ಕೆಲಸವನ್ನರಸಿ ನೇಪಾಳದಿಂದ ಬೆಂಗ್ಳೂರಿಗೆ ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ

Public TV
1 Min Read
rape Banasavadi

ಬೆಂಗಳೂರು: ಕೆಲಸವನ್ನು ಹುಡುಕಿಕೊಂಡು ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ 20 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ನಗರದ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

5 ದಿನಗಳ ಹಿಂದೆಯಷ್ಟೆ ಕೆಲಸವನ್ನರಸಿ ನೇಪಾಳದಿಂದ ಬೆಂಗಳೂರಿಗೆ ಯುವತಿ ಬಂದಿದ್ದರು. ಖಾಸಗಿ ಹೊಟೇಲ್ ನಲ್ಲಿ ಕ್ಯಾಶಿಯರ್ ಆಗಿದ್ದ ನೇಪಾಳ ಮೂಲದ ಸುರೇಶ್ ಎಂಬಾತ ಕೆಲಸ ಕೊಡಿಸುವುದಾಗಿ ಅಂತಾ ಹೇಳಿ ಅತ್ಯಾಚಾರ ಎಸೆಗಿದ್ದಾನೆ.

Rape F

ಈ ಘಟನೆ ಫೆಬ್ರವರಿ 21 ರಂದು ನಡೆದಿದ್ದು, ಯುವತಿಯನ್ನು ಕೆಲಸ ಕೊಡಿಸುವುದಾಗಿ ಹೋಟೆಲ್ ರೂಂ ಗೆ ಕರೆಸಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ್ದಾನೆ. ಆದರೆ ಸುರೇಶ್ ಗೆ ಈ ಮೊದಲೇ ಮದುವೆಯಾಗಿರುವುದು ಯುವತಿಗೆ ಮರುದಿನ ಬೆಳಕಿಗೆ ಬಂದಿದೆ.

ಈ ಪ್ರಕರಣವು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸುರೇಶ್ ಪರಾರಿಯಾಗಿದ್ದನು. ಇದೀಗ ಒರಿಸ್ಸಾದ ಭುವನೇಶ್ವರದಲ್ಲಿ ಆರೋಪಿ ಸುರೇಶ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

626960 rape dna image

RAPE 4

Share This Article
Leave a Comment

Leave a Reply

Your email address will not be published. Required fields are marked *