ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಪದ್ಮ ಪ್ರಶಸ್ತಿ ಪುರಸ್ಕಾರ ಸಮಾರಂಭ ಅಪರೂಪದ ಕ್ಷಣಗಳಿಗೆ ಸಾಕ್ಷಿ ಆಯಿತು. ವಾರಣಾಸಿಯ 125 ವರ್ಷ ವಯಸ್ಸಿನ ಯೋಗ ಗುರು ಸ್ವಾಮಿ ಶಿವಾನಂದ ಅವರು ಪ್ರಶಸ್ತಿ ಸ್ವೀಕರಿಸುವ ಮುನ್ನ ಪ್ರಧಾನಿ ಮೋದಿಗೆ ಪಾದಾಭಿವಂದನೆ ಮಾಡಿದರು. ಇದಕ್ಕೆ ಪ್ರತಿಯಾಗಿ ಮೋದಿ ಕೂಡ ಶಿರಬಾಗಿ ನಮಸ್ಕರಿಸಿದರು.
Advertisement
ರಾಷ್ಟ್ರಪತಿಗಳಿಗೂ ಸ್ವಾಮಿ ಶಿವಾನಂದರು ನಮಸ್ಕರಿಸಿದರು. ರಾಷ್ಟ್ರಪತಿಗಳು ಕೂಡಲೇ ಅವರನ್ನು ಎಬ್ಬಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಜನರಲ್ ಬಿಪಿನ್ ರಾವತ್, ಗೀತಾ ಪ್ರೆಸ್ ಮಾಲೀಕರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಂಗ್ರೆಸ್ ಹಿರಿಯ ನಾಯಕ, ಪದ್ಮಭೂಷಣ ಗುಲಾಂ ನಬಿ ಆಜಾದ್ ಸೇರಿ ಒಟ್ಟು 63 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದನ್ನೂ ಓದಿ: ರಾಜಕೀಯ ಪಕ್ಷಗಳು ಜನರ ನಡುವೆ ಒಡಕು ಮೂಡಿಸುತ್ತಿವೆ: ಗುಲಾಂ ನಾಬಿ ಅಜಾದ್
Advertisement
Advertisement
ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಸೇರಿದಂತೆ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಶೂಟರ್ ಅವನಿ ಲೇಖರಾ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಜೊತೆಗೆ ಹಾಕಿ ಕ್ರೀಡಾಪಟು ವಂದನಾ ಕಟಾರಿಯಾ ಪ್ರಶಸ್ತಿ ಪಡೆದರು. ಇದನ್ನೂ ಓದಿ: ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