ಲಂಡನ್: ಉತ್ತರ ಪ್ರದೇಶದ ಲೊಖಾರಿ ಗ್ರಾಮದ ದೇವಸ್ಥಾನದಿಂದ ಕಾಣೆಯಾದ ಯೋಗಿನಿ ವಿಗ್ರಹ ಇಂಗ್ಲೆಂಡ್‍ನ ಹಳ್ಳಿ ಮನೆಯಲ್ಲಿ ಪತ್ತೆಯಾಗಿದೆ.
ಉತ್ತರ ಪ್ರದೇಶದ ಲೊಖಾರಿ ಗ್ರಾಮದ ದೇವಸ್ಥಾನದಿಂದ ಮೇಕೆ ದೇವತೆ(ಯೋಗಿನಿ)ಯ ಪುರಾತನ ಭಾರತೀಯ ವಿಗ್ರಹವು 40 ವರ್ಷಗಳ ಹಿಂದೆ ಕಾಣೆಯಾಗಿತ್ತು. ಇಂದು ಆ ವಿಗ್ರಹ ಇಂಗ್ಲೆಂಡ್‍ನ ಹಳ್ಳಿಯ ಮನೆಯೊಂದರ ಉದ್ಯಾನವನದಲ್ಲಿ ಪತ್ತೆಯಾಗಿದ್ದು, ವಿಗ್ರಹ ಶೀಘ್ರದಲ್ಲೇ ಭಾರತಕ್ಕೆ ಮರಳಲಿದೆ.
Advertisement
Advertisement
ಹಿಂದೂ ಧರ್ಮದಲ್ಲಿನ ದೈವಿಕ ಸ್ತ್ರೀಲಿಂಗವನ್ನು ಉಲ್ಲೇಖಿಸುವ ಯೋಗಿನಿ ವಿಗ್ರಹವು 8ನೇ ಶತಮಾನದಷ್ಟು ಹಿಂದಿನದು. 1970ರ ದಶಕದ ಕೊನೆಯಲ್ಲಿ ಮತ್ತು 1980 ರ ದಶಕದ ಆರಂಭದಲ್ಲಿ ಬಂದಾ ಜಿಲ್ಲೆಯ ಲೋಖಾರಿ ಗ್ರಾಮದಿಂದ ಈ ವಿಗ್ರಹ ಕಾಣೆಯಾಗಿತ್ತು. ಈಗ ಆ ವಿಗ್ರಹ ಪತ್ತೆಯಾಗಿದ್ದು, ಈ ವಾರವೇ ಲಂಡನ್‍ನಲ್ಲಿರುವ ಭಾರತೀಯ ಹೈ ಕಮಿಷನ್ ಭಾರತಕ್ಕೆ ಪ್ರಾಚೀನ ಕಲಾಕೃತಿಯಾದ ಯೋಗಿನಿ ವಿಗ್ರಹವನ್ನು ಹಿಂದಿರುಗಿಸಲು ಎಲ್ಲ ರೀತಿಯ ಅನುಮತಿಯನ್ನು ಪಡೆದುಕೊಳ್ಳಲಾಗಿದೆ. ಅದನ್ನು ಕೆಲವೇ ತಿಂಗಳುಗಳಲ್ಲಿ ಭಾರತದ ಮೂಲ ಸ್ಥಾನದಲ್ಲಿ ಮರುಸ್ಥಾಪಿಸಲಾಗುವುದು ಎಂದು ಶಿಲ್ಪದ ಮರುಸ್ಥಾಪನೆಯನ್ನು ಸಂಪರ್ಕಿಸುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಪ್ರಥಮ ಕಾರ್ಯದರ್ಶಿ ಜಸ್ಪ್ರೀತ್ ಸಿಂಗ್ ಸುಖಿಜಾ ಹೇಳಿದ್ದಾರೆ. ಇದನ್ನೂ ಓದಿ: ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ: ಅನಿಲ್ ಮೆನನ್
Advertisement
Oh, the English and their country houses. What looted colonial treasures do you keep inside and in your lovely gardens? Here, in Lootshire, we bring one back to where it belongs. The times are changing, if you have a “stolen art problem” let us know, we might be able to help. pic.twitter.com/fzKlIeYe5U
