ಲಕ್ನೋ: ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ಇದುವರೆಗೆ 15,246 ಕಿ.ಮೀ.ಗೂ ಹೆಚ್ಚು ಗ್ರಾಮೀಣ ರಸ್ತೆಗಳನ್ನು ನಿರ್ಮಿಸಿದೆ ಎಂದು ಯುಪಿಯಲ್ಲಿ ಬಿಜೆಪಿ ಸರ್ಕಾರ ತಿಳಿಸಿದೆ.
Advertisement
ಉತ್ತರಪ್ರದೇಶದಲ್ಲಿ 2017ರಂದು ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಸರ್ಕಾರದ ಪ್ರಾಥಮಿಕ ಉದ್ದೇಶವೆಂದರೆ ಉತ್ತಮ ಸಂಪರ್ಕ ಮತ್ತು ಮೂಲಸೌಕರ್ಯಗಳು ಗ್ರಾಮಾಂತರ ಪ್ರದೇಶಗಳಿಗೆ ನೀಡುವುದು ಎಂದು ಬಿಜೆಪಿ ಸದಸ್ಯರು ತಮ್ಮ ಸರ್ಕಾರದ ಸಾಧನೆ ಕುರಿತು ವಿವರಿಸಿದ್ದಾರೆ. ಈಗ ರಾಜ್ಯವು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದು, ಗ್ರಾಮಾಂತರ ಪ್ರದೇಶಗಳು ಮತ್ತೆ ಬಿಜೆಪಿಗೆ ಮತ ಹಾಕಲು ಸಜ್ಜಾಗಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ
Advertisement
ಯೋಗಿ ಅವರ ಸರ್ಕಾರವು ಇದುವರೆಗೆ 15,246 ಕಿ.ಮೀ.ಗೂ ಹೆಚ್ಚು ಗ್ರಾಮೀಣ ರಸ್ತೆಗಳನ್ನು ನಿರ್ಮಿಸಿದೆ. ಇದು ಹಿಂದಿನ ಸರ್ಕಾರಗಳಿಗಿಂತ ಹೆಚ್ಚು. ಉತ್ತಮ ರಸ್ತೆಗಳು ಮತ್ತು ಸುಧಾರಿತ ವಿದ್ಯುತ್ ಪೂರೈಕೆಯ ಸಹಾಯದಿಂದ ರಾಜ್ಯವು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಜ್ಜಾಗಿದೆ. ಕಳೆದ ಐದು ವರ್ಷಗಳಲ್ಲಿ ಗ್ರಾಮ-ಗ್ರಾಮೀಣ-ರೈತರನ್ನು ಸುಧಾರಿಸಲು ನಮ್ಮ ಸರ್ಕಾರ ಶ್ರಮಿಸಿದೆ. ಇದಕ್ಕೆ ಜನರು ಯೋಗಿ ಅವರ ಸರ್ಕಾರವನ್ನು ಪ್ರಶಂಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಉತ್ತಮ ರಸ್ತೆಗಳು ರೈತರು ತಮ್ಮ ಬೆಳೆಗಳನ್ನು ಖರೀದಿ ಕೇಂದ್ರಗಳಿಗೆ ಕೊಂಡೊಯ್ಯಲು ಸಹಾಯ ಮಾಡುತ್ತೆ. ಯೋಗಿ ಸರ್ಕಾರವು ಗ್ರಾಮ ಮತ್ತು ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಮುಖ್ಯ ರಸ್ತೆಯನ್ನು ಹಳ್ಳಿಗಳಿಗೆ ಸಂಪರ್ಕ ಹೊಂದಿಸುವ ಕೆಲಸ ಮಾಡಿದೆ. ರಸ್ತೆ ಜಾಲ ಅಳವಡಿಕೆಯಿಂದ ಒಂದೆಡೆ ಹಳ್ಳಿಗಳಿಂದ ವಲಸೆ ಕಡಿಮೆಯಾದರೆ, ಮತ್ತೊಂದೆಡೆ ಗ್ರಾಮಗಳಲ್ಲಿಯೇ ಉದ್ಯೋಗ, ಅಭಿವೃದ್ಧಿಗೆ ರೆಕ್ಕೆಪುಕ್ಕಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುವಕನ ಜೊತೆಗೆ ವಾಸವಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ಲೋಕೋಪಯೋಗಿ ಇಲಾಖೆ(ಪಿಡಬ್ಲ್ಯುಡಿ) ಪ್ರಕಾರ, ಕಳೆದ ಎಪ್ಪತ್ತು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸುಮಾರು 1,557 ಕಂದಾಯ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಕೆಲಸ ಮಾಡಲಾಗಿದೆ. ಈ ಗ್ರಾಮಗಳಲ್ಲಿ 1,114 ಕೋಟಿ ರೂಪಾಯಿ ವೆಚ್ಚದಲ್ಲಿ 1763-ಕಿಮೀ ಉದ್ದದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದೆ.