ಬಿಗ್‌ಬಾಸ್ (Bigg Boss Kannada) ಕನ್ನಡ ಹತ್ತನೇ ಸೀಸನ್ ಫಿನಾಲೆ ಹಬ್ಬ ಶುರುವಾಗಿಆಗಿದೆ. ಸಖತ್ ಅದ್ದೂರಿ ವೇದಿಕೆಯಲ್ಲಿ ಸುದೀಪ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಫೈನಲಿಸ್ಟ್ ಆಗಿರುವ ಆರು ಜನ ಸ್ಪರ್ಧಿಗಳನ್ನು, ಅವರ ಮನೆಯವರನ್ನು ಮಾತಾಡಿಸಿದ್ದಾರೆ. ಈ ಕಲರ್ ಫುಲ್ ವೇದಿಕೆಯ ತುಣುಕನ್ನು ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಬಿಡುಗಡೆ ಮಾಡಲಾಗಿದೆ.
‘ಈ ಹತ್ತು ಸೀಸನ್‌ನಲ್ಲಿ ಇಷ್ಟು ಸುದ್ದಿ ಮಾಡಿದ ಸೀಸನ್ ಬೇರೆ ಇಲ್ಲ’ ಎಂದು ಸ್ವತಃ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿದ್ದ ಸಂಗತಿಯನ್ನು ಸುದೀಪ್ ರಿವೀಲ್ ಮಾಡುತ್ತಿದ್ದ ಹಾಗೆಯೇ ಮನೆಯೊಳಗಿನ ಉಳಿದ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ ಮೂಡಿದರೆ, ವರ್ತೂರು ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು.
ಹೊರಗೆ ಕೂತಿದ್ದ ವರ್ತೂರು ಸಂತೋಷ್ ಅಮ್ಮನೂ ಸೆರಗಿನಲ್ಲಿ ಕಣ್ಣೀರು ಒರೆಸಿಕೊಂಡರು. ಡ್ರೋಣ್ ಪ್ರತಾಪ್ (Drone Pratap) ತಾಯಿ, ‘ನಮ್ಮ ಮಗನನ್ನು ನಮಗೆ ಕೊಟ್ಟಿದ್ದೀರಾ. ಈ ವೇದಿಕೆಗೆ ಚಿರಋಣಿ’ ಎಂದು ಭಾವುಕರಾಗಿದ್ದಾರೆ. ಎಲ್ಲರ ಮುಖದಲ್ಲಿಯೂ ಬಿಗ್‌ಬಾಸ್ ವೇದಿಕೆಯ ಕುರಿತು ಕೃತಜ್ಞತೆಯ ಭಾವ ತುಂಬಿದೆ.
ಇನ್ನಷ್ಟು ಪರ್ಫಾರ್ಮೆನ್ಸ್, ಕಲರ್‍ಫುಲ್ ಡಾನ್ಸ್, ಕಚಗುಳಿಯ ಮಾತುಕತೆ ಎಲ್ಲವೂ ತಂಬಿರುವ ಬಿಗ್‌ಬಾಸ್ ಕನ್ನಡ ಸೀಸನ್ 10 ಫಿನಾಲೆ ಸಂಜೆ 7.30ಯಿಂದ ಪ್ರಸಾರವಾಗಲಿದೆ.