ಕಪ್ ಗೆಲ್ಲಲು ಲಕ್ಕಿ ಕಲರ್ ಆದ ಹಳದಿ ಜೆರ್ಸಿ

Public TV
1 Min Read
yellow jersy

ನವದೆಹಲಿ: ಕ್ರಿಕೆಟ್‍ನಲ್ಲಿ ಸೋಲು ಗೆಲುವು ಆಟಗಾರರ ಆಟದ ಮೇಲೆ ನಿಂತಿರುತ್ತದೆ. ಇದರ ಜೊತೆ ಕೆಲವೊಂದು ಬಾರಿ ಅದೃಷ್ಟ ಕೈಹಿಡಿದರೆ ಮಾತ್ರ ಗೆಲುವು ಸಿಗುವಂತಹ ನಿದರ್ಶನಗಳು ಸಾಕಷ್ಟು ಬಾರಿ ಕಾಣಸಿಕ್ಕಿದೆ. ಈ ವರ್ಷ ಪ್ರತಿಷ್ಠಿತ ಟೂರ್ನಿಗಳಲ್ಲಿ ಹಳದಿ ಜೆರ್ಸಿ ಧರಿಸಿದ ತಂಡಗಳಿಗೆ ಟ್ರೋಫಿ ಗೆಲ್ಲುವ ಅದೃಷ್ಟ ಒಲಿದು ಬಂದಿದೆ.

FE3RPrtVUAI3ObA

ಇದಕ್ಕೆ ಸೂಕ್ತ ನಿದರ್ಶನವೆಂಬಂತೆ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಹಳದಿ ಜೆರ್ಸಿ ಧರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆದರೆ, ಟಿ20 ವಿಶ್ವಕಪ್‍ನಲ್ಲಿ ಯೆಲ್ಲೋ ಜೆರ್ಸಿ ಧರಿಸಿದ್ದ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಗೆದ್ದಿತ್ತು. ಇದೀಗ ಈ ಸರದಿಗೆ ಇನ್ನೊಂದು ಸೇರ್ಪಡೆ ಎಂಬಂತೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ವಿಜೇತ ತಂಡ ತಮಿಳುನಾಡು ಕೂಡ ಹಳದಿ ಬಣ್ಣದ ಜೆರ್ಸಿ ಧರಿಸಿತ್ತು. ಈ ತಂಡ ಕೂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದನ್ನೂ ಓದಿ: ಕೊನೆಯ ಎಸೆತದಲ್ಲಿ ಸಿಕ್ಸರ್‌, ತಮಿಳುನಾಡಿಗೆ ಟ್ರೋಫಿ – ಕರ್ನಾಟಕಕ್ಕೆ ವಿರೋಚಿತ ಸೋಲು

CHENAISUPER KINGS

ಈ ಮೂರು ತಂಡಗಳು ಟ್ರೋಫಿ ಗೆದ್ದ ಬಳಿಕ ಹಳದಿ ಜೆರ್ಸಿ ಅದೃಷ್ಟದ ಬಗ್ಗೆ ಸುದ್ದಿಯಾಗುತ್ತಿದ್ದು, ಈ ಮೂರು ತಂಡಗಳು ಕೂಡ ಟಿ20 ಮಾದರಿಯಲ್ಲಿ ಹಳದಿ ಜೆರ್ಸಿ ತೊಟ್ಟ ತಂಡವಾಗಿ ಕಣಕ್ಕಿಳಿದು ಟ್ರೋಫಿ ಗೆದ್ದಿರುವುದು ವಿಶೇಷ. ಅದರಲ್ಲೂ ತಮಿಳುನಾಡು ತಂಡ 2021ರಲ್ಲಿ ಹಳದಿ ಜೆರ್ಸಿಯಲ್ಲಿ ಎರಡು ಬಾರಿ ಚಾಂಪಿಯನ್ ಆಗಿದೆ. ಈ ವರ್ಷದ ಆರಂಭದಲ್ಲಿ ಬರೋಡ ತಂಡವನ್ನು ಸೋಲಿಸಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿದ್ದ ತಮಿಳುನಾಡು ತಂಡ. ಇದೀಗ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಫೈನಲ್‍ನಲ್ಲಿ ಸೋಲಿಸಿ ಚಾಂಪಿಯನ್ ಆಗಿದೆ. ಇದನ್ನೂ ಓದಿ: ಚಹರ್ ಸಿಕ್ಸ್‌ಗೆ ಸೆಲ್ಯೂಟ್ ಹೊಡೆದ ರೋಹಿತ್

australiya

ಹಳದಿ ಬಣ್ಣದ ಪರ ಒಲವು ಇರುವ ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಳದಿ ಬಣ್ಣದ ಬಗ್ಗೆ ಮಾತನಾಡುತ್ತಿದ್ದರೆ ಉಳಿದವರು ಆಟದಲ್ಲಿ ಅದೃಷ್ಟ ಒಂದೇ ಮುಖ್ಯ ಅಲ್ಲ. ಆಟಗಾರರು ಚೆನ್ನಾಗಿ ಆಡಿದರೆ ಪಂದ್ಯ ಗೆಲ್ಲಬಹುದು ಎಂದು ಪ್ರತ್ಯುತ್ತರ ನೀಡುತ್ತಿದ್ದಾರೆ. ಇದನ್ನೂ ಓದಿ: ಸೂಪರ್ ಫೀಲ್ಡಿಂಗ್, ಕೀಪಿಂಗ್ – ನಾಯಿಗೆ ಹೆಸರು ಕೊಡಿ ಎಂದ ಸಚಿನ್

Share This Article
Leave a Comment

Leave a Reply

Your email address will not be published. Required fields are marked *