ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಟಿ ಮಣಿಯರ ಸಾಲಿನಲ್ಲಿ ರಾಧಿಕಾ ಪಂಡಿತ್ ಕೂಡಾ ಒಬ್ಬರಾಗಿದ್ದಾರೆ. ಫ್ಯಾಮಿಲಿ, ಪ್ರವಾಸ, ಹಬ್ಬದ ಸಂಬ್ರಮದ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಈಗ ರಾಧಿಕಾ ಪಂಡಿತ್ ಹೊಸ ಫೋಟೋ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.
- Advertisement 2
ಐರಾ, ಮತ್ತು ಯಥರ್ವ್ ಸ್ವಿಮ್ಮಿಂಗ್ಪೂಲ್ನಲ್ಲಿ ಸನ್ಗ್ಲಾಸ್ ಹಾಕಿ ಆಟ ಆಡುತ್ತಿದ್ದಾರೆ. ಇಬ್ಬರೂ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳ ಖುಷಿಯಾಗಿದ್ದಾರೆ. ಅಲ್ಲದೆ ಐರಾ ಮತ್ತು ಯಥರ್ವ್ ಕ್ಯೂಟ್ನೆಸ್ ಬಣ್ಣಿಸಿದ್ದಾರೆ. ಕೆಲವರು ಈ ಫೋಟೋ ತೆಗೆದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಯಥರ್ವ್ ಸನ್ಗ್ಲಾಸ್ ಜೂಮ್ ಮಾಡಿ ನೋಡಿದ್ದಾರೆ. ಈ ಬಗ್ಗೆ ಕಮೆಂಟ್ ಕೂಡ ಮಾಡಿದ್ದಾರೆ.
- Advertisement 3
- Advertisement 4
ರಾಧಿಕಾ ಪಂಡಿತ್ ಹಾಗೂ ಯಶ್ ಇತ್ತೀಚೆಗೆ ದುಬೈಗೆ ತೆರಳಿದ್ದರು. ಅಲ್ಲಿ ಸಮಯ ಕಳೆಯುತ್ತಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ರಾಧಿಕಾ ಪಂಡಿತ್ ಅವರು ಹೊಸ ಹೇರ್ ಸ್ಟೈಲ್ನಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಮಿಂಚಿದ್ದರು. ಅಭಿಮಾನಿಗಳು ಮತ್ತೆ ಸಿನಿಮಾ ಮಾಡಿ ಎನ್ನುವ ಬೇಡಿಕೆಯನ್ನು ಇಟ್ಟಿದ್ದರು. ಇದನ್ನೂ ಓದಿ: ಕನ್ನೇರಿ ಚಿತ್ರದ ಮನಮುಟ್ಟುವ ಹಾಡು ಬಿಡುಗಡೆ ಮಾಡಿದ ಖ್ಯಾತ ನಟಿ ಶ್ರುತಿ
View this post on Instagram
ರಾಧಿಕಾ ಪಂಡಿತ್ ಸದ್ಯ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆ ಬಗ್ಗೆ ಅವರ ಅಭಿಮಾನಿಗಳಿಗೆ ಬೇಸರ ಇದ್ದೇ ಇದೆ. ಆದರೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರೋಕೆ ಮಕ್ಕಳ ಸಾಕಷ್ಟು ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದನ್ನೂ ಓದಿ: ಕಾಡಿನ ಥೀಮ್ ನಡುವೆ ರಾಯನ್ ಬರ್ತ್ಡೇ ಸೆಲೆಬ್ರೆಶನ್ – ಫೋಟೋ, ವೀಡಿಯೋ ವೈರಲ್