– ರಾಮ ಹುಟ್ಟಿದ್ದು ಯುಪಿಯಲ್ಲಿ, ಹನುಮ ಜನಿಸಿದ್ದು ಕರ್ನಾಟಕದಲ್ಲಿ
– ಮೋದಿ ಅವರೇ ಈ ‘ಟೀಂ ಇಂಡಿಯಾ’ ಕ್ಯಾಪ್ಟನ್
– ಕರ್ನಾಟಕದ ವಿಕಾಸಕ್ಕೆ ಬಿಜೆಪಿ ಗೆಲ್ಲಿಸಿ ಎಂದ ಯೋಗಿ
ಮಂಡ್ಯ: ರಾಮ ಹುಟ್ಟಿದ ನಾಡು ಉತ್ತರ ಪ್ರದೇಶ. ಹನುಮ ಹುಟ್ಟಿದ ನಾಡು ಕರ್ನಾಟಕ. ಯುಪಿ ಮತ್ತು ಕರ್ನಾಟಕಕ್ಕೆ ಭಕ್ತ-ದೇವರ ಸಂಬಂಧ ಇದೆ. ಈ ಸಂಬಂಧ ಬಹಳ ದೊಡ್ಡದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅಭಿಪ್ರಾಯಪಟ್ಟರು.
Advertisement
ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿದ್ದ ಯೋಗಿ ಆದಿತ್ಯನಾಥ್ ಅವರು, ಮಂಡ್ಯದಲ್ಲಿ (Mandya) ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸಿದರು. ನಂತರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಇವತ್ತಿನದಲ್ಲ. ಅದು ತ್ರೇತಾ ಯುಗದಿಂದ ಇದೆ. ಹನುಮ ಹುಟ್ಟಿದ ನಾಡು ಕರ್ನಾಟಕ. ರಾಮ ಹುಟ್ಟಿದ ನಾಡು ಉತ್ತರ ಪ್ರದೇಶ. ಭಕ್ತ-ದೇವರ ಸಂಬಂಧ ಬಹಳ ದೊಡ್ಡದು. ಎಲ್ಲಿ ರಾಮ ದೇವಸ್ಥಾನ ಇರುತ್ತೋ ಅಲ್ಲಿ ಹನುಮಂತನ ದೇವಸ್ಥಾನ ಕೂಡ ಇರುತ್ತದೆ ಎಂದು ಹೇಳಿದರು.
Advertisement
Advertisement
ಮಂಡ್ಯದಲ್ಲಿ ಕುಂಭಮೇಳ ನಡೆಯಿತು. ಆದರೆ ಅದಕ್ಕೆ ನನಗೆ ಬರಲು ಆಗಲಿಲ್ಲ. ಆಧ್ಯಾತ್ಮಿಕ ಸಮ್ಮೇಳನಗಳು ಕೂಡ ಏಕ ಭಾರತ ಶ್ರೇಷ್ಠ ಭಾರತ ಎಂಬ ಮೋದಿ ಅವರ ಆಶಯಕ್ಕೆ ಪೂರಕವಾಗುತ್ತವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮೊದಲ ವರ್ಷದಲ್ಲಿ ಇಡೀ ವಿಶ್ವಕ್ಕೆ ಭಾರತದ ಶಕ್ತಿ ಗೊತ್ತಾಗುತ್ತದೆ ಎಂದು ತಿಳಿಸಿದರು.
Advertisement
ಬೆಂಗಳೂರು ಐಟಿ ಉದ್ಯಮದ ಬಹುದೊಡ್ಡ ಸ್ಥಳವಾಗಿದೆ. 2014 ರ ನಂತರ ಭಾರತದ ಸಾಮರ್ಥ್ಯ ದೊಡ್ಡ ಮಟ್ಟದಲ್ಲಿ ಬದಲಾಗಿದೆ. ಕಾಂಗ್ರೆಸ್ ಅಭಿವೃದ್ಧಿ ಬಗ್ಗೆ ಭಾಷಣ ಮಾಡುತ್ತದೆ. ಪಂಚವಾರ್ಷಿಕ ಯೋಜನೆ ಬಗ್ಗೆ ಕಾಂಗ್ರೆಸ್ ಸದಾ ಮಾತಾಡುತ್ತದೆ. ಯಾವ ಪಂಚವಾರ್ಷಿಕ ಯೋಜನೆ ಯಶಸ್ವಿಯಾದವು ಹೇಳಿ? ಮೋದಿ ಅವರ ಸರ್ಕಾರದಲ್ಲಿ ಅಭಿವೃದ್ಧಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಕಾಮಗಾರಿಗೆ ಶಿಲಾನ್ಯಾಸ ಮಾಡಿದ ದಿನವೇ ಆ ಕಾಮಗಾರಿ ಪೂರ್ಣ ಮಾಡುವ ದಿನಾಂಕ ನಿಗದಿ ಆಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ದೇಶ ಅಭಿವೃದ್ಧಿ ಆಗುತ್ತಿದೆ. ಅದು ದೇಶದ ಜನರ ಕಣ್ಣಿಗೆ ಕಾಣುತ್ತಿದೆ ಎಂದರು.
