ಶಿವಮೊಗ್ಗ: ಆಟೋ ಕೊಡಿಸಿ ಎಂದು ತಾಯಿ ಜೊತೆ ಜಗಳವಾಡುತ್ತಿದ್ದವನನ್ನು ಸಹೋದರನೇ ಕೊಲೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಗುರುಪ್ರಸಾದ್ (26) ಕೊಲೆಯಾಗಿರುವ ಯುವಕ. ಈ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ. ಗುರುಪ್ರಸಾದ್ ನನ್ನು ಸಹೋದರ ವಿಶ್ವನಾಥ್ ಕೊಲೆ ಮಾಡಿದ್ದಾನೆ.
Advertisement
Advertisement
ತನಗೆ ಆಟೋ ಕೊಡಿಸಿ ಇಲ್ಲವಾದರೆ ಆಸ್ತಿಯಲ್ಲಿ ಭಾಗ ಮಾಡಿಕೊಡಿ ಎಂದು ಗುರುಪ್ರಸಾದ್ ತನ್ನ ತಾಯಿ ಜೊತೆ ಜಗಳವಾಡುತ್ತಿದ್ದನು. ಈ ವೇಳೆ ಸಹೋದರ ವಿಶ್ವನಾಥ್, ನೀನೇ ದುಡಿದು ಆಟೋ ಕೊಂಡುಕೊಳ್ಳುವಂತೆ ಬುದ್ಧಿಮಾತು ಹೇಳಿದ್ದಾನೆ. ಅಲ್ಲದೆ ಅಮ್ಮ ಏಕೆ ನಿನಗೆ ಆಟೋ ಕೊಡಿಸಬೇಕು ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ವಿಶ್ವನಾಥ್, ಗುರುಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾನೆ.
Advertisement
ಗಾರೆ ಕೆಲಸಕ್ಕೆ ಬಳಸುವ ಆಯುಧದಿಂದ ಹಲ್ಲೆಗೈದಿದ್ದು, ಈ ವೇಳೆ ಮಟ್ಟಗೋಲು ಆತನ ತಲೆಗೆ ತಾಗಿದೆ. ಪರಿಣಾಮ ತಲೆ ಮತ್ತು ಕಿವಿ ಭಾಗದಲ್ಲಿ ರಕ್ತಸ್ರಾವವಾಗಿ ಗುರುಪ್ರಸಾದ್ ಮೃತಪಟ್ಟಿದ್ದಾನೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಡಿಲು ಬಡಿತದಿಂದ ವ್ಯಕ್ತಿ ಜಸ್ಟ್ ಮಿಸ್ – ಬೆಚ್ಚಿ ಬೀಳಿಸುವ ವೀಡಿಯೋ ವೈರಲ್