ಮೈಸೂರು: ಅಂಬೇಡ್ಕರ್ ಅವರ ತತ್ವಗಳನ್ನು ಒಪ್ಪುವ ಯಾರೊಬ್ಬರೂ ಹೇಳಿಕೆಯನ್ನ ತಪ್ಪು ಅಂತ ಹೇಳೋದಿಲ್ಲ ಎಂದು ಹೇಳುವ ಮೂಲಕ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ಹಿಂದೂ ರಾಷ್ಟ್ರವಾದ್ರೆ (Hindu Nation) ದೇಶಕ್ಕೆ ಅಪಾಯಕಾರಿ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಮಭಕ್ತರಿಗೆ ಮರೆಯಲಾಗದ ಗಿಫ್ಟ್ – ಉಚಿತ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆಗೆ ಮುಂದಾದ ಗುಜರಾತ್ ಕಲಾವಿದ]
Advertisement
Advertisement
ಅಂಬೇಡ್ಕರ್ ಅವರ ತತ್ವಗಳನ್ನ ಒಪ್ಪುವ ಯಾರೊಬ್ಬರೂ ಹೇಳಿಕೆಯನ್ನ ತಪ್ಪು ಎಂದು ಹೇಳುವುದಿಲ್ಲ. ಅಂಬೇಡ್ಕರ್ ಅವರು ಹೇಳಿರುವುದನ್ನೇ ನಾನು ಪುನರುಚ್ಚರಿಸಿದ್ದೇನೆ ಅಷ್ಟೇ. ಈ ದೇಶ ಜ್ಯಾತ್ಯಾತೀತವಾಗಿರಬೇಕು, ಯಾವುದೇ ಒಂದು ಧರ್ಮದ ವಿಚಾರವಾಗಿ ದೇಶ ಇರಬಾರದು. ಅದು ಯಾವತ್ತಿದ್ದರು ಅಪಾಯಕಾರಿ. ಧರ್ಮದ ಹೆಸರಿನಲ್ಲಿರುವ ಪಾಕಿಸ್ತಾನ ಮತ್ತು ಕೆಲವು ದೇಶಗಳ ಸ್ಥಿತಿ ಏನಾಗಿದೆ? ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕಾರಣ ನಾನು ಹಿಂದೂ ರಾಷ್ಟ್ರವಾಗುವುದನ್ನು ಅಪಾಯಕಾರಿ ಎಂದಿದ್ದೇನೆ. ನನ್ನ ಮಾತಿಗೆ ಈಗಲೂ ಬದ್ಧ. ನಾನು ಹೇಳಿರುವುದರಲ್ಲಿ ಯಾವುದು ತಪ್ಪು ಇಲ್ಲ ಎಂದಿದ್ದಾರೆ.
Advertisement
Advertisement
ಧರ್ಮದ ಕೆಲಸ ಸರ್ಕಾರ ಮಾಡುವುದಲ್ಲ. ಧರ್ಮದ ವಿಚಾರದಲ್ಲಿ ಕೆಲಸ ಮಾಡುವುದಕ್ಕೆ ಬೇರೆ ವ್ಯವಸ್ಥೆಗಳಿವೆ. ಇದು ಸರ್ಕಾರದ ಕೆಲಸವಾಗಬಾರದು. ಬಿಜೆಪಿ ಅಭಿವೃದ್ಧಿಯನ್ನೇ ಮಾಡದೇ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಏನನ್ನು ಅಭಿವೃದ್ಧಿ ಮಾಡದ ಬಿಜೆಪಿ ಧರ್ಮದ ವಿಚಾರವನ್ನ ಮುಂದೆ ಬಿಟ್ಟು ವಿಚಾರಗಳನ್ನ ಮರೆ ಮಾಚುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೆಟ್ರೋ ರೈಲು ಬಂದಾಗ ಏಕಾಏಕಿ ಹಳಿಗೆ ಧುಮುಕಿ ಆತ್ಮಹತ್ಯೆಗೆ ಯತ್ನ- ICUವಿನಲ್ಲಿ ಚಿಕಿತ್ಸೆ
ಪ್ರತಾಪ ಸಿಂಹ ತಮ್ಮನ್ನ ತಾವು ನ್ಯಾಷನಲ್ ಲೀಡರ್ ಅಂದುಕೊಂಡಿದ್ದಾರೆ. ಸಿದ್ದರಾಮಯ್ಯನವರು ಪ್ರತಾಪ ಸಿಂಹರನ್ನ ಟಾರ್ಗೆಟ್ ಮಾಡಲು ಅವರೇನು ನ್ಯಾಷನಲ್ ಲೀಡರ್ ಹಾ? ತಾವು ನ್ಯಾಷನಲ್ ಲೀಡರ್ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ವಿರುದ್ದ ಹೇಳಿಕೆ ಕೊಡುತ್ತಿದ್ದಾರೆ ಅಷ್ಟೆ. ನಮ್ಮ ತಂದೆ ಯಾವತ್ತೂ ಟಾರ್ಗೆಟ್ ರಾಜಕಾರಣ ಮಾಡಿಲ್ಲ. ತಮಗೆ ರಾಜಕೀಯವಾಗಿ ಅನೇಕ ಬಾರಿ ಅನ್ಯಾಯವಾಗಿದ್ದರೂ ಅನ್ಯಾಯ ಮಾಡಿದವರ ವಿರುದ್ಧ ಅವರು ರಾಜಕಾರಣ ಮಾಡಲಿಲ್ಲ. ಹೀಗಿರುವಾಗ ಪ್ರತಾಪಸಿಂಹನನ್ನ ಯಾಕೆ ಟಾರ್ಗೆಟ್ ಮಾಡುತ್ತಾರೆ? ಅವರ ಸಹೋದರ ತಪ್ಪು ಮಾಡಿದ್ದಾರೆ, ಅದಕ್ಕಾಗಿ ಕೇಸ್ ಆಗಿದೆ ಅಷ್ಟೇ ಎಂದು ತಿಳಿಸಿದ್ದಾರೆ.