ಗಾಳಿಪಟ 2 (Gaalipata 2) ಈ ವರ್ಷ ಬಿಡುಗಡೆಗೊಂಡು ಭರ್ಜರಿಯಾಗಿ ಪ್ರೇಕ್ಷಕರ ಮನಗೆದ್ದ ಸೂಪರ್ ಹಿಟ್ ಸಿನಿಮಾ. ಕನ್ನಡ ಭಾಷಾ ವಿಶೇಷತೆ , ಅಸ್ಮಿತೆಯನ್ನು ಸಾರುವ ಈ ಚಿತ್ರ ಇದೇ ಶನಿವಾರ ಮತ್ತು ಭಾನುವಾರ ಸಂಜೆ 4:30ಕ್ಕೆ ಕನ್ನಡದ ನವೆಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ.
ತನ್ನ ವೀಕ್ಷಕರಿಗೆ ವಿಶೇಷ ಕಾರ್ಯಕ್ರಮಗಳು ನೀಡುವುದರ ಮೂಲಕ ಸದಾ ಮುಂಚೂಣಿಯಲ್ಲಿರುವ ಜೀ ಕನ್ನಡ ವಾಹಿನಿ ಈಗಾಗಲೇ ಹಲವಾರು ಸೂಪರ್ ಹಿಟ್ ಕನ್ನಡ ಸಿನಿಮಾಗಳನ್ನು ಪ್ರಸಾರ ಮಾಡಿದ್ದು ಇದೀಗ ಗಾಳಿಪಟ 2 ಚಲನಚಿತ್ರವನ್ನು ತನ್ನ ವೀಕ್ಷಕರ ಮುಂದಿಡಲು ಸಜ್ಜಾಗಿದೆ. ಇದನ್ನೂ ಓದಿ:Breaking-ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್ ಬಳಕೆ : ರಾಹುಲ್ ವಿರುದ್ಧ ಎಫ್ಐಆರ್
ವಿಕಟ ಕವಿ, ಯೋಗರಾಜ್ ಭಟ್ (Yogaraj Bhatt) ನಿರ್ದೇಶನವಿರುವ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) , ದಿಗಂತ್ (Diganth), ಪವನ್ ಕುಮಾರ್ (Pawan Kumar), ಹಿರಿಯನಟ ಅನಂತ್ ನಾಗ್ (Ananth Nag) , ಶರ್ಮಿಳಾ ಮಾಂಡ್ರೆ ಸೇರಿದಂತೆ ಇನ್ನೂ ಅನೇಕ ಜನಪ್ರಿಯ ಕಲಾವಿದರು ಅಭಿನಯಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಅವರು ಸಂಗೀತ ಸಂಯೋಜನೆ ಮಾಡಿದ್ದು ಹಾಡುಗಳು ಸಂಗೀತಪ್ರಿಯರ ಹೃದಯಕ್ಕೆ ಹತ್ತಿರವಾಗಿರುವುದು ವಿಶೇಷ.
ಅಳು, ನಗು ಸಂಬಂಧಗಳ ಮೌಲ್ಯವನ್ನು ತಿಳಿಸುವ ಬದುಕಿನ ಭಾವುಕತೆ ತೆರೆದಿಡುತ್ತಲೇ ತಾಜಾ ಅನುಭವ ನೀಡುವ ಸಿನಿಮಾ ಇದ್ದಾಗಿದ್ದು ಬಾಕ್ಸ್ ಆಫೀಸ್ನ್ನೂ ಲೂಟಿ ಮಾಡಿತ್ತು. ಅಷ್ಟೇ ಅಲ್ಲದೆ ಜೀ5 ನಲ್ಲೂ 100Cr+ ವೀಕ್ಷಣೆ ಪಡೆದ ಚಲನಚಿತ್ರವಾಗಿದೆ ಈ ಗಾಳಿಪಟ 2. ಇನ್ನೂ ಇದೇ ಶನಿವಾರ ಮತ್ತು ಭಾನುವಾರ ಸಂಜೆ 4:30ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.