ಬೆಂಗಳೂರು: ಇಂದು ಬೆಳಗ್ಗೆ ವಿಪಕ್ಷ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ನಾನು ಹೆಲಿಕಾಪ್ಟಾರ್ ದುರ್ಬಳಕೆ ಮಾಡುತ್ತಿಲ್ಲ ಅಂತಾ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ಇಳಕಲ್‍ನಲ್ಲಿ ಮಹಾಂತ ಶಿವಯೋಗಿಗಳಿಗೆ ಅಂತಿಮ ಗೌರವ ಸಲ್ಲಿಸಲು ತೆರಳಿದಾಗ, ನಾನು ಹೆಲಿಕಾಪ್ಟರ್ ಬಳಸಿದ್ದೆ. ನನ್ನ ಪ್ರವಾಸದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈಗಾಗಲೇ ಮಾಹಿತಿ ನೀಡಿದ್ದೇನೆ. ಈ ವೇಳೆ ಕಾಪ್ಟರ್ ಬಳಸಿದ್ದೇನೆ ಹೊರತು ದುಂದುವೆಚ್ಚ ಮಾಡಿಲ್ಲ. ಬೇಕಾದ್ರೆ ನನ್ನ ಪ್ರವಾಸದ ವೆಚ್ಚ ಭರಿಸಲು ನಾನು ಸಿದ್ಧನಿದ್ದೇನೆ ಎಂದು ಯಡಿಯೂರಪ್ಪರವರು ಸಿಎಂಗೆ ಪತ್ರದಲ್ಲಿ ತಿಳಿಸಿದ್ದಾರೆ.
Advertisement
Advertisement
ಯಡಿಯೂರಪ್ಪರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಯಡಿಯೂರಪ್ಪರವರ ಪತ್ರ ನನಗೆ ತಲುಪಿಲ್ಲ. ಅನಾವಶ್ಯಕವಾಗಿ ಹೆಲಿಕಾಪ್ಟರ್ ಬಳಸೋ ಮೂಲಕ ದುಂದು ವೆಚ್ಚ ಮಾಡಬೇಡಿ ಎಂಬ ಹೇಳಿಕೆಯನ್ನು ನಾನು ಯಡಿಯೂರಪ್ಪ ಅವರನ್ನು ಟೀಕೆ ಮಾಡೋದಕ್ಕೆ ಹೇಳಿಲ್ಲ. ಹೆಲಿಕಾಪ್ಟರ್ ಬಳಕೆಗೆ ಹೆಚ್ಚು ದುಂದು ವೆಚ್ಚ ಆಗ್ತಿದೆ. ಅದಕ್ಕೆ ನಾನು ದೆಹಲಿಗೆ ವಿಶೇಷ ವಿಮಾನದಲ್ಲಿ ಹೋಗಿಲ್ಲ. ಒಂದು ವೇಳೆ ನಾನು ದೆಹಲಿಗೆ ವಿಶೇಷ ವಿಮಾನದಲ್ಲಿ 40 ಲಕ್ಷ ರೂ. ಖರ್ಚು ಆಗುತ್ತಿತ್ತು. ದುಂದು ವೆಚ್ಚ ಬೇಡ ಅಂತ ಹೇಳಿದ್ದೆ ಅಷ್ಟೇ ಅಂತ ಸ್ಪಷ್ಟಪಡಿಸಿದ್ರು.
Advertisement
ಹೆಲಿಕಾಪ್ಟರ್ ವೆಚ್ಚ ನಾನೇ ಭರಿಸುತ್ತೇನೆ ಅನ್ನೋ ಪತ್ರಕ್ಕೆ ತಿರುಗೇಟು ನೀಡಿದ ಸಿಎಂ, ಯಡಿಯೂರಪ್ಪರವರ ಕೈಯಲ್ಲಿ ಹಣ ಕಟ್ಟಿಕೊಳ್ಳುವಷ್ಟು ಸರ್ಕಾರಕ್ಕೆ ದರಿದ್ರ ಸ್ಥಿತಿಗೆ ಬಂದಿಲ್ಲ ಅಂತ ತಿರುಗೇಟು ನೀಡಿದ್ರು.