ಯುವ ನಟಿ ರೆಂಜುಶಾ ಆತ್ಮಹತ್ಯೆ: ಕಾರಣ ತಿಳಿಸಿದ ಪತಿ

Public TV
1 Min Read
Renjusha Menon 1

ನಿನ್ನೆಯಷ್ಟೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ನಟಿ ರೆಂಜುಶಾ ಮೆನನ್ (Renjusha Menon), ಸಾವಿನ ಬಗ್ಗೆ ಅವರ ಪತಿ, ನಿರ್ದೇಶಕರೂ ಆಗಿರುವ ಮನೋಜ್ ಶ್ರೀಲಕಮ್ ಪ್ರತಿಕ್ರಿಯೆ ನೀಡಿದ್ದಾರೆ. ‘ಎಂದಿನಂತೆ ನಾನು ಬೆಳಗ್ಗೆ ಶೂಟಿಂಗ್ ಗೆ ಹೋಗಿದ್ದೆ. ರೆಂಜುಶಾಗೆ ಕರೆ ಮಾಡಿದರೂ, ಅವರು ಸ್ವೀಕರಿಸಲಿಲ್ಲ. ಅನುಮಾನ ಬಂದ ಮನೆಗೆ ಬಂದಾಗ ಅವರು ಫ್ಯಾನಿಗೆ ನೇಣು ಹಾಕಿಕೊಂಡಿದ್ದರು’ ಎಂದು ತಿಳಿಸಿದ್ದಾರೆ.

Renjusha Menon 2

ರೆಂಜುಶಾ ಸಾವಿಗೆ ಖಿನ್ನತೆಯೇ ಕಾರಣ ಎಂದೂ ಹೇಳಲಾಗುತ್ತಿದೆ. ಸಾಲದ ಬಾಧೆ ತಾಳದೇ ಅವರು ಖಿನ್ನತೆಗೆ ಜಾರಿದ್ದರು. ಇದೇ ಅವರು ಸಾವಿಗೆ ಕಾರಣವಾಗಿರಬಹುದು ಎಂದೂ ಹೇಳಲಾಗುತ್ತಿದೆ. ಮಲಯಾಳಂ (Malayalam) ಸಿನಿಮಾ ಮತ್ತು ಕಿರುತೆರೆ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ರೆಂಜುಶಾ ಮೆನನ್ ಕೇವಲ 34ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.

Renjusha Menon 3

ನಿಜಲಟ್ಟಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ರೆಂಜುಶಾ ಮೆನನ್ ಸಿನಿಮಾ ಮತ್ತು ಕಿರುತೆರೆ ಎರಡೂ ರಂಗದಲ್ಲಿ ಗುರುತಿಸಿಕೊಂಡವರು. ರೆಂಜುಶಾ ತಿರುವನಂತಪುರಂನ (Thiruvananthapuram) ಶ್ರೀಕಾರ್ಯಂನಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಿದ್ದರು. ವಾಸವಿದ್ದ ಮನೆಯಲ್ಲೇ ಅವರ ಮೃತದೇಹ ಪತ್ತೆಯಾಗಿತ್ತು.

 

ಹಣಕಾಸಿನ ಸಮಸ್ಯೆಯಿಂದ ಅವರು ನೇಣಿಗೆ ಶರಣಾಗಿರಬಹುದು ಎಂದು ಹಲವು ಮಾಧ್ಯಮಗಳು ವರದಿ ಮಾಡಿ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಟಿಯಾಗಿ, ಲೈನ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದ ರೆಂಜುಶಾ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಉತ್ತಮ ಡಾನ್ಸರ್ ಕೂಡ ಆಗಿದ್ದರು. ಸಾಕಷ್ಟು ಜನಪ್ರಯ ಶೋಗಳಲ್ಲಿ ಭಾಗಿಯಾಗಿರುವ ಹೆಗ್ಗಳಿಕೆ ಇವರದ್ದಾಗಿತ್ತು.

Web Stories

Share This Article