– ಮುಂಜಾಗ್ರತಾ ಕ್ರಮವಹಿಸದೆ ಕರೆಂಟ್ ಹರಿದು ಸಾವು
ಬೆಂಗಳೂರು: ಕಳೆದ ಬಾರಿ ತಪ್ಪಿದ್ದ ದುರಂತ ಈ ಬಾರಿ ಮಿಸ್ ಆಗಿಲ್ಲ. ಟವರ್ ಬಿದ್ದ ಜಾಗದಲ್ಲಿಯೇ ನಿರ್ಲಕ್ಷ್ಯತೆಯಿಂದ ಜೀವವೊಂದು ಬಲಿಯಾಗಿದೆ. ಕ್ರೇನ್ ಬಳಸಿ ಟವರ್ ಬ್ಯಾಟರಿಗಳನ್ನ (Battery) ರೀಪ್ಲೇಸ್ ಮಾಡುವ ವೇಳೆ ವಿದ್ಯುತ್ ಅವಘಡದಿಂದ ಯುವಕ ಸಾವನ್ನಪ್ಪಿರೋ ಘಟನೆ ನಡೆದಿದೆ.
ಇಂದು 12 ಗಂಟೆಯ ಸಮಯದಲ್ಲಿ ಹಿಮಾಚಲ ಪ್ರದೇಶ ಮೂಲದ ಜಿತೀನ್ ಕುಮಾರ್ ಎಂಬಾತ ವಿದ್ಯುತ್ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಅಲ್ಲಿದ್ದ ಸ್ಥಳೀಯರು ತಕ್ಷಣ ಜಿತೀನ್ ನನ್ನ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲ ನೀಡದೆ ಸಾವನ್ನಪ್ಪಿದ್ದ. ಅಂದ ಹಾಗೆ ಕಳೆದ ಬಾರಿ ಟವರ್ (Tower) ಬಿದ್ದು ದುರಂತ ಸಂಭವಿಸಿದ್ದ ಸ್ಥಳದಲ್ಲಿ ಈ ಘಟನೆ ನಡೆದಿದೆ.
Advertisement
Advertisement
ಒಂದು ರೀತಿಯಲ್ಲಿ ಇದೊಂದು ಸೆಲ್ಪ್ ಆಕ್ಸಿಡೆಂಟ್ ಎನ್ನಬಹುದು. ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ, ಯಾರ ಅನುಮತಿಯನ್ನೂ ಪಡೆಯದೆ ನಡೆಸಿದ ತೆರವು ಕಾರ್ಯಾಚರಣೆ ಇದು. ಹೀಗಾಗಿ ವಿದ್ಯುತ್ ತಗುಲಿ ಸಾವನ್ನಪ್ಪಿದ್ದರೂ ಕೂಡ ಬೆಸ್ಕಾಂ ಇದಕ್ಕೆ ಜವಾಬ್ದಾರಿಯಲ್ಲ. ಹೀಗಾಗಿ ಇಲ್ಲಿ ಅವರಾಗಿಯೇ ತಂದುಕೊಂಡ ಕುತ್ತು ಎನ್ನಬಹುದು. ಕಳೆದ ಶುಕ್ರವಾರ ಇದೇ ಲಗ್ಗೆರೆ ಮುಖ್ಯ ರಸ್ತೆಯಲ್ಲಿ ಟವರ್ ಬಿದ್ದಿತ್ತು. ಅದರ ಬ್ಯಾಟರಿಗಳನ್ನ ತೆರವು ಕಾರ್ಯಾಚರಣೆ ನಡೆಸುವ ವೇಳೆ ನಡೆದ ದುರ್ಘಟನೆ ಇದು.
Advertisement
Advertisement
ಜಿತೀನ್ ಕುಮಾರ್ ಹಾಗೂ ಆತನ ಸಹೋದರ ವೃತ್ತಿಯಲ್ಲಿ ಕ್ರೇನ್ ಆಪರೇಟರ್. ಟವರ್ ಬಿದ್ದ ಅವಶೇಷಗಳನ್ನ ತೆರವುಗೊಳಿಸಲು ಇವರನ್ನ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಕಟ್ಟಡದ ಮೇಲಿದ್ದ ವಸ್ತುಗಳನ್ನ ತೆಗೆಯಲು ಕ್ರೇನ್ ಬಳಕೆ ಮಾಡಿದ್ದರು. ಇನ್ನು ಟವರ್ ಗೆ ಅಳವಡಿಸಲಾಗಿದ್ದ ಬ್ಯಾಟರಿ ಕಟ್ಟಡದ ಮೇಲ್ಭಾಗದಲ್ಲಿತ್ತು ಅದನ್ನ ತೆಗೆಯಲು ಸಹೋದರರು ಮುಂದಾಗಿದ್ರು. ಜಿತೀನ್ ನ ಸಹೋದರ ಕ್ರೇನ್ ಅಪರೇಟ್ ಮಾಡ್ತಿದ್ರೆ ಜಿತೀನ್ ಕ್ರೇನ್ ಹೊರಭಾಗದಲ್ಲಿ ಸಹೋದರನಿಗೆ ಇನ್ಸ್‍ಪೆಕ್ಟರ್ ಕೊಡ್ತಿದ್ದ. ಈ ವೇಳೆ ಬ್ಯಾಟರಿ ತೆಗೆಯಲು ಮುಂದಾದಾಗ ಮೇಲಿದ್ದ ವಿದ್ಯುತ್ ವೈಯರ್ ಕ್ರೇನ್ ಗೆ ಟಚ್ ಆಗಿದೆ. ಈ ವೇಳೆ ಇಡಿ ಕ್ರೇನ್‍ಗೆ ವಿದ್ಯುತ್ ಪ್ರವಹಿಸಿದೆ. ಒಳಗಿದ್ದ ಜಿತೀನ್ ಸಹೋದರ ಶೂ ಸೇರಿ ಹಲವು ಪ್ರಿಕಾಷನ್ ಗಳು ಇದ್ದ ಕಾರಣ ಅತನಿಗೆ ಏನೂ ಆಗಿಲ್ಲ ಆದರೆ ಕ್ರೇನ್ ಮೇಲೆ ಕೈ ಇಟ್ಟು ಇನ್ಸ್ ಸ್ಟ್ರಕ್ಷನ್ ಕೊಡ್ತಿದ್ದ ಜಿತೀನ್ ಗೆ ಕರೆಂಟ್ ಶಾಕ್ ಹೊಡೆದಿದೆ. ಇನ್ನು ಇಲ್ಲಿ ಬೆಸ್ಕಾಂಗೆ ಯಾವ ಮಾಹಿತಿ ನೀಡದೆ ಇರುವುದು ದುರಂತಕ್ಕೆ ಕಾರಣವಾಗಿದೆ.
ಸದ್ಯ ಈ ಸಂಬಂಧ ನಿರ್ಲಕ್ಷ್ಯತನದ ಕೇಸ್ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಈ ಪ್ರಕರಣ ನಂದಿನಿಲೇಔಟ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಮಾಯಕ ಯುವಕನ ಸಾವು ನಿಜಕ್ಕೂ ದುರಂತವೇ ಸರಿ..