ಉತ್ತರ ಕನ್ನಡ: ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಅನಾಹುತಗಳನ್ನ ಸೃಷ್ಟಿ ಮಾಡುತ್ತಿದೆ. ಜೊತೆಗೆ ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧವಾದ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅರಬ್ಬಿ ಸಮುದ್ರ (Arabian Sea) ತೀರ ಭಾಗದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಒಂದೆಡೆ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಮತ್ತೊಂದೆಡೆ ಸಮುದ್ರದಲ್ಲಿ ಅಲೆಗಳ ಅಬ್ಬರ ಇರುವ ಪರಿಣಾಮ ಬಂದರಿನಲ್ಲಿ ಮೀನುಗಾರಿಕಾ ಬೋಟುಗಳಿಗೆ ಲಂಗರು ಹಾಕಲಾಗಿದೆ. ಕರಾವಳಿ ಭಾಗದಲ್ಲಿ ಕಳೆದ ಎರಡು ದಿನದಿಂದ ಅಬ್ಬರದ ಮಳೆ ಸುರಿಯುತ್ತಿದೆ. ಹೆಚ್ಚಿನ ಮಳೆಯಾಗುವ ಸಾಧ್ಯತೆಯಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ: ಅಡ್ವಾಣಿ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದ ಮೋದಿ
ಆರು ದಿನಗಳ ಕಾಲ ಉತ್ತಮ ಮಳೆಯಾಗುವ ಸೂಚನೆ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಸಹ ಸಮುದ್ರ ತೀರ ಭಾಗದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ. ಮೀನುಗಾರಿಕೆಗೂ ಸಹ ಎರಡು ತಿಂಗಳು ನಿಷೇಧ ಹೇರಲಾಗಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜಲಪಾತಗಳಲ್ಲಿ ಜೀವಕಳೆ ಬಂದಿದೆ. ಮಾಗೋಡು, ವಿಭೂತಿ ಜಲಪಾತ, ಬಂಗಾರದ ಕುಸುಮ ಜಲಪಾತಗಳಲ್ಲಿ ನೀರು ಹರಿದುಬರುತ್ತಿದ್ದು, ಇದೀಗ ಕಾರವಳಿ ತೀರಕ್ಕೆ ಬರುವ ಪ್ರವಾಸಿಗರನ್ನು ಜಲಪಾತದತ್ತ ಸೆಳೆಯುತ್ತಿದೆ. ನೂರಾರು ಪ್ರವಾಸಿಗರು ಕಡಲ ತೀರದಲ್ಲಿ ನಿರ್ಬಂಧವಿರುವ ಕಾರಣ ಜಿಲ್ಲೆಯ ಜಲಪಾತದತ್ತ ಮುಖ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಾಗ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಆದರೆ ಈ ಬಾರಿ ಮಳೆಯಿಂದಾಗಿ ಜಲಸಾಹಸ ಕ್ರೀಡೆಗಳಿಗೆ ನಿಷೇಧ ಹೇರಲಾಗಿದೆ. ಹೀಗಾಗಿ ವೀಕೆಂಡ್, ರಜಾದಿನಗಳ ಮೋಜು ಮಸ್ತಿಗೆ ಬರುವವರು ಸಮುದ್ರ ತೀರ ಬಿಟ್ಟು ಜಲಪಾತದತ್ತ ಮುಖಮಾಡಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವುದರಿಂದ ಸದ್ಯದ ಮಟ್ಟಿಗೆ ಜಲಪಾತ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಪ್ರಾರಂಭವಾಗಬೇಕಿದೆ. ಇದನ್ನೂ ಓದಿ: ಪೆನ್‌ಡ್ರೈವ್ ಹಂಚಿದವರು ತನಿಖಾಧಿಕಾರಿ ಎದುರೇ ಸಂಭ್ರಮಾಚರಣೆ ಮಾಡ್ತಾರೆ: ವಕೀಲ ಗೋಪಾಲಗೌಡ ಆರೋಪ