ದಾವಣಗೆರೆ: ವಾಟ್ಸಪ್ ಸ್ಟೇಟಸ್‍ಗೆ ವಿವಾದಾತ್ಮಕ ಫೋಟೋ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ವಿವಾದಾತ್ಮಕ ಸ್ಟೇಟಸ್ ಹಾಕಿದ ಯುವಕ ಸೇರಿ ನಾಲ್ವರು ಹಾಗೂ ಹಲ್ಲೆ ಮಾಡಿದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಇದೇ ತಿಂಗಳು 9ನೇ ತಾರೀಖಿನಂದು ತಡ ರಾತ್ರಿ ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿ ಈ ಘಟನೆ ನಡೆದಿದೆ.
ನಡೆದಿದ್ದೇನು?
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಒಂದು ಕೋಮಿನ ಬಗ್ಗೆ ಯುವಕನೊಬ್ಬ ವಾಟ್ಸಪ್‍ನಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿದ ಹಿನ್ನೆಲೆ ಘರ್ಷಣೆ ನಡೆದಿತ್ತು. ಕೇವಲ ಸ್ಟೇಟಸ್ ಹಾಕಿದಕ್ಕೆ ದೊಡ್ಡದಾಗಿ ಬಿಂಬಿಸಿದ ಗ್ರಾಮದ ಕೆಲವು ಯುವಕರ ಗುಂಪು ಸ್ಟೇಟಸ್ ಹಾಕಿದ ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಪರಿಣಾಮ ಓರ್ವ ಯುವಕನಿಗೆ ಕಿಡಿಗೇಡಿಗಳು ಚಾಕುವಿನಿಂದ ಇರಿದಿದ್ದಾರೆ. ಪ್ರಸ್ತುತ ಆ ಯುವಕನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ
ಘರ್ಷಣೆಯ ವೇಳೆ ವೃದ್ಧೆಗೆ ಗಂಭೀರ ಗಾಯವಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.