ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಯಂಗ್ ಇಂಡಿಯಾ ಕಚೇರಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಸೀಲ್ ಮಾಡಿದೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ನಿವಾಸದ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ.
ಮಂಗಳವಾರ ಮತ್ತು ಇಂದು ಶೋಧ ಕಾರ್ಯ ನಡೆಸುವಾಗ ಕಚೇರಿಗೆ ಸೇರಿದ ಯಾರೂ ಇಲ್ಲದ ಕಾರಣ ಯಂಗ್ ಇಂಡಿಯಾ ಕಚೇರಿ ಆವರಣಕ್ಕೆ ಬೀಗ ಹಾಕಿದ್ದು, ತಾತ್ಕಾಲಿಕವಾಗಿ ಸೀಲ್ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆ.5 ರಿಂದ 15 ರವರೆಗೆ ASI ಪ್ರವಾಸಿ ತಾಣಗಳ ಪ್ರವೇಶ ಉಚಿತ
Advertisement
Advertisement
ಕಾಂಗ್ರೆಸ್ ಒಡೆತನದ ಹೆರಾಲ್ಡ್ ಹೌಸ್‌ನಲ್ಲಿ ಈ ಕಚೇರಿ ಇದೆ. ಪೂರ್ವಾನುಮತಿ ಇಲ್ಲದೇ ಯಾರು ಕೂಡ ಬೀಗ ತೆಗೆಯುವಂತಿಲ್ಲ ಎಂದು ಕಚೇರಿಗೆ ಇ.ಡಿ ಅಧಿಕಾರಿಗಳು ಭಿತ್ತಿಪತ್ರ ಅಂಟಿಸಿದ್ದಾರೆ.
Advertisement
ಕಚೇರಿ ಬೀಗ ತೆಗೆದು ಶೋಧ ಕಾರ್ಯಕ್ಕೆ ಅನುವು ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗೆ ಇ-ಮೇಲ್ ಮೂಲಕ ಸಂದೇಶ ಕಳುಹಿಸಲಾಗಿತ್ತು. ಅವರಿಂದ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ಆವರಣಕ್ಕೆ ಬೀಗ ಹಾಕಲಾಗಿದೆ. ಒಂದು ವೇಳೆ ಸಂಬಂಧಿಸಿದ ಅಧಿಕಾರಿ ಬಂದು ಶೋಧ ಕಾರ್ಯಕ್ಕೆ ಅನುವು ಮಾಡಿಕೊಟ್ಟರೆ ಆವರಣಕ್ಕೆ ಹಾಕಿರುವ ಸೀಲ್ ತೆರೆಯಲಾಗುವುದು ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ ಘರ್ ತಿರಂಗಾಕ್ಕೆ ಪ್ರೇರಣೆ ನೀಡುವ ಸಂಕಲ್ಪದೊಂದಿಗೆ ತಿರಂಗಾ ರ್‍ಯಾಲಿಯಲ್ಲಿ ಜೋಶಿ ಭಾಗಿ
Advertisement
ಹೆರಾಲ್ಡ್ ಹೌಸ್ ಸೇರಿದಂತೆ ಇತರೆ 11 ಕಡೆ ಮಂಗಳವಾರ ಇ.ಡಿ ಶೋಧ ಕಾರ್ಯ ನಡೆಸಿತ್ತು.
ಇ.ಡಿ ಶೋಧ ಕಾರ್ಯ ಬೆನ್ನಲ್ಲೇ, ಸಲ್ಮಾನ್ ಖುರ್ಷಿದ್, ಮಲ್ಲಿಕಾರ್ಜುನ ಖರ್ಗೆ, ಪವನ್ ಬನ್ಸಾಲ್ ಮತ್ತು ಪಿ.ಚಿದಂಬರಂ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ಸಭೆ ನಡೆಸಿದ್ದಾರೆ. ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿ, ದೆಹಲಿ ಪೊಲೀಸರು ನಮ್ಮ ಕೇಂದ್ರಗಳು ಮತ್ತು ಮನೆಗಳನ್ನು ಸುತ್ತುವರೆದಿದ್ದಾರೆ. ಇದು ಸೇಡಿನ ರಾಜಕೀಯದ ಅತ್ಯಂತ ಕೆಟ್ಟ ರೂಪವಾಗಿದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ. ಈ ಬಗ್ಗೆ ಮೌನವಾಗಿರುವುದೂ ಇಲ್ಲ. ನಾವು ಮೋದಿ ಸರ್ಕಾರದ ಅನ್ಯಾಯ ಮತ್ತು ವೈಫಲ್ಯಗಳ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.