Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಮಲಲ್ಲಾ ಮೂರ್ತಿ ಆಯ್ಕೆ ಅಂತಿಮವಾಗಿಲ್ಲ – ಟ್ರಸ್ಟ್‌ನಿಂದ ಸ್ಪಷ್ಟನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Ayodhya Ram Mandir | ರಾಮಲಲ್ಲಾ ಮೂರ್ತಿ ಆಯ್ಕೆ ಅಂತಿಮವಾಗಿಲ್ಲ – ಟ್ರಸ್ಟ್‌ನಿಂದ ಸ್ಪಷ್ಟನೆ

Ayodhya Ram Mandir

ರಾಮಲಲ್ಲಾ ಮೂರ್ತಿ ಆಯ್ಕೆ ಅಂತಿಮವಾಗಿಲ್ಲ – ಟ್ರಸ್ಟ್‌ನಿಂದ ಸ್ಪಷ್ಟನೆ

Public TV
Last updated: January 2, 2024 10:47 pm
Public TV
Share
2 Min Read
Arun Yogiraj 1
SHARE

ಅಯೋಧ್ಯೆ: ಜನವರಿ 22ರಂದು ರಾಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾ ಮೂರ್ತಿಯ (Ram Lalla Idols)ಆಯ್ಕೆ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ರಾಮಮಂದಿರ ಟ್ರಸ್ಟ್‌ನ (Ram Janmabhoomi Teerth Kshetra Trust) ಪದಾಧಿಕಾರಿಗಳು ತಿಳಿಸಿದ್ದಾರೆ.

ಶ್ರೀರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೆ ಮೂರು ಬಾಲರಾಮನ ಮೂರ್ತಿಗಳು ಸಿದ್ಧದ್ದವಾಗಿವೆ. ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಮತ್ತು ಇತರೆ ಸ್ವಾಮೀಜಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಈ ಸಂಬಂಧ ತೆಗೆದುಕೊಳ್ಳುವ ತೀರ್ಮಾನವನ್ನು ಸೂಕ್ತ ಕಾಲದಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು ಟ್ರಸ್ಟ್‌ನ ಕಚೇರಿ ಉಸ್ತುವಾರಿಯಾಗಿರುವ ಪ್ರಕಾಶ್ ಗುಪ್ತಾ (Prakash Gupta) ಅವರು ತಿಳಿಸಿದ್ದಾರೆ.

ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ಶಿಲ್ಪಿಗಳಾದ ಕರ್ನಾಟಕ ರಾಜ್ಯ ಮೈಸೂರು ಮೂಲದ ಅರುಣ್ ಯೋಗಿರಾಜ್ (Arun Yogiraj), ಗಣೇಶ್ ಭಟ್ ಮತ್ತು ಜೈಪುರದ ಸತ್ಯನಾರಾಯಣ ಪಾಂಡೆ ಅವರ ಮೂರ್ತಿಗಳನ್ನ ಕೆತ್ತನೆ ಮಾಡಿದ್ದಾರೆ. ಕರ್ನಾಟಕ ಇಬ್ಬರು ಶಿಲ್ಪಿಗಳು ಮೈಸೂರಿನ ಕೃಷ್ಣಶಿಲೆಯನ್ನು ಬಳಕೆ ಮಾಡಿ ಮೂರ್ತಿ ಕೆತ್ತನೆ ಮಾಡಿದ್ದಾರೆ. ಸತ್ಯನಾರಾಯಣಪಾಂಡೆ ಅವರು ರಾಜಸ್ಥಾನದಿಂದ ತರಿಸಲಾಗಿದ್ದ ಕಲ್ಲನ್ನು ಬಳಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಅಕ್ಕಿ, ತರಕಾರಿ, ಸಾಂಬಾರ್ ಪದಾರ್ಥಗಳ ಅರ್ಪಣೆ – ಪ್ರಾಣಪ್ರತಿಷ್ಠೆಗೆ ಶ್ರೀರಾಮ ಭಕ್ತರ ಕಾಣಿಕೆ

