ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಭಿನ್ನಮತ ಶುರುವಾಗಿದ್ದು, ಮೂವರು ಹಿರಿಯ ಸಂಸದರು ಮತದಾರರ ಪಟ್ಟಿಯನ್ನು ಬಹಿರಂಗಗೊಳಿಸುವಂತೆ ಹೈಕಮಾಂಡ್ ನಾಯಕರಿಗೆ ಸಾರ್ವಜನಿಕವಾಗಿ ಒತ್ತಾಯಿಸಿದ್ದಾರೆ.
ಜಿ 23 ನಾಯಕ ಆನಂದ್ ಶರ್ಮಾ ಮೊದಲು ಈ ಬೇಡಿಕೆಯನ್ನು ಇಟ್ಟಿದ್ದರು. ಭಾನುವಾರ ನಡೆದ ಸಿಡಬ್ಲೂಸಿ ಸಭೆಯಲ್ಲಿ ಮತದಾರರ ಪಟ್ಟಿ ನೀಡುವಂತೆ ಒತ್ತಾಯಿಸಿದ್ದರು. ಇದಾದ ಬಳಿಕ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಾಗಿ ಪಟ್ಟಿ ನೀಡಬೇಕು. ಇದು ಅಭ್ಯರ್ಥಿಗಳಿಗೆ ಸಹಾಯವಾಗಲಿದೆ ಎಂದು ಮನೀಷ್ ತಿವಾರಿ ಹೇಳಿದ್ದರು. ಈ ಹೇಳಿಕೆಗೆ ಸಂಸದ ಶಶಿ ತರೂರ್ ಹಾಗೂ ಕಾರ್ತಿ ಚಿದಂಬರಂ ಕೂಡಾ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ಮದುವೆಯಾಗೋ ನೆಪದಲ್ಲಿ ಕಾರ್ಯಕರ್ತೆ ಮೇಲೆ ತೆಲಂಗಾಣದ ಕಾಂಗ್ರೆಸ್ ಮುಖಂಡನಿಂದ ಅತ್ಯಾಚಾರ
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ, ಪಿಸಿಸಿ ಪ್ರತಿನಿಧಿಗಳು ಮತದಾರರ ಪಟ್ಟಿಯನ್ನು ರಾಜ್ಯ ಪ್ರಧಾನ ಕಚೇರಿಯಲ್ಲಿ ವೀಕ್ಷಿಸಬಹುದು, ಕ್ರೋಢೀಕೃತ ಪಟ್ಟಿಯನ್ನು ಅಭ್ಯರ್ಥಿಗಳಿಗೆ ನೀಡಲಾಗುವುದು ಎಂದರು.
Advertisement
ಎಐಸಿಸಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಮತದಾರರ ಪಟ್ಟಿಗಳನ್ನು ಪ್ರಕಟಿಸುವ ಬೇಡಿಕೆಯನ್ನು ತಿರಸ್ಕರಿಸಿದರು. ಇದು ಮನೆಯೊಳಗಿನ ಕಾರ್ಯವಿಧಾನವಾಗಿದ್ದು, ಇದನ್ನು ಎಲ್ಲರಿಗೂ ನೋಡುವಂತೆ ಪ್ರಕಟಿಸಬಾರದು. ಅಂತಹ ಯಾವುದೇ ಅಭ್ಯಾಸ ಪಕ್ಷದಲ್ಲಿಲ್ಲ, ನಾವು ಹಳೆಯ ಪದ್ಧತಿಯನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
Advertisement
ಹೈಕಮಾಂಡ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಮನೀಷ್ ತಿವಾರಿ, ಸಾರ್ವಜನಿಕವಾಗಿ ಲಭ್ಯವಿರುವ ಮತದಾರರ ಪಟ್ಟಿಯಿಲ್ಲದೇ ನ್ಯಾಯಯುತ ಮತ್ತು ಮುಕ್ತ ಚುನಾವಣೆ ಹೇಗೆ ನಡೆಯುತ್ತದೆ? ನ್ಯಾಯಯುತ ಮತ್ತು ಮುಕ್ತ ಪ್ರಕ್ರಿಯೆಯ ಮೂಲತತ್ವವೆಂದರೆ ಮತದಾರರ ಹೆಸರುಗಳು ಮತ್ತು ವಿಳಾಸಗಳು “ಯಾರು ಮತದಾರರು ಎಂದು ತಿಳಿಯಲು ಯಾಕೆ ಪ್ರತಿ ಪಿಸಿಸಿ ಕಚೇರಿಗೆ ಏಕೆ ಹೋಗಬೇಕು ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪಂದ್ಯ ಸೋತ್ರೂ ರೋಮ್ಯಾಂಟಿಕ್ ಮೂಡ್- ಗೆಳತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ
ಯಾರು ನಾಮ ನಿರ್ದೇಶನ ಮಾಡಬಹುದು ಮತ್ತು ಯಾರಿಗೆ ಮತ ಹಾಕಬಹುದು ಎಂಬುದು ಎಲ್ಲರಿಗೂ ತಿಳಿದಿರಬೇಕು. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಶಿ ತರೂರ್ ಹೇಳಿದರು. ಸುಧಾರಣಾವಾದಿಗಳು ಬಂಡುಕೋರರಲ್ಲ ಎಂದು ಟ್ವೀಟ್ ಮಾಡಿದ ಕಾರ್ತಿ ಚಿದಂಬರಂ, “ಪ್ರತಿ ಚುನಾವಣೆಗೆ ಉತ್ತಮವಾಗಿ ವ್ಯಾಖ್ಯಾನಿಸಲಾದ ಮತ್ತು ಸ್ಪಷ್ಟವಾದ ಎಲೆಕ್ಟೋರಲ್ ಕೊಲೇಜು ಬೇಕು ಎಂದು ಹೇಳಿದ್ದಾರೆ.