ವಾಷಿಂಗ್ಟನ್: ಯೋಗ ಭಾರತದಿಂದ ಬಂದಿದ್ದು, ಅತ್ಯಂತ ಹಳೆಯ ಸಂಪ್ರದಾಯವಾಗಿದೆ. ಯೋಗಾಸನಗಳನ್ನು ಮಾಡಲು ಯಾವುದೇ ವಯಸ್ಸು, ಲಿಂಗ ಭೇದವಿಲ್ಲ. ಮಾತ್ರವಲ್ಲದೆ ಪ್ರತಿಯೊಬ್ಬರ ಆರೋಗ್ಯದ ಮಟ್ಟಕ್ಕೂ ಇದು ಹೊಂದಿಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ.
ವಿಶ್ವಸಂಸ್ಥೆಯ (UN) ಪ್ರಧಾನ ಕಚೇರಿಯಲ್ಲಿ ವಿಶ್ವ ಯೋಗ ದಿನದ (International Yoga Day) ನೇತೃತ್ವ ವಹಿಸಿದ ಮೋದಿ, ಕಳೆದ ವರ್ಷ ಇಡೀ ವಿಶ್ವವೇ 2023ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಭಾರತದ ಪ್ರಸ್ತಾಪವನ್ನು ಒಮ್ಮತದಿಂದ ಒಪ್ಪಿಕೊಂಡಿತು. ಇದೀಗ ಜಗತ್ತು ಈ ವಿಶೇಷ ದಿನಕ್ಕಾಗಿ ಒಟ್ಟುಗೂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ಕಾರ್ಯಕ್ರಮ ಸಂಪೂರ್ಣ ಮಾನವೀಯತೆಯ ಸಂಗಮ ಸ್ಥಳದಲ್ಲಿ ನಡೆಯುತ್ತಿದೆ. ನಿಮ್ಮೆಲ್ಲರನ್ನೂ ನೋಡಲು ನನಗೆ ಸಂತೋಷವಾಗಿದೆ ಹಾಗೂ ವಿಶ್ವ ಯೋಗ ದಿನವನ್ನಾಚರಿಸಲು ಬಂದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನಾನೂ ಸಹ ಮೋದಿಯ ಅಭಿಮಾನಿಯಾಗಿದ್ದೇನೆ: ಎಲಾನ್ ಮಸ್ಕ್
Advertisement
ಇಂದು ಇಲ್ಲಿ ಪ್ರತಿಯೊಂದು ರಾಷ್ಟ್ರದಿಂದ ಪ್ರತಿನಿಧಿಯಾಗಿ ಸೇರಿದ್ದಾರೆ ಎಂದು ಆಯೋಜಕರು ನನಗೆ ಹೇಳಿದರು. ಯೋಗ ಎಂದರೆ ಒಂದುಗೂಡಿಸುವುದು. ಆದ್ದರಿಂದ ನೀವು ಒಟ್ಟಿಗೆ ಸೇರುತ್ತಿರುವುದು ಯೋಗದ ಮತ್ತೊಂದು ರೂಪದ ಅಭಿವ್ಯಕ್ತಿಯಾಗಿದೆ ಎಂದು ಮೋದಿ ಹೇಳಿದ್ದಾರೆ.
Advertisement
ಯೋಗವು ಹಕ್ಕುಸ್ವಾಮ್ಯಗಳು, ಪೇಟೆಂಟ್‌ಗಳಿಂದ ಮಾತ್ರವಲ್ಲದೇ ದುಬಾರಿ ಪಾವತಿಗಳಿಂದಲೂ ಮುಕ್ತವಾಗಿದೆ. ಯೋಗ ಯಾವುದೇ ವಯಸ್ಸು, ಲಿಂಗ ಹಾಗೂ ಫಿಟ್‌ನೆಸ್ ಮಟ್ಟಕ್ಕೂ ಹೊಂದಿಕೊಳ್ಳುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರದ ದ್ವೇಷ ರಾಜಕಾರಣದಿಂದ ಜು.1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನ: ಸಿಎಂ