LatestMain PostNational

INS ರಣವೀರ್ ನೌಕೆಯಲ್ಲಿ ಸ್ಫೋಟ- ಮೂವರು ಸಿಬ್ಬಂದಿ ಸಾವು

ಮುಂಬೈ: ಭಾರತೀಯ ನೌಕೆ (ಐಎನ್‍ಎಸ್) ರಣವೀರ್‌ನಲ್ಲಿ ಸ್ಫೋಟವಾಗಿದ್ದು, ನೌಕಾಪಡೆಯ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಸ್ಫೋಟ ಸಂಭವಿಸಿದ ತಕ್ಷಣವೇ ಹಡಗಿನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಯಾವುದೇ ಹಾನಿ ವರದಿಯಾಗಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬಾಂಬ್ ಮಾಡುವುದನ್ನ ಕಲಿತು ಪತ್ನಿ ಮೇಲೆ ಅತ್ಯಾಚಾರ ಮಾಡಿದವನನ್ನ ಕೊಂದ!

ಐಎನ್‍ಎಸ್ ರಣವೀರ್ ನವೆಂಬರ್ 2021 ರಿಂದ ಪೂರ್ವ ನೌಕಾ ಕಮಾಂಡ್‍ನಿಂದ ಕ್ರಾಸ್ ಕೋಸ್ಟ್ ಕಾರ್ಯಾಚರಣೆ ನಿಮಿತ್ತ ನಿಯೋಜಿಸಲಾಗಿತ್ತು. ಶೀಘ್ರದಲ್ಲೇ ಬೇಸ್ ಪೋರ್ಟ್‍ಗೆ ಮರಳಬೇಕಿತ್ತು. ಈ ಅವಘಡ ಕುರಿತು ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. 11 ಮಂದಿ ನಾವಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 2 ದಿನದಲ್ಲಿ ಮದುವೆ ಇಟ್ಕೊಂಡು ಬ್ಯಾಂಕ್ ದರೋಡೆಗೆ ಬಂದು ಸಿಕ್ಕಿಬಿದ್ದ ಕಳ್ಳ ಮದುಮಗ

Leave a Reply

Your email address will not be published. Required fields are marked *

Back to top button