— Art Recovery International (@artrecovery) December 8, 2021
Advertisement
ಎಲ್ಲ ವಿಧಿವಿಧಾನಗಳು ಪೂರ್ಣಗೊಂಡಿವೆ. ಈ ಕಲಾಕೃತಿಯನ್ನು ಭಾರತಕ್ಕೆ ತರಲು ನಾವು ಅಂತಿಮ ಹಂತದಲ್ಲಿದ್ದೇವೆ. ಕ್ರಿಸ್ ಮರಿನೆಲ್ಲೋ ಮತ್ತು ಶ್ರೀ ವಿಜಯ್ ಕುಮಾರ್ ಅವರು ಒಂದೆರಡು ತಿಂಗಳ ಹಿಂದೆ ಈ ಕಲಾಕೃತಿಯನ್ನು ಗುರುತಿಸಲು ಸಹಾಯ ಮಾಡಿದರು. ಯೋಗಿನಿ ವಿಗ್ರಹವನ್ನು ಹೈಕಮಿಷನ್‍ಗೆ ಹಸ್ತಾಂತರಿಸುವುದನ್ನು ಮತ್ತು ಅದರ ಪೂರ್ಣ ವೈಭವವನ್ನು ಪುನಃಸ್ಥಾಪಿಸುವುದನ್ನು ನೀವು ಶೀಘ್ರದಲ್ಲೇ ನೋಡುತ್ತೀರಿ ಎಂದು ತಿಳಿಸಿದರು.
ನ್ಯಾಯವಾದಿ ಮತ್ತು ಆರ್ಟ್ ರಿಕವರಿ ಇಂಟರ್‍ನ್ಯಾಶನಲ್‍ನ ಸಂಸ್ಥಾಪಕರಾದ ಮರಿನೆಲ್ಲೋ ಈ ಕುರಿತು ಮಾತನಾಡಿದ್ದು, ಯುಕೆಯಲ್ಲಿ ವೃದ್ಧೆ ತನ್ನ ಪತಿ ತೀರಿಕೊಂಡ ನಂತರ ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು, ತೋಟವನ್ನು ಮಾರಾಟ ಮಾಡಿದ್ದರು. ಈ ವೇಳೆ ಇದರಲ್ಲಿ ಪ್ರಾಚೀನ ವಿಗ್ರಹವು ಸೇರಿಕೊಂಡಿದೆ. ನಂತರ ಈ ತೋಟವನ್ನು ಖರೀದಿಸಿದ ಮಾಲೀಕರ ಕಣ್ಣಿಗೆ ಈ ವಿಗ್ರಹ ಕಂಡುಬಂದಿದ್ದು, ಪರಿಣಾಮ ಅವರು ತನಿಖೆ ಮಾಡಲು ನಮ್ಮನ್ನು ಸಂಪರ್ಕಿಸಿದರು. ಈ ಮನೆಯನ್ನು ಅವರು 15 ವರ್ಷಗಳ ಹಿಂದೆ ಖರೀದಿಸಿದ್ದು, ತೋಟದಲ್ಲೇ ಈ ವಿಗ್ರಹ ಇತ್ತು ಅಂತ ಅವರು ತಿಳಿಸಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು
ನಂತರ ನಾನು ಭಾರತದ ಕಳೆದುಹೋದ ಕಲಾಕೃತಿಗಳನ್ನು ಮರುಸ್ಥಾಪಿಸುವಲ್ಲಿ ಕೆಲಸ ಮಾಡುವ ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ಸಂಸ್ಥೆಯ ಸಹ-ಸಂಸ್ಥಾಪಕ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಿದೆ. ನಂತರ ಅವರು ಈ ವಿಗ್ರಹ ಉತ್ತರ ಪ್ರದೇಶದಿಂದ ಕಾಣೆಯಾದ ‘ಯೋಗಿನಿ’ ವಿಗ್ರಹ ಎಂದು ಗುರುತಿಸಲು ಸಾಧ್ಯವಾಯಿತು ಎಂದು ತಿಳಿಸಿದರು.