ಲಕ್ನೋ: ಉತ್ತರ ಪ್ರದೇಶ ರಾಜ್ಯದ ಯೋಗಿ ಆದಿತ್ಯನಾಥ್ ಸರ್ಕಾರ ಗೋವುಗಳ ಎಣಿಕೆಗಾಗಿ ಸರ್ವೆ ನಡೆಸಲು ಮುಂದಾಗಿದೆ. ಮಂಗಳವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಕ್ಯಾಬಿನೇಟ್ ಮೀಟಿಂಗ್ ನಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಗೋವುಗಳ ಎಣಿಕೆಯ ಸಮೀಕ್ಷೆಗಾಗಿ ಯೋಗಿ ಸರ್ಕಾರ ಒಟ್ಟು 7.86 ಕೋಟಿ ರೂ. ಹಣವನ್ನು ಮೀಸಲಿರಿಸಿದೆ. ಗೋವುಗಳ ಸರ್ವೆ ಜೊತೆ ಜೊತೆಯಲ್ಲಿ ಎಮ್ಮೆ, ಹಂದಿ, ಮೇಕೆ ಮತ್ತು ಕುರಿಗಳ ಎಣಿಕೆ ಕಾರ್ಯ ನಡೆಯಲಿದೆ.
Advertisement
Advertisement
2012ರ ಸರ್ವೆ ಪ್ರಕಾರ ಉತ್ತರ ಪ್ರದೇಶ ರಾಜ್ಯದ ಜನಸಂಖ್ಯೆ 2.5 ಕೋಟಿಯಿದ್ದರೆ, 3.6 ಕೋಟಿ ಎಮ್ಮೆಗಳು, 1.55 ಕೋಟಿ ಕುರಿಗಳು ಮತ್ತು 13.34 ಲಕ್ಷ ಹಂದಿಗಳು ಇದ್ದವು ಎಂದು ಅಂಕಿ ಅಂಶಗಳು ಹೇಳುತ್ತವೆ. ಈ ಬಾರಿ ನಡೆಯುವ ಸರ್ವೆ ಮೂಲಕ ಸದ್ಯ ಎಷ್ಟು ಹಸುಗಳು ಮತ್ತು ಕರುಗಳು ರಾಜ್ಯದಲ್ಲಿವೆ ಎಂಬುದು ನಿಖರವಾಗಿ ತಿಳಿಯಲಿದೆ ಎಂದು ರಾಜ್ಯ ಸರ್ಕಾರದ ವಕ್ತಾರರೊಬ್ಬರು ತಿಳಿಸಿದ್ದಾರೆ.
Advertisement
ಇನ್ನೂ ಇದೇ ಕ್ಯಾಬಿನೆಟ್ ನಲ್ಲಿ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲು ಚಿಂತನೆ ನಡೆಸಲಾಗಿದೆ. ಪ್ರಾಣಿಗಳ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮೇಳದಲ್ಲಿ ಎಲ್ಲ ಸಾಕು ಪ್ರಾಣಿಗಳಿಗೆ ಉಚಿತ ಚಿಕಿತ್ಸೆಯೊಂದಿಗೆ ವಿಮೆಯನ್ನು ಮಾಡಿಸಲಾಗುತ್ತದೆ. ವಿಮೆಯ ಪ್ರೀಮಿಯಂನ್ನು ಹಸುಗಳು ಮಾಲೀಕರು ಪಡೆದುಕೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ವಕ್ತಾರರಾದ ಸಿದ್ಧಾರ್ಥನಾಥ್ ಸಿಂಗ್ ಹೇಳಿದ್ದಾರೆ.