ಶ್ರೀನಗರ: ಕಾಂಗ್ರೆಸ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳು ಜನರ ನಡುವೆ ಒಡಕು ಮೂಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಾಬಿ ಅಜಾದ್ ಬೇಸರ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವನ್ನು ತೊರೆಯುವುದಾಗಿ ಸೂಚಿಸಿದ್ದಾರೆ.ನಾವು ಸಮಾಜದಲ್ಲಿ ಬದಲಾವಣೆಯನ್ನು ತರಬೇಕಾಗಿದೆ. ಇದರಿಂದಾಗಿ ರಾಜಕೀಯಕ್ಕೆ ನಿವೃತ್ತಿ ಹೊಂದಿ ಸಮಾಜ ಸೇವೆಯನ್ನು ಮಾಡಲು ಪ್ರಾರಂಭಿಸಿದ್ದೇನೆ ಎಂದು ತಿಳಿಯುವುದು ದೊಡ್ಡ ವಿಷಯವಲ್ಲ ಎಂದರು.
Advertisement
Advertisement
ಇತ್ತಿಚೆಗೆ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿತ್ತು. ಇದಾದ ನಂತರ ಕಾಂಗ್ರೆಸ್ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು. ಇದನ್ನೂ ಓದಿ: ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ
Advertisement
ರಾಜಕೀಯ ಪಕ್ಷಗಳು ಧರ್ಮ, ಜಾತಿ ಮತ್ತು ಇತರ ವಿಷಯಗಳ ಮೇಲೆ ಜನರ ನಡುವೆ ವಿಭಜನೆಯನ್ನು ಸೃಷ್ಟಿಸುವ ಕೆಲಸ ಮಾಡುತ್ತಿವೆ. ಅದು ನನ್ನ ಪಕ್ಷವಾಗಲಿ ಅಥವಾ ಯಾವುದೇ ಇತರ ಪ್ರಾದೇಶಿಕವಾಗಲಿ, ನಾನು ಯಾರನ್ನು ಕ್ಷಮಿಸಲ್ಲ ಎಂದು ಕಿಡಿಕಾರಿದ್ದರು.
Advertisement
ಭಾರತದಲ್ಲಿ ರಾಜಕೀಯ ಎಷ್ಟು ಕೊಳಕು ಆಗುತ್ತಿದೆ ಎಂದರೆ ಕೆಲವೊಮ್ಮೆ ನಾವು ಮನುಷ್ಯರೇ ಎಂದು ಯಾರಾದರೂ ಅನುಮಾನಿಸಬೇಕಾಗುತ್ತದೆ ಎಂದ ಅವರು, ನಾಗರಿಕ ಸಮುದಾಯವು ಒಗ್ಗಟ್ಟಿನಿಂದ ಇರಬೇಕು. ಜೊತೆಗೆ ದುಷ್ಟರ ವಿರುದ್ಧ ಹೋರಾಡಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ಮೇಕೆದಾಟು ಯೋಜನೆ- ರಾಜ್ಯ ಸರ್ಕಾರ ನಿರ್ಧಾರದ ವಿರುದ್ಧ ತ.ನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