ಅಂತಿಮವಾಗಿ ಪ್ರತಿಷ್ಠಾಪಿಸಬೇಕಾದ ರಾಮಲಲ್ಲಾ ಮೂರ್ತಿಯನ್ನು ಆಯ್ಕೆ ಮಾಡುವ ಮುನ್ನ ಅದರ ದೀರ್ಘಾವಧಿ ಬಾಳಿಕೆ ಕುರಿತು ತಾಂತ್ರಿಕ ವರದಿ ಪಡೆಯಲಾಗುತ್ತದೆ. ನಂತರ ಆಯ್ಕೆಯಾಗುವ ಮೂರ್ತಿಯನ್ನ ಜನವರಿ 22ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಹೋಗಲು ಹಿಂದೇಟು ಹಾಕ್ತಿದ್ದವರು ಈಗ ಆಹ್ವಾನ ಬಯಸ್ತಿದ್ದಾರೆ: ಯೋಗಿ ಆದಿತ್ಯನಾಥ್‌

ಈಗಾಗಲೇ ಮೈಸೂರು ಮೂಲದ ಶಿಲ್ಪಿ ಅರುಣ್‌ ಯೋಗೀರಾಜ್‌ ಅವರು ಕೆತ್ತನೆ ಮಾಡಿರುವ ರಾಮಲಲ್ಲಾ ಮೂರ್ತಿ ಫೈನಲ್‌ ಎಂಬ ಮಾತುಗಳು ಕೇಳಿಬರುತ್ತಿವೆ.

ಬಾಲರಾಮನ ಮೂರ್ತಿ ವಿಶೇಷ ಏನು?
ರಾಮಲಲ್ಲಾ ಮೂರ್ತಿಯು 5 ವರ್ಷದ ಬಾಲಕನ ರೂಪ ಹೊದಿಂದ್ದು ಧನುರ್ಧಾರಿ ರೂಪದಲ್ಲಿ ಕೆತ್ತಲಾಗಿದೆ. ಕಮಲದ ಮೇಲೆ ಕುಳಿತಿದ್ದು, ಪವಿತ್ರ ಕೃಷ್ಣಶಿಲೆಯಲ್ಲಿ ನಿರ್ಮಾಣವಾಗಿದೆ. 51 ಇಂಚು ಎತ್ತರವನ್ನು (4.3 ಅಡಿ) ಹೊಂದಿದೆ. ಇದನ್ನೂ ಓದಿ: Ram Mandir: ಅಯೋಧ್ಯೆ ರಾಮಮಂದಿರಕ್ಕೆ 24 ಅರ್ಚಕರು – ಇಬ್ಬರು SC, ಒಬ್ಬರು OBC ವರ್ಗದವರು ಆಯ್ಕೆ

ಬಾಲರಾಮನ ಆಯ್ಕೆಗೆ ಮಾನದಂಡ ಏನು?
ವಿಗ್ರಹ ಕಡೆಯಲು ಬಳಸಿದ ಶಿಲೆಯ ಗುಣಮಟ್ಟ, ರಾಮನ ಬಾಲ್ಯದ ನೋಟ, ವಿಗ್ರಹಕ್ಕೆ ಇರುವ ಸೌಂದರ್ಯ, ಆಕರ್ಷಣೆ, ವಿಗ್ರಹಕ್ಕೆ ಇರುವ ದೈವತ್ವದ ಕಳೆ, ಭಾವ, ವಿಗ್ರಹದ ರಚನಾತ್ಮಕ ಸ್ವರೂಪ, ಕೆತ್ತನೆಯ ಗುಣಮಟ್ಟ ಎಲ್ಲವನ್ನು ಪರಿಗಣಿಸಲಾಗುತ್ತದೆ.

