ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ರಶ್ಮಿಕಾ ಮಂದಣ್ಣ ಯಾವತ್ತೂ ಮುಂದು. ದಿನವೂ ಅವರು ಹಲವು ಗಂಟೆಗಳ ಕಾಲ ಜಿಮ್ ನಲ್ಲಿ ಕಾಲಕಳೆಯುತ್ತಾರೆ. ಅದರಲ್ಲೂ ಡಾನ್ಸ್ ಮತ್ತು ಯೋಗದ ಮೂಲಕವೂ ದೇಹದಂಡಿಸುತ್ತಾರೆ. ಅನೇಕ ಬಾರಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜತೆ ಹಂಚಿಕೊಂಡು ಆರೋಗ್ಯದ ಬಗ್ಗೆ ಟಿಪ್ಸ್ ಕೊಡುತ್ತಾರೆ. ಆದರೆ, ಈ ಬಾರಿ ಅವರು ಕೊಂಚ ಭಯದಿಂದಲೇ ವರ್ಕೌಟ್ ಮಾಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಈ ಫೋಟೋ ನಿಮಗೆ ಇಷ್ಟವಾಗುತ್ತದೆಯೋ ಇಲ್ಲವೋ ಎಂದೂ ಕೇಳಿದ್ದಾರೆ. ಇದನ್ನು ಓದಿ : ಮತ್ತೆ ನಟನೆಗೆ ಮರಳಿದ ಮಾಲಾಶ್ರೀ
- Advertisement 2
ರಶ್ಮಿಕಾ ಮಂದಣ್ಣ ಹಾಟ್ ಹಾಟ್ ಆಗಿ ಮತ್ತು ತುಂಡುಡುಗೆ ತೊಟ್ಟಾಗೆಲ್ಲ ಟ್ರೋಲ್ ಆಗಿದ್ದಾರೆ. ಅನೇಕ ಬಾರಿ ಅವರು ಧರಿಸುವ ಕಾಸ್ಟ್ಯೂಮ್ ನಿಂದಾಗಿಯೇ ಸುದ್ದಿ ಆಗಿದ್ದಾರೆ. ಹಾಗಾಗಿ ಫೋಟೋ ಹಾಕುವಾಗ ಇದೀಗ ಯೋಚಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳದ್ದು. ಹೀಗಾಗಿಯೇ ಈ ಫೋಟೋವನ್ನು ಹಾಕುವುದೋ ಬೇಡವೋ ಗೊತ್ತಿಲ್ಲ ಎನ್ನುತ್ತಾ ಆ ಫೋಟೋ ಹಾಕಿದ್ದಾರೆ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ
- Advertisement 3
- Advertisement 4
ಜಿಮ್ ನಲ್ಲಿರುವ ಫೋಟೋ ಹಾಕಿಕೊಂಡು, ‘ನಿಮ್ಮಲ್ಲಿಯ ತುಂಬಾ ಜನರಿಗೆ ಈ ಫೋಟೋ ಇಷ್ಟವಾಗುವುದಿಲ್ಲ. ಆದರೆ, ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ನಿರಂತರವಾಗಿ ವ್ಯಾಯಾಮ ಇರಲಿ. ಡಯಟ್, ವರ್ಕೌಟ್ ಮತ್ತು ಸಕಾರಾತ್ಮಕ ಆಲೋಚನೆಗಳಿಂದ ಉತ್ತಮ ಜೀವನ ನಡೆಸಬುದು’ ಎಂದು ಆರೋಗ್ಯದ ಕುರಿತಾಗಿ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ
ಪುಷ್ಪಾ ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ತಮಿಳು ಸಿನಿಮಾ ರಂಗದಲ್ಲಿ ಮತ್ತಷ್ಟು ಬೇಡಿಕೆ ಪಡೆದಿದ್ದಾರೆ. ಪುಷ್ಪಾ 2 ಸಿನಿಮಾದಲ್ಲೂ ಅವರಿಗೆ ಪ್ರಮುಖ ಪಾತ್ರವಿದ್ದು, ಸದ್ಯ ಆ ಸಿನಿಮಾದ ತಯಾರಿಯಲ್ಲಿ ಅವರು ತೊಡಗಿದ್ದಾರೆ ಎನ್ನಲಾಗುತ್ತಿದೆ.