ಬೆಂಗಳೂರು: ಕರಾವಳಿ ಪಟ್ಟಣ ಉಡುಪಿಯಲ್ಲಿ ಭಾರೀ ಸದ್ದು ಮಾಡಿದ್ದ ಹಿಜಬ್ ವಿವಾದ ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ. ಹಿಜಬ್ ಧರಿಸಿದ ಮಕ್ಕಳಿಗೆ ಶಿಕ್ಷಕರು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಆರೋಪಿಸಲಾಗಿದೆ.
Advertisement
ನಗರದ ಚಂದ್ರಲೇಔಟ್‍ನ ವಿದ್ಯಾಸಾಗರ್ ಶಾಲೆಯ 7ನೇ ತರಗತಿ ಮಕ್ಕಳಿಗೆ ಶಿಕ್ಷಕರೊಬ್ಬರು ಹಿಜಬ್ ವಿಚಾರವಾಗಿ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಚಂದ್ರಾಲೇಔಟ್ ವಿದ್ಯಾ ಸಾಗರ್ ಕಾಲೇಜು ಮುಂದೆ ಸದ್ಯ ಪೋಷಕರು ಜಮಾಯಿಸಿದ್ದರು. ಈ ವೇಳೆ ಶಾಲೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ನಡುವೆ ಮತಿನ ಚಕಮಕಿ ನಡೆದಿದ್ದು, ನಂತರ ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಇದನ್ನೂ ಓದಿ: ನಾನು ಯಾವತ್ತೂ ಹಿಜಬ್, ಬುರ್ಖಾ ಪರ ಇಲ್ಲ: ಜಾವೇದ್ ಅಖ್ತರ್
Advertisement
Advertisement
ಈ ಘಟನೆ ಕುರಿತಂತೆ ಬೆಂಗಳೂರು ದಕ್ಷಿಣ ಶಿಕ್ಷಣ ಅಧಿಕಾರಿ ಭೈಲಾಂಜನಪ್ಪ ಅವರು, ಹಿಜಬ್ ಹಾಕಿಕೊಂಡು ಬಂದಿರುವುದಕ್ಕೆ ಈ ವಿವಾದ ಆಗಿಲ್ಲ. ಪೋಷಕರಿಗೆ ಮಾಹಿತಿ ಕೊರತೆ ಇದೆ. ಮಕ್ಕಳು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇನ್ ಶಿಯಲ್ ವಿಚಾರವಾಗಿ ಶಿಕ್ಷಕಿ ಮತ್ತು ಮಕ್ಕಳ ಮಧ್ಯೆ ಮಿಸ್ ಕಮಿನ್ಯೂಕೇಷನ್ ಆಗಿದೆ ಅಷ್ಟೇ. ಬೋರ್ಡ್ ಮೇಲೆ ಕೆಎಲ್‍ಎಸ್ ಅಂತ ಬರೆಯಲಾಗಿತ್ತು. ಅದನ್ನು ಬಗೆ ಹರಿಸುವ ಕೆಲಸ ಆಗಿದೆ. ಪೊಲೀಸ್ ಠಾಣೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲಾಗುತ್ತದೆ. ಮತೀಯ ಧರ್ಮದ ವಸ್ತ್ರ ಧರಿಸಲು ಅವಕಾಶ ಇಲ್ಲ. ಶಾಲೆ ಆಡಳಿತ ತಿಳಿಸಿರುವ ಸಮವಸ್ತ್ರ ಹಾಕಬೇಕು ಎಂದು ಶಿಕ್ಷಕಿ ಹೇಳಿದ್ದಾರೆ. ಇದನ್ನು ಮಕ್ಕಳು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಸೋಮವಾರದಿಂದ ಮಕ್ಕಳು ಶಾಲೆ ತಿಳಿಸಿದ ಹಾಗೇ ಸಮವಸ್ತ್ರದಲ್ಲಿ ಬರುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ: ಕಾಲೇಜುಗಳಿಗೆ ಫೆ.16ರವರೆಗೂ ರಜೆ ಘೋಷಿಸಿದ ಸರ್ಕಾರ
Advertisement
ಈ ಶಾಲೆಯಲ್ಲಿ ಕೇವಲ ಮೂರು ಮಕ್ಕಳು ಮಾತ್ರ ಬಿಳಿ scarf ಧರಿಸಿ ಬಂದಿದ್ದಾರೆ. ಆ ಮಕ್ಕಳಿಗೆ ಹೀಗೆ ಧರಿಸಬಾರದು ಎಂದು ಶಿಕ್ಷಕಿ ಹೇಳಿರಬಹುದು. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಸಾಧ್ಯತೆ ಇದೆ. ನಾನು ಶಿಕ್ಷಕಿಯಾಗಿ ಹೀಗೆ ಮಾಡಿಲ್ಲ. ನನಗೂ ನನ್ನ ಜವಾಬ್ದಾರಿಯ ಅರಿವಿದೆ ಎಂದು ಶಿಕ್ಷಕಿ ಶಶಿಕಲಾ ಹೇಳಿದ್ದಾರೆ.