ಚಿಕ್ಕಬಳ್ಳಾಪುರ: ಮದ್ಯಪಾನ ಮಾಡಲು ಕರೆದೊಯ್ದ ಸ್ನೇಹಿತರೇ ಯುವಕನ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೀಗೆಹಳ್ಳಿ ಗ್ರಾಮದ ಬಳಿ ನಡೆದಿದೆ.
ಗ್ರಾಮದ ಮೋಹನ್(28) ಕೊಲೆಯಾದವ. ಇನ್ನೂ ಇದೇ ಗ್ರಾಮದ ಪ್ರಭಾಕರ್, ಸುಮನ್ ಹಾಗೂ ನಂದನ್ ಕೊಲೆ ಆರೋಪಿಗಳು ಅಂತ ತಿಳಿದುಬಂದಿದೆ.
ಒಂದೇ ಗ್ರಾಮದವರಾದ ನಾಲ್ವರು ನಿನ್ನೆ ರಾತ್ರಿ ಗ್ರಾಮ ಹೊರವಲಯದ ಗೆಜ್ಜಿಗಾನಹಳ್ಳಿ ಬಳಿಯ ನೀಲಗಿರಿ ತೋಪಿನ ಬಳಿ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಪ್ಲಾನ್ ಮಾಡಿದಂತೆ ಪ್ರಭಾಕರ್, ಸುಮನ್, ನಂದನ್ ಮೂವರು ಸೇರಿ ಮೋಹನ್ ಕೊಲೆ ಮಾಡಿ ಪರಾರಿಯಾಗಿದ್ರು. ವಿಷಯ ತಿಳಿದು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಅಂತ ತಿಳಿದುಬಂದಿದೆ. ಇದನ್ನೂ ಓದಿ: INS ರಣವೀರ್ ನೌಕೆಯಲ್ಲಿಸ್ಫೋಟ- ಮೂವರು ಸಿಬ್ಬಂದಿ ಸಾವು
ಕೊಲೆಗೆ ಕಾರಣ ಏನು..?
ಹಿಂದೆ ಸುಖಾಸುಮ್ಮನೆ ಮಾತಿಗೆ ಮಾತು ಬೆಳೆದು ಪ್ರಭಾಕರ್ ಕುತ್ತಿಗೆಗೆ ಮೋಹನ್ ಮಚ್ಚು ಇಟ್ಟು ಬೆದರಿಸಿದ್ದನಂತೆ. ಇದೇ ಮನಸ್ಸಲ್ಲಿಟ್ಟುಕೊಂಡಿದ್ದ ಪ್ರಭಾಕರ್ ಸುಮನ್, ನಂದನ್ ಜೊತೆ ಪ್ಲಾನ್ ಮಾಡಿ ಮರ್ಡರ್ ಮಾಡಿದ್ದಾನೆ ಎನ್ನಲಾಗಿದೆ. ಮತ್ತೊಂದೆಡೆ ಹಣಕಾಸಿನ ವ್ಯವಹಾರದ ಶಂಕೆ ಕೇಳಿಬಂದಿದ್ದು, ಹಳೆ ವೈಷಮ್ಯದಿಂದ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಸಂಜೆಯೇ ಮೋಹನ್ ಗೆ ಈ ಮೂವರು ಇವತ್ತು ಕತ್ತು ಕೊಯ್ದು ಮರ್ಡರ್ ಮಾಡ್ತೀವಿ ಅಂತ ಬೆದರಿಕ ಹಾಕಿದ್ರಂತೆ. ಈ ವಿಷಯವನ್ನ ಮೋಹನ್ ತನ್ನ ಭಾವನಿಗೆ ಫೋನ್ ಮಾಡಿ ಸಹ ತಿಳಿಸಿದ್ದಾನೆ. ಆದರೆ ಎಲ್ಲೋ ತಮಾಷೆಗೆ ಮಾತಿಗೆ ಮಾತಾಡಿಕೊಂಡಿರಬೇಕು. ಬಿಡು ಆಯ್ತು ಸುಮ್ನಿರು ಅಂತ ಹೇಳಿದ್ದನಂತೆ. ಆದರೆ ಅದೇ ಪ್ರಭಾಕರ್ ನಿಜವಾಗಿಯೇ ಕತ್ತು ಕೊಯ್ದು ಕೊಲೆ ಮಾಡಿಸಿದ್ದಾನೆ ಅಂತ ಭಾವ ಮನು ಹೇಳಿದ್ದಾನೆ.