Tuesday, 16th October 2018

Recent News

ಬೈಕ್ ಡಿಕ್ಕಿಯ ರಭಸಕ್ಕೆ ಇಟ್ಟಿಗೆ ಗೋಡೆ ಮೇಲೆ ಜೋತು ಬಿದ್ದು ಯುವಕ ದುರ್ಮರಣ

ರಾಯ್‍ಪುರ್: ವೇಗವಾಗಿ ಬಂದ ಬೈಕ್ ಇಟ್ಟಿಗೆ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ಛತ್ತೀಸ್‍ಗಢದ ಕೋರ್ಬಾ ಜಿಲ್ಲೆಯಲ್ಲಿ ನಡೆದಿದೆ.

ಮನೋಜ್(23) ಮೃತ ದುರ್ದೈವಿ. ಜಿಲ್ಲೆಯ ಮಲ್ಗಾವ್ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ. ಈತನನ್ನು ಹರಾದಿ ಬಜಾರ್ ಕಾಕಿ ಪ್ರದೇಶದ ಮಲ್ಗಾವ್ ನಿವಾಸಿ ಕೋಟ್ವಾರ್ ವಿಠ್ಠ್ ಸಿಂಗ್ ಚೌಹಾಣ್ ಅವರ ಮಗ ಎಂದು ತಿಳಿದು ಬಂದಿದೆ.

ನಡೆದಿದ್ದೇನು?
ಮನೋಜ್ ಶನಿವಾರ ರಾತ್ರಿ ಸುಮಾರು 9.30ಕ್ಕೆ ಮನೆಯಿಂದ ಬೈಕಿನಲ್ಲಿ ಹೊರಗೆ ಹೋಗಿದ್ದಾನೆ. ನಂತರ ತಡರಾತ್ರಿ ಸುಮಾರು 11 ಗಂಟೆಗೆ ಮನೆಗೆ ಮಲ್ಗಾವ್ ಮಾರ್ಗದ ಮೂಲಕ ಹಿಂದಿರುಗುತ್ತಿದ್ದನು. ಈ ವೇಳೆ ಮನೋಜ್ ತುಂಬಾ ವೇಗವಾಗಿ ಬೈಕ್ ಚಾಲನೆ ಮಾಡಿದ್ದು, ಕತ್ತಲೆ ಇದ್ದುದ್ದರಿಂದ ಕಿರಿದಾದ ರಸ್ತೆಯಲ್ಲಿ ಬೈಕಿನ ನಿಯಂತ್ರಣ ಕಳೆದುಕೊಂಡು ಇಟ್ಟಿಗೆ ಗೋಡೆಗೆ ಡಿಕ್ಕಿ ಹೊಡೆದು ಗೋಡೆಗೆ ಜೋತು ಬಿದ್ದಿದ್ದಾನೆ.

ಗೋಡೆಗೆ ಬೈಕ್ ಡಿಕ್ಕಿಯಾದ ಪರಿಣಾಮ ಮನೋಜ್ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ಸ್ಥಳದಲ್ಲೇ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ. ತಡರಾತ್ರಿ ಈ ಘಟನೆ ಸಂಭವಿಸಿದ್ದರಿಂದ ಕಾರಣ ಆತನ ಸಹಾಯಕ್ಕೆ ಯಾರು ಬರಲು ಸಾಧ್ಯವಾಗಿಲ್ಲ. ಮುಂಜಾನೆ ಗ್ರಾಮಸ್ಥರು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಗೋಡೆಯಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆ ಸಂಬಂಧ ಹರಾದಿ ಬಜಾರ್  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *