ಅಬುದಾಬಿ: ಪಾಕಿಸ್ತಾನದ ಲೆಗ್ ಸ್ಪಿನರ್ ಯಾಸಿರ್ ಶಾ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್ ಗಳಲ್ಲಿ 200 ವಿಕೆಟ್ ಪಡೆದ ದಾಖಲೆ ಮಾಡಿದ್ದು, 82 ವರ್ಷಗಳ ಹಿಂದೆ ಕ್ಲಾರಿ ಗ್ರಿಮಿಟ್ ನಿರ್ಮಿಸಿದ್ದ ದಾಖಲೆಯನ್ನು ಮುರಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೂರ್ನಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಯಾಸಿರ್ ಈ ಸಾಧನೆ ಮಾಡುವ ಮೂಲಕ 33 ಪಂದ್ಯಗಳಲ್ಲಿ 200 ವಿಕೆಟ್ ಪಡೆದ ಹೆಗ್ಗಳಿಕೆ ಪಡೆದರು. ಈ ಹಿಂದೆ 1936 ರಲ್ಲಿ ಆಸ್ಟೇಲಿಯಾದ ಸ್ಲಿನ್ನರ್ ಕ್ಲಾರಿ ಗ್ರಿಮಿಟ್ 36 ಟೆಸ್ಟ್ ಪಂದ್ಯಗಳಲ್ಲಿ 200 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ವಿಲಿಯಮ್ ಸ್ಯಾಮರ್ ವಿಲ್ಲಿ ವಿಕೆಟ್ ಪಡೆಯುವ 200 ವಿಕೆಟ್ ಸಾಧನೆ ಮಾಡಿದರು. ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದ ಯಾಸಿರ್ ಶಾ ಎರಡನೇ ಇನ್ನಿಂಗ್ಸ್ ನಲ್ಲಿ ಮೂರು ವಿಕೆಟ್ ಪಡೆದಿದ್ದಾರೆ.
Advertisement
Yasir Shah – 33*
Clarrie Grimmett – 36
Ravichandran Ashwin – 37
Dennis Lillee – 38
Waqar Younis – 38
ICYMI, @Shah64Y smashed the record for the fewest Tests needed to reach the 200 wicket milestone! ????
Read more ➡️ https://t.co/uUsrJu66kH pic.twitter.com/lkVFBX1NYr
— ICC (@ICC) December 6, 2018
Advertisement
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 274 ರನ್ ಅಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಪಾಕ್ 348 ರನ್ ಗಳಿಸಿತು. ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಆರಂಭಿಸಿದ ನ್ಯೂಜಿಲೆಂಡ್ 7 ವಿಕೆಟ್ ನಷ್ಟಕ್ಕೆ 353 ರನ್ ಸಿಡಿಸಿ ಡಿಕ್ಲೇರ್ ನೀಡಿದೆ. 280 ರನ್ ಗುರಿ ಬೆನ್ನತ್ತಿದ ಪಾಕ್ ತಂಡ 2ನೇ ಇನ್ನಿಂಗ್ಸ್ ನಲ್ಲಿ 55 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿ ಸೋಲಿನ ಸುಳಿಯಲ್ಲಿ ಸಿಲುಕಿದೆ. ಪಂದ್ಯದ ಅಂತಿಮ ದಿನವಾದ ಇಂದು ಬ್ಯಾಟಿಂಗ್ ನಡೆಸುತ್ತಿರುವ ಪಾಕ್ ಗೆಲುವಿಗೆ 58 ಓವರ್ ಗಳಲ್ಲಿ 225 ರನ್ ಗಳಿಸಬೇಕಿದೆ.
Advertisement
Quickest by a spinner to reach 200 Test wickets:
by matches
33 Yasir Shah
36 Clarrie Grimmett
37 R Ashwin
—
by balls
10248 R Ashwin
10497 Stuart MacGill
10900 Yasir Shah#PAKvNZ
— Mohandas Menon (@mohanstatsman) December 6, 2018
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv