ಲಖ್ನೋ: ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ರಾಜ್ಯದ ನೂತನ ಸಿಎಂ ಆಗಿ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಅಲ್ಲದೆ ಉತ್ತರ ಪ್ರದೇಶಕ್ಕೆ ಇಬ್ಬರು ಡಿಸಿಎಂಗಳನ್ನೂ ಆಯ್ಕೆ ಮಾಡಲಾಗಿದೆ. 5 ಬಾರಿ ಸಂಸದರಾಗಿ ಆಯ್ಕೆ ಆಗಿರುವ 44 ವರ್ಷದ ಆದಿತ್ಯನಾಥ್ ಅವರು ಮುಂದಿನ ಸಿಎಂ ಎಂದು ಬಿಜೆಪಿ ಅಧಿಕೃತವಾಗಿ ಘೋಷಣೆ ಮಾಡಿದೆ. ನಾಳೆ (ಭಾನುವಾರ) ಮಧ್ಯಾಹ್ನ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಗೋರಖ್‍ಪುರ ಕ್ಷೇತ್ರದ ಸಂಸದರಾಗಿರುವ ಯೋಗಿ ಆದಿತ್ಯನಾಥ್ ಹಿಂದೂ ಯುವ ವಾಹಿನಿಯ ಸಂಸ್ಥಾಪಕರಾಗಿದ್ದಾರೆ. ಪಕ್ಕಾ ಸನ್ಯಾಸಿ ಆಗಿರುವ ಆದಿತ್ಯನಾಥ್ ಹೈಕಮಾಂಡ್ ತುಂಬಾ ಹತ್ತಿರವಾದ ವ್ಯಕ್ತಿ. ಗೋರಖ್‍ಪುರದ ಗೋರಖ್‍ನಾಥ್ ಮಠದ ಪೀಠಾಧಿಪತಿಗಳು.
Advertisement
ಉತ್ತರ ಪ್ರದೇಶದಲ್ಲಿ ಪ್ರಚಂಡ ಬಹುಮತಗಳಿಂದ ಗೆಲವು ಕಂಡಿದ್ದ ಬಿಜೆಪಿಗೆ ಸಿಎಂ ಆಯ್ಕೆ ವಿಚಾರ ಕಗ್ಗಂಟಾಗಿತ್ತು. ಇಂದು ಮಧ್ಯಾಹ್ನದವರೆಗೆ ಉತ್ತರ ಪ್ರದೇಶ ಸಿಎಂ ಪಟ್ಟಕ್ಕೆ ಮನೋಜ್ ಸಿನ್ಹಾ, ರಾಜನಾಥ್ ಸಿಂಗ್ ಮುಂತಾದ ಮುಖಂಡರ ಹೆಸರುಗಳು ಕೇಳಿಬಂದಿದ್ದವು.
Advertisement
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 403 ಸೀಟ್‍ಗಳಲ್ಲಿ 312 ಸೀಟ್‍ಗಳನ್ನು ಗೆಲ್ಲುವ ಮೂಲಕ ವಿಜಯಪತಾಕೆ ಹಾರಿಸಿದೆ.
Advertisement
ನಾಳೆ ಮಧ್ಯಾಹ್ನ 2.15ಕ್ಕೆ ಲಖ್ನೋದಲ್ಲಿರುವ ಸ್ಮøತಿ ಉಪವನ ಕಾಂಪ್ಲೆಕ್ಸ್‍ನಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಇಂದು ಸಂಜೆ ನಡೆದ ಸಭೆಯಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನೂ ಆರಿಸಲಾಗಿದೆ. ಲಖ್ನೋ ಮೇಯರ್ ದಿನೇಶ್ ಶರ್ಮಾ ಹಾಗೂ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ ಪ್ರಸಾದ್ ಮೌರ್ಯ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.
Advertisement