ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಬೆಂಗಾವಲು ವಾಹನಗಳನ್ನು ನಿಲ್ಲಿಸಿ, ಟ್ರಾಫಿಕ್‌ನಲ್ಲಿ ಸಿಲುಕಿದ್ದ ಆಂಬುಲೆನ್ಸ್‌ಗೆ ಸಂಚಾರಕ್ಕೆ ದಾರಿ ಮಾಡಿಕೊಟ್ಟು ಮಾದರಿಯಾಗಿದ್ದಾರೆ.
ಯೋಗಿ ಆದಿತ್ಯನಾಥ್ ಅವರ ಮಾನವೀಯ ನಡೆ ಕುರಿತು ಟ್ರಾಫಿಕ್ ಡಿಸಿಪಿ ಸುಭಾಷ್ ಚಂದ್ರ ಶಾಕ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 20 ಕಡೆ ದಾಳಿ, ಸಾವಿರಾರು ಜನರ ಹತ್ಯೆ – ಮೋದಿಗೆ ಕೊಲೆ ಬೆದರಿಕೆ
Advertisement
Advertisement
ಹಜರತ್‌ಗಂಜ್‌ನಿಂದ ಬಂದರಿಯಾಬಾಗ್ ಕಡೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಯಾಣ ಬೆಳೆಸಿದ್ದರು. ಬೆಂಗಾವಲು ವಾಹನಗಳು ಜೊತೆಯಲ್ಲಿ ಸಾಗಿದ್ದವು. ಈ ವೇಳೆ ಇತರೆ ವಾಹನಗಳ ನಡುವೆ ಟ್ರಾಫಿಕ್‌ನಲ್ಲಿ ಆಂಬುಲೆನ್ಸ್‌ವೊಂದು ಸಿಲುಕಿತ್ತು.
Advertisement
ಯೋಗಿ ಆದಿತ್ಯನಾಥ್ ಅವರು ತಮ್ಮ ವಾಹನ ಹಾಗೂ ಬೆಂಗಾವಲು ವಾಹನಗಳ ಸುಗಮ ಸಂಚಾರಕ್ಕಾಗಿ, ಟ್ರಾಫಿಕ್‌ನಲ್ಲಿ ನಿಂತಿದ್ದ ಆಂಬುಲೆನ್ಸ್ ಕಂಡ ತಕ್ಷಣ, ಅವರು ತಮ್ಮ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿದರು. ನಂತರ ಆಂಬುಲೆನ್ಸ್‌ಗೆ ಹೋಗಲು ಅವಕಾಶ ಮಾಡಿಕೊಡುವಂತೆ ಸೂಚನೆ ನೀಡಿದರು ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಚಂಡೀಗಢವನ್ನು ಪಂಜಾಬ್‌ಗೆ ವರ್ಗಾಯಿಸಿ: ಪಂಜಾಬ್ ಸಿಎಂ ನಿರ್ಣಯ ಮಂಡನೆ
Advertisement
ದ್ವಿಚಕ್ರ ವಾಹನ ಟ್ರಾಫಿಕ್‌ನಲ್ಲೇ ಇದ್ದ ಭಾಸ್ಕರ್ ಸಿಂಗ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾನವೀಯ ನಡೆಗೆ ಇದು ನಿದರ್ಶನವಾಗಿದೆ ಎಂದು ಹೊಗಳಿದ್ದಾರೆ.