ಬಳ್ಳಾರಿ: ಸಿಡಿಲು ಬಡಿದು ಯುವಕ ಸಾವನ್ನಪ್ಪಿರುವ ಘಟನೆ ವಿಜಯನಗರ (Vijayanagara) ಜಿಲ್ಲೆಯ ಕೂಡ್ಲಿಗಿ (Kudligi) ತಾಲೂಕಿನ ಬಂಡೆಬಸಾಪುರ ತಾಂಡಾದಲ್ಲಿ ನಡೆದಿದೆ.
ಬಂಡೆಬಸಾಪುರ ಗ್ರಾಮದ ಪಾಂಡುನಾಯ್ಕ್(18) ಮೃತ ಯುವಕ. ಗುರುವಾರ ಸಂಜೆ ಗ್ರಾಮದಲ್ಲಿ ಭಾರೀ ಮಳೆಯಾಗಿದ್ದು, ಮಳೆ ಬರುತ್ತಿದ್ದ ಸಮಯದಲ್ಲಿ ಪಾಂಡುನಾಯ್ಕ್ ಮನೆ ಬಳಿ ನಿಂತಿದ್ದ. ಈ ವೇಳೆ ಸಿಡಿಲು ಬಡಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಬೊಲೆರೋ, ಬಸ್ ನಡುವೆ ಭೀಕರ ಅಪಘಾತ – ನಾಲ್ವರು ದುರ್ಮರಣ
ಸಿಡಿಲಿನ ತೀವ್ರತೆಗೆ ಮನೆಯ ಗೋಡೆಗಳಿಗೆ ಹಾನಿಯಾಗಿದೆ. ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: 18 ದಿನಗಳ ಕಾಲ NIA ಕಸ್ಟಡಿಗೆ ರಾಣಾ – ಮಧ್ಯರಾತ್ರಿ ಕೋರ್ಟ್‌ನಲ್ಲಿ ವಾದ ಏನಿತ್ತು?