ಬಾಲರಾಮನ ಶಿಲಾ ವಿಶೇಷತೆ ಏನು?
ಮೈಸೂರಿನ ಕೃಷ್ಣಶಿಲೆಯಲ್ಲಿ ಬಾಲರಾಮನ ಮೂರ್ತಿ ಕೆತ್ತಲಾಗಿದ್ದು ಹಾರೋಹಳ್ಳಿಯ ರಾಮ್‌ದಾಸ್ ಎಂಬವರ ಜಮೀನಲ್ಲಿ ಈ ಶಿಲೆ ಪತ್ತೆಯಾಗಿತ್ತು. ಈ ಜಮೀನನ್ನು ಶ್ರೀನಿವಾಸ್ ಎಂಬವರು ಗುತ್ತಿಗೆ ಪಡೆದಿದ್ದರು. ಗುತ್ತಿಗೆದಾರ ಶ್ರೀನಿವಾಸ್ ಅವರನ್ನು ಸುರೇಂದ್ರ ವಿಶ್ವಕರ್ಮ ಸಂಪರ್ಕಿಸಿದ್ದರು. ಇದನ್ನೂ ಓದಿ: Ayodhya Ram Mandir – ಶ್ರೀರಾಮಲಲ್ಲಾ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರು

ಮಾನಯ್ಯ ಬಡಿಗೇರ್ ಮೂಲಕ ಕೃಷ್ಣಶಿಲೆಯ ಪರೀಕ್ಷೆ ಮಾಡಿ ಅಯೋಧ್ಯೆ ಗುರುಗಳ ಸಮ್ಮುಖದಲ್ಲಿ ಮೂರ್ತಿ ಶಿಲೆಯನ್ನು ಅಂತಿಮಗೊಳಿಸಲಾಗಿತ್ತು. 19 ಟನ್ ತೂಕ, 9.8 ಅಡಿ ಉದ್ದದ ಶಿಲೆ ಅಯೋಧ್ಯೆಗೆ ರವಾನಿಸಲಾಗಿತ್ತು. ಶಿಲೆ ಕಳುಹಿಸಿದ ನಂತರ ಪ್ರಚಾರ ಪಡೆಯಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಶಿಲೆ ತೆಗೆದ ಸ್ಥಳವನ್ನು ಮಣ್ಣಿನಿಂದ ಮುಚ್ಚಿ ಭೂಮಿ ಸಮತಟ್ಟು ಮಾಡಲಾಗಿದೆ.

TAGGED:arun yogirajAyodhyaAyodhya Ram MandirRam Lalla IdolsRam MandirRam Mandir Trustಅರುಣ್‌ ಯೋಗಿರಾಜ್‌ರಾಮ ಮಂದಿರರಾಮಮಂದಿರ ಟ್ರಸ್ಟ್‌
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Commercial LPG Cylinder 19kg
Latest

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 993 ರೂ. ಏರಿಕೆ

Public TV
By Public TV
16 minutes ago
Acres of banana crop destroyed due to unseasonal rains in Hassan
Districts

ಅಕಾಲಿಕ ಮಳೆಗೆ ಎಕರೆಗಟ್ಟಲೆ ಬಾಳೆ ಬೆಳೆ ನಾಶ – ರೈತರ ಕಣ್ಣೀರು

Public TV
By Public TV
18 minutes ago
West Bengal Election mamata banerjee late night high drama election commission says strong room not open
Latest

ಕೋಲ್ಕತ್ತಾದಲ್ಲಿ ತಡರಾತ್ರಿ ಮಮತಾ ಹೈಡ್ರಾಮಾ – ಸ್ಟ್ರಾಂಗ್ ರೂಮ್‌ ತೆರೆದಿಲ್ಲ ಎಂದ ಆಯೋಗ

Public TV
By Public TV
22 minutes ago
Love
Latest

ನಿನಗಾಗಿ ಕಾಯ್ದಿರಿಸಿದ ಹೃದಯವಿದು ಅಂತ ನೀನ್ಯಾಕೆ ಹೇಳ್ತಿಲ್ಲ?

Public TV
By Public TV
48 minutes ago
TUMBAIL 00000 00000
Latest

ಇಂದಿನಿಂದ ದೇಶದಲ್ಲಿ ಹೊಸ ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿ – ಏನಿದು ಹೊಸ ರೂಲ್ಸ್‌?

Public TV
By Public TV
1 hour ago
RCB vs GT
Cricket

ಕೈಕೊಟ್ಟ ಬ್ಯಾಟರ್ಸ್‌, ಆರ್‌ಸಿಬಿಗೆ ಹೀನಾಯ ಸೋಲು – ಗುಜರಾತ್‌ಗೆ 4 ವಿಕೆಟ್‌ಗಳ ಅಮೋಘ ಜಯ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?