ಹಾವೇರಿ: ತನ್ನ ತಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಯುವತಿಯೊಬ್ಬಳು ರೌದ್ರಾವತಾರ ತಾಳಿ ಯುವಕನನ್ನ ಚಪ್ಪಲಿಯಿಂದ ಥಳಿಸಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ನಗರದ ಪಿಬಿ ರಸ್ತೆಯಲ್ಲಿ ನಡೆದಿದೆ.
ಆಗಸ್ಟ್ 18ರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆದರೆ ಧರ್ಮದೇಟು ನೀಡಿದ ಯುವತಿ ಯಾರು ಮತ್ತು ಧರ್ಮದೇಟು ತಿಂದ ಆಸಾಮಿ ಯಾರು ಎಂಬುದು ಇನ್ನು ಗೊತ್ತಾಗಿಲ್ಲ.
ದಾವಣಗೆರೆ ಜಿಲ್ಲೆಯ ಹರಿಹರ ಕಡೆಯಿಂದ ಬಂದಿದ್ದ ಯುವತಿ ಮತ್ತು ಆಕೆಯ ತಾಯಿ ರಾಣೇಬೆನ್ನೂರು ನಗರದವರು ಇರಬಹುದು ಎನ್ನಲಾಗಿದೆ. ಮನೆ ಸೇರುವ ಧಾವಂತದಲ್ಲಿ ತಾಯಿ ಮತ್ತು ಮಗಳು ಮನೆಗೆ ಹೋಗುತ್ತಿದ್ದಾಗ ಟೆಂಪೋ ಬಳಿ ನಿಂತಿದ್ದ ಯುವಕನೊಬ್ಬ ಯುವತಿಯ ತಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದ್ರಿಂದ ಕೋಪಗೊಂಡ ಯುವತಿ ಕೈಯಲ್ಲಿ ಚಪ್ಪಲಿ ಹಿಡಿದು ಯುವಕನಿಗೆ ಥಳಿಸಿದ್ದಾರೆ.
ನನ್ನ ತಾಯಿ ಜೊತೆಗೆ ಅಸಭ್ಯವಾಗಿ ವರ್ತಿಸ್ತೀಯಾ. ನೀನು ಜೀವನದಲ್ಲಿ ಎಂದೂ ಮರೆಯಬಾರ್ದು ಎನ್ನುತ್ತಲೇ ಯುವತಿ ಚಪ್ಪಲಿಯಿಂದ ಥಳಿಸಿದ್ದಾರೆ. ನಂತರ ಸ್ಥಳೀಯರು ಯುವತಿಯನ್ನ ಸಮಾಧಾನಪಡಿಸಿ ಕಳುಹಿಸಿದ್ದಾರೆ. ಈ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಈ ಕುರಿತು ಇದೂವರೆಗೂ ಯಾವುದೇ ದೂರು ದಾಖಲಾಗಿಲ್ಲ.
https://www.youtube.com/watch?v=0E8g37ElkJk