ಕರ್ಫ್ಯೂ, ದಂಗೆ ಯಾವುದೂ ಯುಪಿಯಲ್ಲಿ ಇಲ್ಲ. ಬರೀ ಅಭಿವೃದ್ಧಿ ಮಾತ್ರ. ಯುಪಿಯಲ್ಲಿ ಡಬಲ್ ಎಂಜಿನ್ ಸರ್ಕಾರದಿಂದ ದೊಡ್ಡ ಪ್ರಗತಿಯಾಗಿದೆ. ಸುರಕ್ಷತೆ ದೃಷ್ಟಿಯಿಂದ ಯುಪಿ ಸಾಕಷ್ಟು ಸುಧಾರಣೆ ಕಂಡಿದೆ. ಪಿಎಫ್‌ಐ ಬ್ಯಾನ್ ಮಾಡಲಾಗಿದೆ. ಆದರೆ ಕಾಂಗ್ರೆಸ್ ಪಿಎಫ್‌ಐ ಪರವಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಕನ್ನಡದಲ್ಲಿ ಮಾತನಾಡಿ ಮಂಡ್ಯ ಜನರ ಮನ ಗೆದ್ದ ಯೋಗಿ
ಯಡಿಯೂರಪ್ಪ, ಬೊಮ್ಮಾಯಿ ಇಬ್ಬರೂ ಒಳ್ಳೆ ಆಡಳಿತ ಮಾಡಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಸಮರ್ಥವಾಗಿ ಅನುಷ್ಠಾನಕ್ಕೆ ತರಲಾಗಿದೆ ಎಂದು ಬಣ್ಣಿಸಿದರು.
ಡಬಲ್ ಇಂಜಿನ್ ಸರ್ಕಾರದಲ್ಲಿ ಸುರಕ್ಷತೆ, ಸಮೃದ್ಧಿ ಸಾಧ್ಯ. ಏಕ ಭಾರತ ಶ್ರೇಷ್ಠ ಭಾರತದ ಆಶಯ ಈಡೇರಬೇಕು. ಟೀಂ ಇಂಡಿಯಾ ರೀತಿ ಮೋದಿ ಕಾರ್ಯ ಮಾಡುತ್ತಿದ್ದಾರೆ. ಮೋದಿ ಅವರೇ ಈ ಟೀಂ ಕ್ಯಾಪ್ಟನ್. ಈ ಟೀಂಗೆ ಒಳ್ಳೆಯ ಆಟಗಾರರು ಬೇಕು. ಅದಕ್ಕೆ ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಿ. ಕಾಂಗ್ರೆಸ್‌ದ್ದು ವೈಫಲ್ಯದ ಎಂಜಿನ್. ಬಿಜೆಪಿಯದ್ದು ಯಶಸ್ವಿಯಾದ ಡಬಲ್ ಎಂಜಿನ್ ಎಂದು ಹೊಗಳಿದರು.
ಮಂಡ್ಯ ಸಮೃದ್ಧಿಗೆ ಖ್ಯಾತಿ ಪಡೆದಿದೆ. ಕರ್ನಾಟಕದ ವಿಕಾಸಕ್ಕೆ ಬಿಜೆಪಿ ಬೇಕಿದೆ. ಮತ್ತೆ ಇಲ್ಲಿ ಡಬಲ್ ಎಂಜಿನ್ ಸರ್ಕಾರ ಬರಬೇಕು. ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ಮುಂದಿನ ವರ್ಷದ ಜನವರಿಯಲ್ಲಿ ಲೋಕಾರ್ಪಣೆ ಆಗುತ್ತದೆ. ಈ ಲೋಕಾರ್ಪಣೆಗೆ ಎಲ್ಲಾ ಹನುಮಂತ, ರಾಮ ಭಕ್ತರು ಬರಬೇಕು. ಅಯೋಧ್ಯೆಯಲ್ಲಿ ಕರ್ನಾಟಕದ ವಸತಿ ಗೃಹ ನಿರ್ಮಾಣ ಆಗುತ್ತದೆ ಎಂದು ಆಹ್ವಾನ ನೀಡಿದರು. ಇದನ್ನೂ ಓದಿ: JDS ಭದ್ರಕೋಟೆಯಲ್ಲಿ ಯೋಗಿ ಆದಿತ್ಯನಾಥ್ ರೋಡ್ ಶೋ