರ ಹುಡುಕಾಟ ನಡೆಸುತ್ತಿವೆ. ಎಷ್ಟೇ ಹುಡುಕಾಟ ನಡೆಸಿದರೂ ಮೃತದೇಹದ ಸಣ್ಣ ಕುರುಹು ಸಹ ಸಿಗದಿರುವುದರಿಂದ ಪೊಲೀಸರು ಕಂಗಾಲಾಗಿದ್ದಾರೆ.
Advertisement
Advertisement
ಏನಿದು ಘಟನೆ..?: ಹಣದ ವಿಚಾರಕ್ಕೆ ಕಳೆದ ಒಂಬತ್ತು ತಿಂಗಳ ಹಿಂದೆ ಆರೋಪಿಗಳು ಶರತ್ ನನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದರು. ನಂತರ ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ ಎಸೆದಿದ್ದರು. ಇದೀಗ ಕೊಲೆ ನಡೆದು 6 ತಿಂಗಳ ನಂತ್ರ ಪ್ರಕರಣ ಬೆಳಕಿಗೆ ಬಂದಿದೆ. ಸಾಲ ಪಡೆದು ಹಿಂದಿರುಗಿಸದೆ ಶರತ್ ಓಡಾಡುತ್ತಿದ್ದರು. ಸಾಲ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಶರತ್ ನನ್ನ 6 ತಿಂಗಳ ಹಿಂದೆಯೇ ಕಿಡ್ನಾಪ್ ಮಾಡಿದ್ದರು. ಬಳಿಕ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟು ಕೊಂದಿರುವುದು ಬೆಳಕಿಗೆ ಬಂದಿದೆ. ಶರತ್‍ನನ್ನ ಅರೆ ನಗ್ನಗೊಳಿಸಿ ಕಟ್ಟಿಹಾಕಿ ಮನಸ್ಸೋ ಇಚ್ಛೆ ಥಳಿಸಿರೋ ವೀಡಿಯೋಗಳು ಕೂಡ ಲಭ್ಯವಾಗಿದೆ.
Advertisement
ಕೊಲೆಯಾಗಿ ತಿಂಗಳು ಕಳೆದ್ರೂ ಯಾರಿಗೂ ಗೊತ್ತಿರಲಿಲ್ಲ. ಅಲ್ಲದೆ ಕೊಲೆಯಾದವನ ಮೊಬೈಲ್ (Mobile) ನಿಂದಲೇ ಪೋಷಕರಿಗೆ ಸಂದೇಶ ರವಾನಿಸಲಾಗಿದೆ. ನಾನು ದುಡಿಯಲು ಹೋಗುತ್ತಿದ್ದೇನೆ ಹುಡುಕಬೇಡಿ ಎಂದು ಆರೋಪಿಗಳೇ ಶರತ್ ಪೋಷಕರಿಗೆ ಮೆಸೇಜ್ ಮಾಡಿದ್ದರು. ಬಳಿಕ ಮೊಬೈಲ್ ಅನ್ನು ಲಾರಿ (Lorry) ಮೇಲೆ ಎಸೆದಿದ್ದರು. ಈ ಲಾರಿ ಮೈಸೂರು ಮಾರ್ಗವಾಗಿ ಸಾಗಿ ಹೊರರಾಜ್ಯಕ್ಕೆ ಪ್ರಯಾಣ ಬೆಳೆಸಿದೆ.
ಇತ್ತ ಮೊಬೈಲ್ ಸ್ವಿಚ್ ಆಫ್ ಆದ ನಂತರ ಪೋಷಕರಿಗೆ ಶರತ್ ಸಂಪರ್ಕವೇ ಇಲ್ಲ. ತನ್ನ ಮಗ ದುಡಿಮೆಗಾಗಿ ಹೊರರಾಜ್ಯದಲ್ಲಿದ್ದಾನೆಂಬ ನಂಬಿಕೆಯಲ್ಲಿದ್ದ ಪೋಷಕರಿಗೆ ವೀಡಿಯೋಗಳು ದೊರೆತಾಗ ಆಕಾಶವೇ ಕಳಚಿ ಬಿದ್ದಂತಾಗಿದೆ. ಕೂಡಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ (Cubbon Park Police Station) ಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಿದಾಗ ಕೊಲೆ ಆಗಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: 88,920 ರೂ. ಮೌಲ್ಯದ ಬಿಸ್ಕೆಟ್ ಕದ್ದ ಖದೀಮರಿಬ್ಬರ ಬಂಧನ
ಚಿಕ್ಕಬಳ್ಳಾಪುರ (Chikkaballapur) ಮೂಲದ ಶ್ರವಣ್ ಈ ಕೊಲೆ ಮಾಡಿದ ಆರೋಪಿಯಾಗಿದ್ದು, ಈತ ಕನ್ನಡಪರ ಸಂಘಟನೆಯೊಂದರ ಮುಖಂಡನ ಮಗ. ಆನಂತರ ಕೊಲೆ ತನಿಖೆಯ ಆಳಕ್ಕಿಳಿದ ಪೊಲೀಸರಿಗೆ ಶಾಕ್ ಆಗಿದೆ. ಈ ಕೊಲೆ ರಹಸ್ಯ ದೃಶ್ಯ ಸಿನಿಮಾವನ್ನೂ ಮೀರಿಸುವಂತಿದೆ. ತನಿಖೆಗೆ ಮುಂದಾದ ಪೊಲೀಸರಿಗೆ ಸಿಕ್ಕ ವಿವರಗಳೇ ರೋಚಕವಾಗಿದೆ. ಕೊಲೆಯಾದ ವಿಷಯ ತಿಳಿಯುತ್ತಿದಂತೆ 5 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ಕಬ್ಬನ್ ಪಾರ್ಕ್ ಪೊಲೀಸರು ವಿಚಾರಣೆ ನಡೆಸಿದಾಗ ಸರ್ಕಾರಿ ಯೋಜನೆಗಳಲ್ಲಿ ಕಾರು ಕೊಡಿಸೋದಾಗಿ ವಂಚನೆ ಮಾಡಿದ್ದ ಆರೋಪ ಕೊಲೆಯಾದ ಶರತ್ ಮೇಲಿದೆ. ಹಲವು ಮಂದಿಯಿಂದ ಹಣ ಪಡೆದು ವಂಚಿಸಿದ್ದ ಆರೋಪವೂ ಕೇಳಿ ಬಂದಿದೆ. ಆರೋಪದ ಮೇಲೆ ಕಿಡ್ನಾಪ್ ಮಾಡಿ ಆರೋಪಿಗಳು ಹತ್ಯೆ ಮಾಡಿರುವುದಾಗಿ ಬಯಲಾಗಿದೆ. ಸದ್ಯ ಪ್ರಕರಣ ಸಂಬಂಧ ಪೊಲೀಸರು ಇದುವರೆಗೆ ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ. ಇಂದು ಒಬಳೇಶ್, ನವೀನ್ ಸಂಕೇತ್ , ಗೋವಿಂದ್ ಮತ್ತು ಉದಯ್ ರಾಜ್ ಎಂಬ ಐವರನ್ನು ಬಂಧಿಸಲಾಗಿದೆ.