ಬೆಂಗಳೂರು: ಈಗಾಗಲೇ ಬೆಂಗಳೂರು ಐಟಿ-ಬಿಟಿ ಹಬ್ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಇನ್ನು ಮುಂದೆ ಬೆಂಗಳೂರಿಗೆ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಹಬ್ ಆಗುವ ಅವಕಾಶ ಸಿಕ್ಕಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.
ಬೆಂಗಳೂರಿನ ನೆಲಮಂಗಲದಲ್ಲಿ ಕ್ಷೇಮವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಾರಂಪರಿಕ ಚಿಕಿತ್ಸಾ ಮುಂದುವರಿಸಿಕೊಂಡು ಬಂದಿರೋದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬೆಂಗಳೂರು ಐಟಿ ಹಬ್ ಆಗಿ ಗುರುತಿಕೊಂಡಿದೆ. ಇದೀಗ ಶಿಕ್ಷಣ ಹಾಗೂ ಆಧ್ಯಾತ್ಮಿಕ ಎರಡು ಕ್ಷೇತ್ರಗಳಲ್ಲೂ ಕರ್ನಾಟಕದಲ್ಲಿ ಕೆಲಸ ನಡೆಯುತ್ತಿದೆ. ನಮ್ಮ ಪರಂಪರೆಯ ಚಿಕಿತ್ಸಾ ಕೇಂದ್ರಗಳು ಇಲ್ಲಿ ಮುಂದುವರೆದಿದೆ. ಬೆಂಗಳೂರಿನಲ್ಲಿ ಕ್ಷೇಮವನ ಸ್ಥಾಪನೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾ ಪ್ರಸಾದವಾಗಿದೆ. ಕೋವಿಡ್ ಸಂದರ್ಭದಲ್ಲಿ ಯೋಗದ ತಾಕತ್ತು ಗೊತ್ತಾಗಿದೆ ಎಂದರು.
Advertisement
Advertisement
ಭಾರತೀಯ ಯೋಗ ಪರಂಪರೆಯ ಮೂಲಕ ವಿಶ್ವದ ಜನರು ಒಂದಾಗಿದ್ದಾರೆ. ಸ್ವಸ್ಥ ಶರೀರ ಎಲ್ಲವನ್ನೂ ಸಂಪನ್ನಗೊಳಿಸುತ್ತದೆ ಎಂದ ಅವರು, ಮೋದಿ ಆಡಳಿತವನ್ನು ಹೊಗಳಿದರು. ಮೈಸೂರಿಗೆ ಯೋಗ ದಿನಕ್ಕಾಗಿ ಪ್ರಧಾನಮಂತ್ರಿಗಳು ಆಗಮಿಸಿದ್ದರು. ಯೋಗ ದಿನ ಆಚರಣೆ ಬಗ್ಗೆ ಉಲ್ಲೇಖಿಸಿದರು ಎನ್ನುವುದರ ಜೊತೆಗೆ ಕರ್ನಾಟಕದ ಬಗ್ಗೆ ಹೊಗಳಿದರು.
Advertisement
ಕರ್ನಾಟಕ ಮತ್ತು ಉತ್ತರ ಪ್ರದೇಶದ ನಡುವೆ ಮೊದಲಿನಿಂದಲೂ ಬಲಿಷ್ಠ ಸಂಬಂಧವಿದೆ. ಭಜರಂಗ ಬಲಿ ಕರ್ನಾಟಕದವನಾಗಿದ್ದಾನೆ. ರಾಮಸೇತುವೆ ನಿರ್ಮಾಣದ ಕೆಲಸವು ಆಂಜನೇಯನಿಂದಲೇ ಆಯಿತು ಎಂದು ಆಂಜನೇಯನನ್ನು ನೆನೆದರು. ನಾನು ಒಬ್ಬ ಯೋಗಿ, ಸ್ವಾಮಿ ನಿರ್ಮಲಾನಂದನಾಥ್ ಕೂಡಾ ಯೋಗಿ. ಅದೇ ರೀತಿ ವೀರೇಂದ್ರ ಹೆಗ್ಗಡೆ ಕೂಡಾ ಯೋಗಿಯ ರೂಪದಲ್ಲಿ ಧರ್ಮಸ್ಥಳದ ಮೂಲಕ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
ವಿರೇಂದ್ರ ಹೆಗ್ಗಡೆ ಅವರು ಆಧ್ಯಾತ್ಮಿಕ ಜೊತೆಗೆ ಶಿಕ್ಷಣ ಸೇರಿದಂತೆ ಅನೇಕ ವರ್ಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು ಇವತ್ತು ಐಟಿ ಹಬ್ ಆಗಿ ಗುರುತಿಸಿಕೊಂಡಿದೆ. ಭಾರತದ ಪಾರಂಪರಿಕ ವೈದ್ಯಕೀಯ ಪದ್ಧತಿಯನ್ನು ಮುನ್ನೆಲೆಗೆ ತಂದಿದ್ದಕ್ಕಾಗಿ ವೀರೇಂದ್ರ ಹೆಗ್ಗಡೆಯವರೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ – ಮತದಾರರ ಪಟ್ಟಿಗಾಗಿ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಭಿನ್ನಮತ
ಕರ್ನಾಟಕ ಸಿಎಂ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿ ಪಥದ ಕಡೆ ಹೋಗುತ್ತಿದೆ. ಸಿಎಂ ಬೊಮ್ಮಾಯಿ ಹಾಗೂ ಅವರ ಮಂತ್ರಿಮಂಡಳ ಉತ್ತಮ ಕೆಲಸ ಮಾಡುತ್ತಿದೆ ಎಂದ ಅವರು, ಕರ್ನಾಟಕದಲ್ಲಿ ಆಯುಷ್ ವಿವಿ ಇದೆ. ಅದೇ ರೀತಿ ಯುಪಿಯಲ್ಲಿ ಆಯುಷ್ ವಿವಿ ಮಾಡ್ತಿದ್ದೇವೆ ಎಂದರು. ಇದನ್ನೂ ಓದಿ: ಆರೋಗ್ಯ ಸರಿಯಿಲ್ಲದೆ ಒದ್ದಾಡುತ್ತಿದ್ದೆ, ಹೀಗಾಗಿ 2 ದಿನ ತಡವಾಗಿದೆ: ವಿ ಸೋಮಣ್ಣ
ಉತ್ತರ ಪ್ರದೇಶದಲ್ಲಿ ಆಯುಷ್ ವಿವಿ ಸ್ಥಾಪನೆ ವೇಳೆ ನಾನು ಡಾ. ನಾಗೇಂದ್ರ ಅವರ ಮಾರ್ಗದರ್ಶನ ಪಡೆದಿದ್ದೆ. ಕರ್ನಾಟಕದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ವಿಕಾಸದತ್ತ ಕೆಲಸ ಮಾಡುತ್ತಿದೆ. ಬೊಮ್ಮಾಯಿ ಸಮೃದ್ಧ ಮತ್ತು ಸುರಕ್ಷಿತ ಕರ್ನಾಟಕಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ದೇಶದ ಬಲಿಷ್ಠ ಅರ್ಥ ವ್ಯವಸ್ಥೆಯ ರಾಜ್ಯವಾಗಲಿ ಎಂದು ಆಶಿಸಿದರು.